ನೀ ಯಾರೋ ನಾ ಯಾರೋ!

ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? ಧ್ಯಾನ ಸ್ಮರಣೆ ಜಪಗಳಲ್ಲು ತೂರಿ ಬರುವುದೇಕೆ?...

ಮಕಮಲ್ಲಿನ ಪಕ್ಷಿ

ಅದೇ, ಆ ಹೂದೋಟದಲ್ಲಿ ನಿಂತ ನಿನ್ನ ಪ್ರತಿಮೆಯ ನೋಡಿ ಒಂದು ಎರಡು ಮೂರು ನಾಲ್ಕು ಸುತ್ತು ಹೊಡೆದು ಗಕ್ಕನೆ ನಿಂತಿತೊಂದು ಮಕಮಲ್ಲಿನ ಪಕ್ಷಿ ಕನ್ನಡದ ನೀರು ಕುಡಿದ, ಕಾಳು ತಿಂದ ಪಕ್ಷಿಯೇ ಇರಬೇಕದು ’ಕುವೆಂಪು’...

ರಾಜಕೀಯದಾಗೀಗ ವಂಡರ್ಮೆ ಥಂಡರ್

ಹೆಂಗಾತಪ್ಪಾ ಅಂದ್ರೆ ಕೊಮಾರಸ್ವಾಮಿ ಮಂತ್ರಿಮಂಡಲದ ವಿಸ್ತರಣೆ ಮಾಡಿ ಮೊದಲೇ ಉರಿತಿದ್ದ ಬೆಂಕಿಗೆ ತುಪ್ಪ ಹಾಕ್ದ ಅನ್ನಂಗಾಗೇತ್ ನೋಡ್ರಿ. ರೇವಣ್ಣನ್ನ ಮಂತ್ರಿ ಮಾಡಬೇಕಂತ ದೊಡ್ಡಗೋಡ್ರು ಯಾವಾಗ ಕಚ್ಚೆ ಕಟ್ಟಿಕ್ಯಂಡು ರಚ್ಚೆ ಹಿಡಿದ್ರೋ ತಡೆಯೋ ಗಂಡಾರ್ರಾ ಯಾರ್ರಿ?...

ಬಾಗಿಲಾಚೆಯ ಮೌನ

ಏಕಿಂಥ ಬಿಗುಮಾನ ಬಾಗಿಲಾಚೆಯ ಮೌನ? ಹೊಸ್ತಿಲವರೆಗೂ ಬಂದು ನಿಂತು ಮುಖವ ಮರೆಸುವುದೇ ಇಂತು? ಹೇಳದೇ ಬರುವವರು ಕೇಳದೇ ಹೋಗುವವರು ಎಲ್ಲರಿಗಾಗಿ ವಿಸ್ತಾರವಾಗಿ ತರೆದೇ ಇದೆ ಬಾಗಿಲು. ನೀನು ಅತಿಥಿಯೂ ಅಲ್ಲ ದೇವಮಾನವನೂ ಅಲ್ಲ ನನ್ನದೇ...

ಪ್ರಜಾರಾಜ

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ ಇವನು ಹುಟ್ಟಿದ್ದೇ ಹಸಿಬಿಸಿಯಾಗಿ ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ...
ಭಾವನಾಪ್ರಣಯೋದಂತ ಕಥೆ

ಭಾವನಾಪ್ರಣಯೋದಂತ ಕಥೆ

[caption id="attachment_6708" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಅಂದಿನ ವೈಭವ, ಆಳ್ವಿಕೆಯನ್ನು ಹೃದಯದಲ್ಲಿ ಭದ್ರವಾಗಿಟ್ಟುಕೊಂಡು ಸಾಕ್ಷಿಯಾಗಿ ನಿಂತಿರುವ ತುಂಗಭದ್ರೆ ನಾಸ್ಟಾಲ್ಜಕ್ಕಾಗಿಗಿ ಇದ್ದಾಳೆ ಎನಿಸುತ್ತೆ. ಒಮ್ಮೆ.....ಒಂದುಸಲ.. ಶ್ರೀಕೃಷ್ಣದೇವರಾಯರನ್ನ ನೋಡಿದರೆ.....ತಾ ಧನ್ಯಳಾದಂತಹ ಭಾವ ನಿರೀಕ್ಷಿಸಿದಂತಿದ್ದಾಳೆ....

ನಗೆ ಡಂಗುರ – ೭೯

ಅವಳು ಸುಂದರವಾದ ಹೆಂಗಸು. ಹೊಸದಾಗಿ ಕಾರಿಗೆ ಡ್ರೈವರ್ ಗೊತ್ತು ಮಾಡಿಕೊಂಡಳು. `ನಿನ್ನ ಹೆಸರೇನು? ಎಂದು ಡ್ರೈವರನನ್ನು ಕೇಳಿದಳು. `ನನ್ನ ಹೆಸರು ವೆಂಕಟೇಶ ನಾಯಕ್' ಎಂದ. `ಅಡ್ಡ ಹೆಸರೂ ಇದೆಯೊ?'. `ಇದೆ ತಾಯಿ, ನನ್ನ ಅಡ್ಡ...

ತಾರೆ ತೇಲಿ ಬರುವ ರೀತಿ

ತಾರೆ ತೇಲಿ ಬರುವ ರೀತಿ ತೀರ ಇರದ ಬಾನಿಗೆ ತೇಲಿ ಬಂದೆ ನೀನು ನನ್ನ ಮೇರೆ ಇರದ ಪ್ರೀತಿಗೆ ನಲ್ಲೆ ನಿನ್ನ ಬೆಳಕಿನಲ್ಲಿ ಬಿಚ್ಚಿ ತನ್ನ ದಳಗಳ ನಲಿಯಿತಲ್ಲೆ ಜೀವ ಹೇಗೆ ಸುತ್ತ ಚೆಲ್ಲಿ...

ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ ಮುದ್ದಾಗಿಯೇ ಕಾಣುವ ಹಕ್ಕಿಗಳು ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ ಎಲ್ಲಿಯೋ ಹೋಗಿಬಿಟ್ಟವು. ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು ಪ್ರೀತಿ ಸ್ಪರ್ಷಿವಿಲ್ಲದ ಮೋಡ ತುಂಬ...

ಜೆಡಿ‌ಎಸ್ ಏರಿಗೆಳದ್ರೆ ಬಿಜೆಪಿನೋರು ನೀರಿಗೆಳಿಲಿಕತ್ತಾರೆ…!

ಖೇಣಿಯ ನೈಸ್ ರಸ್ತೆ ಅಂಬೋದು ಅದೇಟು ನ್ನೆಸಾಗೈತೆ ಅಂದ್ರೆ ಅದ್ರಾಗೆ ನಡ್ಡಾಡಿದ್ರೆ ಜಾರಿ ಬೀಳ್ತಿವೇನೋ ಅನ್ನಂಗಾಗೇತ್ರಿ. ಖುದ್ ಗೋಡ್ರೇ ಡೀಲಿಗೆ ನಿಂತು ಶುರು ಹಚ್ಕಂಡ ನೈಸ್ ಯಾಪಾರ. ಬಡ ರೈತರ ಭೂಮಿ ಅನ್ಯಾಯವಾಗಿ ಲೂಟಿ...