Home / ಕವನ / ಕವಿತೆ / ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ
ನೆಮ್ಮದಿಯು ಭೂತಳದ ದೇಶಗಳಿಗೆಲ್ಲ

ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ
ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ
ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ
ಆನಂದ ನಸುನಗುವ ವಸಂತನಂತೆ

ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ
ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ
ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ
ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ

ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ
ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ
ಮನೆ ಶಾಲೆ ಆರೋಗ್ಯವನುಕೂಲವೆಲ್ಲರಿಗೆ
ಸಂತಸದ ಜಗವಿರಲಿ ಎಲ್ಲೆಡೆಯಲಿ

ಸೋಮಾರಿ ಸಿರಿತನವು ಬರಿಹೊಟ್ಟೆ ಭಿಕ್ಷುಕರು
ಬೇಡವೈ ಎಲ್ಲರೂ ಸಮ ಕೆಲಸದಲ್ಲಿ
ಕಣ್ಣೀರ ಕರೆಬೇಡ ಅಂಜಿಕೆಯ ಪರಿಬೇಡ
ನಗುವುಕ್ಕಿ ಹರಿಯಲೀ ಎಲ್ಲರೆದೆಯಲ್ಲಿ

ಅಣುಶಕ್ತಿ ಭಯಬೇಡ ಸಿರಿರಾಷ್ಟ್ರ ಬಲಬೇಡ
ಯುದ್ಧ ರಾಕ್ಷಸನಿಗೋ ಸ್ಥಳವೆ ಬೇಡ
ಮರದ ಎಲೆಗಳ ರೀತಿ ಸೂರ್ಯಕಿರಣಗಳಂತೆ
ನಾವೆಲ್ಲ ದಿವ್ಯ ಮಾನವರು ನೋಡ

ನಿನ್ನೊಳಗಿನೊಳತಿರುಳು ಎಲ್ಲರೊಳಿತಿಗೆ ತುಡಿದು
ನಿನ್ನ ಜೀವವು ಎಲ್ಲ ಜೀವಗಳಿಗಾಗಿ
ನಿನ್ನ ದೇವರು ಎಲ್ಲ ಜನರಲ್ಲು ತುಂಬಿಹನು
ನಿನ್ನ ಪ್ರೀತಿಯು ಎಲ್ಲ ಮಾನವರಿಗಾಗಿ

ಅವನಿಗೋ ಅವಳಿಗೋ ಪ್ರತಿಯೊಬ್ಬ ವ್ಯಕ್ತಿಗೋ
ಸಹಬಾಳ್ವೆಯೇ ಬೆಳಕು ಅತ್ಯುತ್ತಮಾ
ಪಾಶ್ಚಾತ್ಯ ಪೌರಾತ್ಯ ಭೂಬಂಧುಗಳಿಗೆಲ್ಲ
ವಿಶ್ವ ಮಾನವ ಧರ್ಮ ಅತ್ಯುತ್ತಮ

ಸಸ್ಯ ಸಂತತಿಗೆಲ್ಲ ಪ್ರಾಣಿ ಪಕ್ಷಿಗಳಿಗೂ
ಗಿರಿಗಳಿಗೆ ವನಗಳಿಗೆ ಕಳಕಳದ ಹೊಳೆಗೆ
ನೆಲ ಜಲಕೆ ತಿರೆ ವಾಯು ಪಂಚಭೂತದ ಜಗಕೆ
ಚೈತನ್ಯ ನೆಮ್ಮದಿಯು ತುಂಬಿ ಬೆಳಗೆ

ಎಲ್ಲರಿಗೂ ನೆಮ್ಮದಿಯು ಎಲ್ಲೆಡೆಗು ನೆಮ್ಮದಿಯು
ಅಮರ ಶಾಂತಿಯ ದಿವ್ಯ ಭವ್ಯ ನೆಮ್ಮದಿಯು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...