ಕದಳೀಯ ಬನದೊಳಗಿರುವ ಲಿಂಗವ
ಅರಸಿದರೆ ಕಾಣಬಾರದು.
ನೋಡಿದರೆ ನೋಟಕ್ಕಿಲ್ಲ.
ಹಿಡಿದರೆ ಹಸ್ತಕ್ಕಿಲ್ಲ.
ನೆನೆದರೆ ಮನಕ್ಕಗೋಚರ.
ಇಂತು ಮಹಾಘನವ ಹೃದಯಲ್ಲಿ
ನೆಲೆಗೊಳಿಸಿದ ಶರಣನ ಕಂಗಳಲ್ಲಿ
ಹೆರಿಹಿಂಗದೆ ನೋಡಿ,
ಅವರಂಘ್ರಿಯಲ್ಲಿ ಐಕ್ಯವಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಕದಳೀಯ ಬನದೊಳಗಿರುವ ಲಿಂಗವ
ಅರಸಿದರೆ ಕಾಣಬಾರದು.
ನೋಡಿದರೆ ನೋಟಕ್ಕಿಲ್ಲ.
ಹಿಡಿದರೆ ಹಸ್ತಕ್ಕಿಲ್ಲ.
ನೆನೆದರೆ ಮನಕ್ಕಗೋಚರ.
ಇಂತು ಮಹಾಘನವ ಹೃದಯಲ್ಲಿ
ನೆಲೆಗೊಳಿಸಿದ ಶರಣನ ಕಂಗಳಲ್ಲಿ
ಹೆರಿಹಿಂಗದೆ ನೋಡಿ,
ಅವರಂಘ್ರಿಯಲ್ಲಿ ಐಕ್ಯವಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****