ರಮಿಸಿ ಕರೆದಾಗ ಆಯ್ತೊಮ್ಮೆ ಸಮಾಗಮ
ನಲುಗಿದ ಹೂವಿನ ಕೆಳಗೇ ಉಸಿರಾಡಿತು ಕಾಯಿ
ಉಪ್ಪು ಹುಳಿ ಖಾರ ಸಿಹಿಕಹಿ ಒಗರುಗಳಿಂದ
ದಡ್ಡುಗಟ್ಟಿದ ನಾಲಗೆ ಉಲಿಯಿತು ಕಾವು ನೋವು
ಹೇಗೆ ಹೇಗೋ ಋಣಧನಗಳ ಲೆಕ್ಕ ಸರಿತೂಗುತ್ತಿತ್ತು
ಸುತ್ತಿದ ಕಾಮದ ಸೀಮೆಯ ಹಾಲಾಹಲದೊಡಲಿಂದ
ಮೇಲೇರಿ ಬಂದ ಚಂದ್ರಾಮ
ಕಾಯಿ ಹಣ್ಣಾಗಿ-ಹಾಲು ಕೆನೆಯಾಯ್ತು
ಒಳಗೆ ಬೆಂದು ಹೊರಗೆ ತೋಯ್ತು
ಕರೆಯು ಪರಿಪರಿಯಾಗಿ ಕೋಡಿವರಿಯಿತು
ಹಣ್ಣು ಬೀಜಕ್ಕೆ ದಾರಿಯಾಯಿತು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)