ಶ್ರೀ ಶಂಕರನಾಣೆ! ಶಂಕರನೆಂಬುವ ಶಂಕರನಲ್ಲ.
ಅವನೋ ದೇವರ ಕಿಂಕರನು!
ಮಾಡುವ ಕೆಲಸವ ಮಾಡಲು ಬಂದ
ಆಡುವ ಮಾತುಗಳಾಡಿದನು
ನೋಡುವ ಪರಿಣತಿ ನೋಡಿದನು.
ಹಾಡುವ ಪ್ರಾರ್ಥನೆ ಮಾಡಿದನು:-
“ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ”
ಹಡೆದಾ ಹೊಟ್ಟೆಯ ಸಂಪದವೇನೋ?
ಜನ್ಮ ಮುಹೂರ್ತದ ಮಾಂಗಲ್ಯ-?
ಅಜಾತ ವಸ್ತುವು ಜನ್ಮವ ತಾಳಿತು
ಮಾಯಾಮಯದಲಿ ತಾನೂ ಬಾಳಿತು.
ಹೋ ಹೋ ಮಿಂಚಿತು ಕಾರ್ಯ.
ಎಲ್ಲಿಹನಾ ಆರ್ಯ,
ಕಾಣದಿಹವು ‘ಶ್ರೀಪಾದ’
ಹಿಂದುಳಿದಿದೆ ವಾದ.
*****

















