Home / ಬಾಲ ಚಿಲುಮೆ / ಕಥೆ / ಪದ್ಮವನದ ಹಂಸಗಳ ಕಥೆ

ಪದ್ಮವನದ ಹಂಸಗಳ ಕಥೆ

ಒಬ್ಬಾನೊಬ್ಬನು ಚಿತ್ರರಥನೆಂಬ ರಾಜನು ಇದ್ದನು. ಆತನು ಒಂದು ಸರೋವರವನ್ನು ಕಟ್ಟಿಸಿ ಅಲ್ಲಿ ತಾವರೆಗಳನ್ನು ಬೆಳೆಸಿ ಅದಕ್ಕೆ ಪದ್ಮವನ ಎಂದು ಹೆಸರಿಟ್ಟನು. ಅಲ್ಲಿಗೆ ಯಾರಾದರೂ ಹೋಗಿ ಅದನ್ನು ಕೆಡಿಸಿಯಾರು ಎಂದು ಕಾವಲಿಟ್ಟನು. ಅಲ್ಲಿ ಚಿನ್ನದ ಹಂಸಗಳು ಬಂದು ನೆಲಸಿದುವು. ಅವು ಅರು ತಿಂಗಳಿಗೊಮ್ಮೆ ಒಂದೊಂದು ಗರಿಯನ್ನು ಕೊಡುತ್ತಿದ್ದುವು.
ಒಂದು ದಿನ ಅಲ್ಲಿಗೆ ಚಿನ್ನದ ಹಕ್ಕಿಯೊಂದು ಬಂತು. ಅದು ಅಲ್ಲಿ ಇರಬೇಕು ಎನ್ನಲು ಹಂಸಗಳು “ನಾವು ಆರು ತಿಂಗಳಿಗೊಂದು ಚಿನ್ನದ ಗರಿಯನ್ನು ಕೊಟ್ಟು, ಈ ಪದ್ಮವನವನ್ನು ಗುತ್ತಿಗೆಗೆ ತೆಗೆದು ಕೊಂಡಿರುವೆವು” ಎಂದುವು. ಎರಡಕ್ಕೂ ಮಾತಿಗೆ ಮಾತು ನಡೆದು ಎರಡಕ್ಕೂ ಜಗಳವೂ ಆಯಿತು. ಆ ದೊಡ್ಡ ಹಕ್ಕಿಯು ನೇರವಾಗಿ ರಾಜನ ಬಳಿಗೆ ಹೋಯಿತು. “ದೇವ, ಈ ಹಕ್ಕಿಗಳಿಗೆ ತಾವು ಈ ಪದ್ಮವನ್ನು ಗುತ್ತಿಗೆಗೆ ಕೊಟ್ಟಿರುವಿರಾ? ನಮ್ಮನ್ನು ದೊರೆಯು ಏನೂ ಮಾಡುವಂತಿಲ್ಲ ನಾವು ಯಾರನ್ನೂ ಇಲ್ಲಿ ಸೇರಿಸುವುದಿಲ್ಲ. ಎನ್ನುವವಲ್ಲಾ!” ಎಂದು ದೂರು ಹೇಳಿತು.
ಆಗ ರಾಜನು ದೂತರನ್ನು ಕರೆದು “ಹೋಗಿ, ಆ ಪಕ್ಷಿಗಳನ್ನೆಲ್ಲಾ ಕೊಂದು ತನ್ನಿ” ಎಂದು ಅಪ್ಪಣೆ ಮಾಡಿದನು. ಆಳುಗಳು ದೊಣ್ಣೆಗಳನ್ನು ತೆಗೆದುಕೊಂಡು ಅಲ್ಲಿಗೆ ಹೋದರು. ಅದನ್ನು ಕಂಡು ಆ ಹಂಸಗಳಲ್ಲಿ ವಯಸ್ಸಾದ ಹಿರಿಯ ಹಂಸವೊಂದು ಎಲ್ಲರನ್ನೂ ಕೂಗಿ, “ಏಳಿ, ಏಳಿ, ಎಲ್ಲರೂ ಹಾರಿ ಹೋಗೋಣ” ಎಂದು ಕೂಗಿ ಕೊಂಡಿತು. ಎಲ್ಲವೂ ಹಾರಿಯೂ ಹೊರಟು ಹೋದುವು. ಅರಸನಿಗೆ ಬರುತ್ತಿದ್ದ ಚಿನ್ನದ ಗರಿಗಳು ಇಲ್ಲವಾಯಿತು. ಅರಸನು ಹೀಗೆ ಕಾಯಬೇಕಾಗಿದ್ದ ಹಂಸಗಳನ್ನು ಕೊಲ್ಲಲು ಹೋಗಿ ನಷ್ಟ ಪಟ್ಟನು.
