ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು ಸಾಹಸವನೊಂದ ಕೈಕೊಂಡು ನಡೆದೆ: ಕೊನೆಗಾಣಿಸುವ ಶಕ್ತಿಯ ಕೊಡು,- ಸಮುದ್ರನಾಥ! ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು: ಇಂದಿನ ನನ್ನ ಏಕಾಂತವಾಸವನು ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆಯ ಕೊಡು, ಸಮುದ್ರನಾಥ! ನನ್ನೀ ಒಬ್ಬೊಂಟಿಗತನವನು ಎ೦ಟೆದೆಯ ಬಂ...

ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ ಪುಸ್ತಕಗಳು! ಕೆಲವಂತೂ ಮಣಭಾರ. “ಈ ಆಥರಿನ ಈ ಪುಸ್ತಕದ...

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್‍ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ ನೀರು ಹ್ಯಾಗ್ ಸೇರುತ್ತೆ ಭಾರ ಆಗದ ಹಾಗೆ? ಅಷ್ಟೊಂದ್ ಅಗಲ...

ಆಕೆ: ‘ನನ್ನ ಗಂಡ ಯಾವುದೇ ವಿಷಯದ ಬಗ್ಗೆ ಇಡೀದಿನ ಮಾತನಾಡಲು ಬಲ್ಲ.’ ಸ್ನೇಹಿತೆ: ‘ಆದೇನು ಮಹಾ ? ನನ್ನ ಗಂಡನಿಗೆ ಯಾವುದೇ ವಿಷಯ ಬೇಕಿಲ್ಲ. ಆದರೂ ಮಾತಾಡ್ತಾ, ಮಾತಾಡ್ತಾ, ಮಾತಾಡ್ತಾನೇ ಸದಾ ಇರಬಲ್ಲ?’ ***...

ಮುಕ್ತಿಯ ಪಥದನರಿವುದಕ್ಕೆ ತತ್ವದ ಭಿತ್ತಿಯ ಕಾಣಬೇಕು. ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಮರ್ತ್ಯದ ಮಾನವರ ಸಂಗವ ಹಿಂಗಬೇಕು, ತಾನುತಾನಾದ ಲಿಂಗೈಕ್ಯವನರಿವಡೆ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂ...

ಪ್ರಿಯ ಸಖಿ, ಆ ಮನೆಯಲ್ಲಿ ನಿತ್ಯದಂತೆ ಆ ರಾತ್ರಿಯೂ ತನ್ನ ಕರಾಳ ಹಸ್ತ ಚಾಚಿದೆ. ಕಂಠಪೂರ್ತಿ ಕುಡಿದು ಬಂದ ಅವನು, ತನ್ನ ಪತ್ನಿ ದಿನವಿಡೀ ಬೆವರು ಹರಿಸಿ ದುಡಿವ ಹಣವನ್ನು ಕೊಡುವಂತೆ ಪೀಡಿಸುತ್ತಾ ಹೊಡೆಯುತ್ತಿದ್ದಾನೆ. ಅವಳು ನಿರಾಕರಿಸಿದಷ್ಟೂ ಇವನ ...

ಬೆರಳಲಿ ಬೆರಳ ಹೊಸೆದು ನಡೆವ ದಾರಿ ಅದು ಟೈಂಪಾಸ್ ಲವ್ವು, ಬೆಂಚಿನ ಅಂಚಿನಲಿ ಕುಳಿತು ಆಡಿದೆರಡು ಮಾತು ಅದು ಬೈಪಾಸ್ ಲವ್ವು, ನಾಲ್ಕಿಉ ರಸ್ತೆಯಲಿ ಸೇರಿ ಸಿಕ್ಕಿಕೊಂಡರೆ ಅದು ಟ್ರಾಫಿಕ್‌ಜಾಮ್ ಲವ್ವು! *****...

ಪಕ್ಷಗಳು ಕುದಿಯುತಿವೆ ರಾಜಕೀಯ ಕುಲುಮೆಯಲಿ ಆಕಾರಕ್ಕೆ ಬರದೆ ಮತ್ತೆ ಮತ್ತೆ ಬೀಳುತಲಿವೆ ಅಸತ್ಯದ ಕುಲುಮೆಯೊಳಗೆ ಸುತ್ತಿಗೆ ಹಿಡಿದು ಮತ್ತೊಮ್ಮೆ ಬರಬಾರದೇ ನೀನು ‘ಕಮ್ಮಾರನಾಗಿ’ ಜಾತಿ ಮತ ಕುಲ ಧರ್ಮಗಳ ಹೆಸರಿನಲಿ ಹುಟ್ಟಿಸುತಿಹರು ಹೊಸ ಹೊಸ ಪಕ್ಷಗಳು...

ನಿಮಗೀಗ ಬುಲ್‌ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೆ? ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ ಆರಿಸಿದಿರಿ.  ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ. ತುಸು ತಾಳಿರಿ.  ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ. ಎಡಗಡೆಯಿಂದ ಸಾಲುಗಟ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....