ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ ಮೀಯು...
ನಮ್ಮ ಹಿತ್ತಲ ಗಿಡದಲ್ಲಿ ಹೂವೊಂದು ಕಾಯಿಯಾಯಿತು ಕಾಯಿ ಹಣ್ಣಾಯಿತು ಹಣ್ಣು ಮಾಗಿತು. ಇಷ್ಟಕ್ಕೂ ನಾನೇನು ಮಾಡಿದೆ? ಕಾ…. ದೆ. *****...
ಕಾಲೇಜಿಗೆ ಹೋಗಿ ಎರಡು ಪ್ರಾಸ್ಪೆಕ್ಟ್ ಕೊಂಡು ಸೀದಾ ಆಟೋ ಹತ್ತಿ ಪರಿಷತ್ತು ಭವನದ ಮುಂದೆ ಇಳಿದಳು. ಇದೇ ಮೊದಲ ಬಾರಿ ಸಾಹಿತ್ಯ ಪರಿಷತ್ತು ಭವನ ನೋಡುತ್ತ ಇರುವುದು. ಅದರ ಪಕ್ಕದಲ್ಲಿದ್ದ ಕಲಾಭವನವನ್ನು ನೋಡಿದ್ದಳು. ಆದರೆ ಸಾಹಿತ್ಯ ಪರಿಷತ್ತು ಭವನ ಇ...
ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ ತುಂಟ! *****...
ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ ಅಕ್ಕ ಇಲ್ಲೇಕೆ ಅಡಗಿರುವೆ ಸಲ್ಲದು ನಿನಗದು ಭುಗ್ಗನೆ ಚಿಮ್ಮುತ ಏಳವ್ವ ಗಂಗೆ! ಕರ...
ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ… ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು… ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ… ಹೆಂಚು ತಿರಿಗಿಸಲು ಸಾಧ್ಯ...
ಹೌದು ಹಗಲಿಗೆ ಸೂರ್ಯ ಅವನೊಬ್ಬನೆ ರಾತ್ರಿಗೆ ಚಂದ್ರ ನೀನೊಬ್ಬನೆ ಆದರೆ ನೀವಿಬ್ಬರೂ ಅಪ್ರಸ್ತುರಾಗಿ ದಾರಿಗಾಣದ ಬಾಳ ಮುಸ್ಸಂಜೆ ಮಬ್ಬಲ್ಲೀಗ ನನಗೆ ನಾನೊಬ್ಬನೆ *****...
ಹೊಲಸಲ್ಲೇ ಹೊರಳಾಡುವುದು ನಮಗೆ ಒಗ್ಗಿ ಹೋಗಿದೆ ಊರ ಹತ್ತಿರ ಹೊರದಾರಿಗಳೆಲ್ಲ ಬಯಲು ಕಕ್ಕಸುಗಳು ಊರೂಳಗೆ ಹೋಗುವಾಗ ನಾವು ಮೂಗು ಮುಚ್ಚಿಕೊಳ್ಳುವುದಿಲ್ಲ ಏಕೆಂದರೆ ದುರ್ವಾಸನೆಗೆ ಸಹಜವಾಗಿ ಒಗ್ಗಿಕೊಂಡ ದುರ್ವಾಸರು ನಾವು ದೇವರುಗಳಿಗೆ ಮಾತ್ರ ಹೆದರುತ್...
ಸ್ತ್ರೀ ಸಾಂಸಾರದಲ್ಲಿ ಮೇಸ್ತ್ರಿ; ಶಿಸ್ತು ಮುರಿದಾಗ ಮಾಡುವಳು ಇಸ್ತ್ರಿ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






