
ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ. ಸತ್ಯಶರಣರ ಪಾದವಿಡಿದೆ. ಆ ಶರಣರ ಪಾದವಿಡಿದು ಗುರುವ ಕಂಡೆ. ಲಿಂಗವ ಕಂಡೆ. ಜಂಗಮವ ಕಂಡೆ. ಪ್ರಸಾದವ ಕಂಡೆ. ಪಾದೋದಕವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು. ಕಂಗಳ ಮುಂದಣ ...
ದಿನ ನಿತ್ಯದ ತಿರುಗುವ ಪುಟಗಳಲ್ಲಿ ಎಲ್ಲ ಗೊತ್ತಂತಿದ್ದರೂ ಅದೇಕೋ ದಿನನಿತ್ಯದ ಬದುಕು ಹೊಸದು, ಬೇರೆ ಬೇರೆ ಅನುಭವ ಎನ್ನಲೇ? ವಯಸ್ಸೆನ್ನಲೇ? ಎಲ್ಲ ಅರ್ಥಗಳಲ್ಲೂ ಇದೆಲ್ಲ ಒಂದೆ ಇಡುವ ಪ್ರತಿ ಹೆಜ್ಜೆ ಪ್ರತಿ ಉಸುರಿಗೆ ನೆರಳು ಬೆಳಕಿದೆ ಸಮುದ್ರದಾಳದಷ್...
ಕ್ರಾಂತಿ ಕಂದ ನಿನ್ನ ಅಂದ ಕಾಣಲೆಂದ ಕವಿಗೆ ಬಂಧ ಮುಕ್ತಿ ನೀಡು ಬಾ ನಗೆಗಡಲಲಿ ನಲಿದು ಬಾ ಸುಳಿಯೊಡಲಲಿ ಸುಳಿದು ಬಾ ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ || ಅಂಧಕಾರದಲ್ಲಿ ಬಂದು ಮುಗಿಲಮಡಿಲಿನಲ್ಲಿ ನಿಂದು ತಂಬೆಳಕನು ತಂದು ತಂದು ಎಳೆಯೆಳೆಯಲಿ ಹರಡುವಂ...
ಪ್ರಿಯ ಸಖಿ, ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ. ದೊಡ್ಡವರು ಸಣ್ಣವರಾಗುವುದು ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ ತಮೆಗೆಲ್ಲ ಗೊತ್ತಿದೆ ಎ...
ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು! ಅಜ್ಜಿ ಮಡಿಯಲಿ ಬಂದರೊ ಟಾಮಿ ಓಡಿ ಮುಟ್ಟು...
ಎಲ್ಲರೂ ಅವನನ್ನು ಸುತ್ತೋದ್ರಿಂದ್ಲೇ ಕಣ್ರೀ ಅವನಿಗಷ್ಟು ಪೊಗರು. ನಾನು ಆ ಕೆಲ್ಸ ಮಾಡ್ದೇ ಇದ್ದದ್ದರಿಂದಲೇ ನೋಡ್ರಿ ಉಳೀದಿರೋದು ನನಗೂ ಅಷ್ಟೋ ಇಷ್ಟೋ ಹೆಸರು. *****...
ತಿಮ್ಮ ಬೋರ ನಂಜ ಕೂಡಿ ರಾಗಿ ಹಿಟ್ಟು ಕಲಸುವಾಗ ಬಾಯ್ಗೆ ಬಾಯಿ ಮಾತು ಎದ್ದು ಅವರನ್ನವರು ಮರೆತು ಕುಡಿದು ನಂಜ ಕುಪ್ಪಿ ಎತ್ತಿದ- ಬೋರ ಪಾಲು ಕೇಳಿದ! ಹಿಂದಿನಿರುಳು ಬೇಟೆಯಲ್ಲಿ ಕೊಚ್ಚೆ ಹಾರ್ದ ಮೊಲದ ಕಾಲ ಹಿಡಿದು ತಿಮ್ಮ ಅಂತೆ ತಂದು ಮಾಂಸ ತುಂಡು ಮಾ...
ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ ಎನ...
ನಾ ಅಭಿಮಾನಿ ನಾ ಭಾಽಳ ಸ್ವಾಭಿಮಾನಿ ಯಾರಿಗೂ ಸೊಪ್ಪ ಹಾಕೋ ಮಗ ನಾ ಅಲ್ಲ, ಅಂತಿದ್ಯಲ್ಲೊ…..? ನಂದೂ ನಮ್ಮಪ್ಪಂದೂ ಮಾತ ಅಂದ್ರ ಯಾವನೂ ಅಡ್ಡ ಹಾಕಾಕಿಲ್ಲ ಮಗ, ಅಷ್ಟ ಅಲ್ಲೋಲೇಽ ಯಾವ ಮಿನಿಸ್ಟ್ರೂ ಹೇಳಿದ್ಹಂಗ ಕೇಳ್ತಾನ. ಯಾವ ಬಡ್ಡಿ ಮಕ್ಕಳದೇನಂ...
ಕಾಲನಾಗಗಳೊಡಲು ಜಗದ ಮನ ಎಂಬುದನು ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ ಎನುವ ಭರವಸೆಗೂಡಿ. ಮರುಳುಗೊಳಿಸುವ ಮಾಟ ಹುದುಗಿಸುತ ಒಳಗೆ ವಿಷ, ಹೊರಗೆ ಮಾಯೆಯ ಬೀರಿ ತ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













