ಸೌಂದರ್ಯಂತಾದ ಕಣ್ಣು ಇದಕೆ
ಸೌಂದರ್ಯಂತಾದ ಮಣ್ಣು            ||ಪ||

ಘಮಾ ಘಮಾ ಮೂಗಿಗೆ ವಾಸನೆ
ಹಳದಿ ಕೆಂಪು ಬಣ್ಣದ ಹೂವ
ಉಬ್ಬೂ ತಗ್ಗು ಸೀರೆ ಮುಚ್ಚಿದ
ಬಳ್ಳೀಹಂಗೆ ಬಳಕೋ ಮೈನ
ಮಾಂಸದಂಥ ಹಣ್ಣಿನ ಮಣ್ಣಿನ
ಗೂಂಬೇನ್ನೋಡಿ ಜೊಲ್ಲು ಸುರಿಸಿ  ||ಸೌಂ||

ಕಾಲಗೆಜ್ಜೆ ಹೆಜ್ಜೆ ನುಡಿಗೆ
ಕೈಯಿಬಳೆ ಮೋಡಿದನಿಗೆ
ಬೆಚ್ಚಿ ಬಿದ್ದು ಹುಚ್ಚಾಗೆದ್ದು
ಕಣ್ಣಿಂದ್ತಲೆಗೆ ತಲೆಯಿಂದ್ಮೈಗೆ
ಮೈಮನಕೆಲ್ಲಾ ಮದಿರೆ ತುಂಬಿ
ತಿಂಬೋವಂಥ ಹಂಬಲದಿಂದ   ||ಸೌಂ||

ನಡಿಯೋ ಬೆಡಗು ನುಡಿಯೋ ಗಾನ
ಕಣ್ಣಿನ್ಕೊನೆ ಬಿಡೋ ಬಾಣ
ಮೈಕೈ ಒಲೆಯೊ ವಯ್ಯಾರ್ನೋಡಿ
ನಗುವಿನ ಜೇನು ಮಾತಿನ ಮೋಡಿ
ಆಕೀ ಮೈನ ಹೂವಿಗೆ ಹೋಲ್ಸಿ
ಹಲ್‌ಹಲ್ತೆರೆದು ಜೊಲ್ ಜೊಲ್ಸುರಿಸಿ  ||ಸೌಂ||
*****