ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು
ಇವನಿಗೇನ್ರಿ ಧಾಡಿ
ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ
ರಂಪ ರಾಡಿ
ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ
ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ ಹೊಸ
ಬಡಿವಾರ
ಇದು ಪ್ರಜಾಪ್ರಭುತ್ವದ ಕಾಲವೆಂಬುದು ಗೊತ್ತೇ ಇರದ
ಇವನೊಬ್ಬ ಯಾವುದೋ ಓಬಿರಾಯನ ಕಾಲದ ಪಾಳೇಗಾರ.
*****