ಅತ್ತ ಹಿಮಗಿರಿ ಕಂಡೆ ಸುತ್ತ ಸಾಗರ ಕಂಡೆ ನಿನ್ನ ಕಾಣದೆ ಹೋದೆ ವೀರಭದ್ರಾ ಜಾತಿ ಜಂಜಡದಲ್ಲಿ ಕೋತಿ ಕಾಳಗ ಕಂಡೆ ನಿನ್ನ ಅರಿಯದೆ ನಿಂದೆ ವಿಶ್ವರುದ್ರಾ ॥ ಚರ್ಮ ದೇಹವ ನಂಬಿ ಚೂರು ದೇವರ ನಂಬಿ ನೂರು ದಾರಿಯ ಹಿಡಿದೆ ವೀರಭದ್ರಾ ಅತ್ತ ಸಾವಿನ ಹಬ್ಬ ಇತ್ತ ನೋವಿನ ಕಬ್ಬ ಚಟದ ಚಟ್ಟಕೆ ಬಿದ್ದೆ ಅಗ್ನಿರುದ್ರಾ ॥ ಎಲ್ಲಿ ...

ಪ್ರಿಯ ಸಖಿ, ಅಲ್ಲಾಗಲಿ ಅಥವಾ ಇಲ್ಲಾಗಲಿ ಸಲ್ಲದೆನ್ನಬೇಡ ಒಳಿತು ಎಲ್ಲೂ ಒಂದೇ ನೋಡ ಸೆಣಸು ನಿಸು ಒಳ್ಮನಸು ಪತಾಕೆ ಬೀಳದಂತೆ ಜೋಕೆ ! ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡ...

“ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು ಐದು-ಮುಂದೇನು?” “ಐದು ಆದ್ಮೇಲೆ ಹೇಳ್ಬೇಕಾದ್ದು ಆರು ಏ...

ಸ್ನಾನಕ್ಕೇಂತ ಬಂದ ಚಂದ್ರ ಸಮುದ್ರ ಕನ್ಯೆಯ ಕೋಣೇಲಿ ಅಡಗಿದನೆಂಬ ಗುಮಾನಿ ಕೇಳಿ, ಬೆಳಗಿನ ಜಾವದಲ್ಲಿ ತುರ್ತಾಗಿ ಬಲೆ ಕೊಟ್ಟು ಬೆಸ್ತರನ್ನಟ್ಟಿದ ಭೂಮಿಗೆ ಸಿಕ್ಕದ್ದು ಏನು? ಬರೀ ಒಂದಿಷ್ಟು ಮೀನು. *****...

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ; ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ. ಹಾರಾರಿ ಲೋಕದಾ ಜನದೊಡೆಯ ರಾಮನಾ ಸೇವೆಯನು ಪೂಜೆಯನು ಧ್ಯಾನವನು ಸದಾ; ಧ್ಯಾನದಾ ಬೀಜವನು ಆ...

ಪೃಥ್ವಿಯನೆ ಆದಿಯ ಮಾಡಿ, ಅಪ್ಪುವಿನಲ್ಲಿ ಗೋಡೆಯನಿಕ್ಕಿ, ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ, ಅಗ್ನಿಯನೆ ಬೀಸಿ, ವಾಯುವನೆ ಬೀರಿ, ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲು ಕಟ್ಟಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ, ಒಡೆಯನಾಭರಣವ ಹಾರುತಿದ್ದೆನ...

ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು ಅದರುವ ತುಟಿಗಳು ಕಂಬನಿ ಕಣ್ಣುಗಳು ಕಾದಿವೆ ಜಾರುಗೊಡುವುದಿಲ್ಲ ...

ನೂರಐವತ್ತೈದು ವರುಷಗಳು ದಾಸ್ಯದಲೆ ಬಿದ್ದು ಭಾರತ ತನ್ನ ಆತ್ಮವನೆ ಮರೆತಿಹುದು ತನ್ನ ಶಕ್ತಿಯಲಿಂದು ಇನಿತಾದರೂ ಅದಕೆ ನಂಬುಗೆಯು ಉಳಿದಿಲ್ಲ! – ಕೂಪದಲಿ ಉರುಳಿಹುದು! ಮತ್ತೆ ನಮ್ಮೀನಾಡು ಕತ್ತಲಿಂ ಹೊರಗೆದ್ದು ಬೆಳಕಿನಲಿ-ಸ್ವಾತಂತ್ರ್‍ಯ ಜ್ಯೋ...

ಪ್ರಿಯ ಸಖಿ, ಶಿಷ್ಟತೆಯನ್ನು ಮೈಗೂಡಿಸಿಕೊಂಡಿರದ ನೀಚರು ತಮ್ಮದೆನಿಸುವ ಎಲ್ಲ ವಸ್ತುಗಳನ್ನು ಕೆಟ್ಟ ಕೆಲಸಗಳಿಗಾಗಿ, ತಮ್ಮ ಚಟ, ಸ್ವಾರ್ಥಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯಪಾತ್ರ ವಹಿಸುವುದು ನಾಲಿಗೆ. ಪುರಂದರದಾಸರ ಈ ಹಾಡನ್ನು ನೀನೂ...

ನಾಯಿ ಹೇಗೆ ಬೊಗಳುವುದು ಬೌ ಬೌ ಬೌ ಬೆಕ್ಕು ಹೇಗೆ ಕೂಗುವುದು? ಮ್ಯಾವ್ ಮ್ಯಾವ್ ಮ್ಯಾವ್, ಶಂಖ ಎತ್ತಿ ಊದಿದರೆ? ಭೋಂ ಭೋಂ ಭೋ ದೋಸೆ ಬೆಂದ ವಾಸನೆ ಘಂ ಘಂ ಘಂ. ತಬಲವನ್ನು ಹೊಡೆದರೆ? ಧಿಂ ತಕ ಧಿಂ ಆಟಂ ಬಾಂಬ್ ಹಚ್ಚಿದರೆ? ಢಂ ಢಂ ಢಂ. ಅಕ್ಕ ಡ್ಯಾನ್ಸು...

ಹುಣ್ಣಿಮೆ ಚಂದ್ರನಿಗೆ ತಾರೆಯರು ಎಷ್ಟು ಕಣ್ಣು ಹೊಡೆದರೂ ಅವರು ಅವನ ಕಣ್ಣಿಗೇ ಬೀಳಲಿಲ್ಲ ಬೆಳ್ಳಿ ಬೆಳದಿಂಗಳ ಹಾಲಲ್ಲಿ ಬೆತ್ತಲೆ ಮೀಯುತ್ತಿದ್ದ ಭೂಮಿ ಮೇಲೆ ನೆಟ್ಟ ಅವನ ಕಣ್ಣು ಬೆಳಗಾಗುವವರೆಗೂ ಅತ್ತಿತ್ತ ಹೊರಳಲಿಲ್ಲ. *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....