ಅದರಿಂದ ಹೇಳಿದೆನು”ಕೇಳಿ ಕಾಣೆಯಾ ಪದ್ಮವನ ಕಥೆಯಾ” ಎಂದು ಅವರನ್ನೆಲ್ಲ ಕಳುಹಿಸಿಕೊಟ್ಟು ತಾನು ಮತ್ತೆ ಹುತ್ತದ ಬಳಿಗೆ ಹೋದನು. ಎಂದಿನಂತೆ ಹಾಲನ್ನು ಇಟ್ಟು, ಹಾವನ್ನು ಕರೆದು ಹಾಲನ್ನು ತೆಗೆದುಕೋ ಎಂದು ಕೇಳಿಕೊಂಡನು. ಹಾವು ಒಳಗಿನಿಂದಲೇ ಹೇಳಿತು: “ನೀನು ಪುತ್ರ ಶೋಕವನ್ನೂ ಮರೆತು ಇಲ್ಲಿಗೆ ಬಂದಿರುವುದು ಲೋಭದಿಂದ. ಅದರಿಂದ ಇನ್ನು ಮೇಲೆ ನನಗೂ ನಿನಗೂ ಪ್ರೀತಿಯು ಉಚಿತವಲ್ಲ. ನಿನ್ನ ಮಗನು ನನ್ನನ್ನು ಹೊಡೆದನು. ನಾನು ಅವನನ್ನು ಕಚ್ಚಿದೆನು. ನಾನು ದೊಣ್ಣೆಯೇಟನ್ನು ಮರೆಯುವಂತಿಲ್ಲ ನೀನು ಪುತ್ರ ಶೋಕವನ್ನು ಮರೆಯುವಂತಿಲ್ಲ. ಆದರೂ ನೀನು ನನಗೆ ಮಿತ್ರನಾಗಿದ್ದವನು, ಅದರಿಂದ ಈ ವಜ್ರವನ್ನು ತೆಗೆದುಕೊ ಇನ್ನು ಮೇಲೆ ಇಲ್ಲಿ ಬರಬೇಡ” ಎಂದು ವಜ್ರವನ್ನು ಕೊಟ್ಟು ಕಳುಹಿಸಿತು. ಬ್ರಾಹ್ಮಣನು “ನೋಡಿದೆಯಾ? ಮಗ ನಿಂದ ಹೀಗಾಯಿತು ಎಂದು ವ್ಯಥೆ ಪಟ್ಟುಕೊಂಡು ಮನೆಗೆ ಹೋದನು.
ಅದರಿಂದ “ಸ್ನೇಹ ಕೂಡಿಸಬಹುದೆ ಒಡೆದ ಗೆಳೆತನವಾ” ಎಂದು ಹೇಳಿದೆನು, ಇವನನ್ನು ಕೊಲ್ಲುವುದೇ ನ್ಯಾಯ. ಇವನನ್ನು ಕೊಂದರೆ ರಾಜ್ಯವು ಅಕಂಟಕವಾಗುವುದು.” (ಕಂಟಕ-ಮುಳ್ಳು, ಅಕಂಟಕ- ಮುಳ್ಳು ಇಲ್ಲದ್ದು)
ಅರಿಮರ್ದನನು ಕ್ರೂರಾಕ್ಷನನ್ನು ಕೇಳಿದನು: ಅವನು ಹೇಳಿದನು: “ದೇವ, ಅವನು ಹೇಳಿದುದು ನಿರ್ದಯವು. ಅದು ಸರಿಯಲ್ಲ. ಶರಣಾಗತನನ್ನು ವಧಿಸಬಾರದು. ಕೇಳಿಲ್ಲವೆ?
ಶರಣು ಬಂದವ ಬೇಡನಾದರು | ಪಾರಿವಾಳವು ಪೂಜೆಗೈದುದು | 
ತನ್ನ ಮಾಂಸವನಿತ್ತು ಊಟಕೆ ಸಗ್ಗ ಕೈದಿತಲಾ ॥ ೨೭ ॥ 
ಅರಿಮರ್ದನನು ಅದೆಂತು ಎಂದು ಕೇಳಲು ಕ್ರೂರಾಕ್ಷನು ಹೇಳಿದನು:-
*****
ಪಾರಿವಾಳವು ಸಗ್ಗಕೈದಿತಲಾ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...