ಅಂತರಂಗ ಬಹಿರಂಗ ಶುದ್ಧವಿಲ್ಲದೆ
ನುಡಿವರು, ಸಂತೆಯ ಸೂಳಿಯರಂತೆ.
ಅಂತರಂಗ ಬಹಿರಂಗವೆಂಬುದಿಲ್ಲ.
ನಮ್ಮ ಶಿವಶರಣರಿಗೆ
ಅಂತರಂಗವೆಲ್ಲ ಅರುಹಾಯಿತ್ತು.
ಬಹಿರಂಗವೆಲ್ಲ ಲಿಂಗವಾಯಿತ್ತು.
ಆ ಲಿಂಗದಲ್ಲಿ ನುಡಿದು,
ಲಿಂಗದಲ್ಲಿ ನಡೆದು,
ಲಿಂಗದಲ್ಲಿ ಮುಟ್ಟಿ,
ಲಿಂಗದಲ್ಲಿ ವಾಸಿಸಿ,
ಲಿಂಗದಲ್ಲಿ ಕೇಳಿ,
ಲಿಂಗವಾಗಿ ನೋಡಿ,
ಸರ್ವಾಂಗವು ಲಿಂಗವಾಗಿ,
ಆ ಲಿಂಗವ ನೋಡುವ
ಕಂಗಳಲ್ಲಿ ಐಕ್ಯ ಕಂಡ್ಯಾ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****