ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯನೆದೆಯೆ, ಹಲ್ಲ ಕಡಿದ, ಹಹ್ಹ! ಏನು ಬೇಟವೋ! ಬೆಚ್ಚಗುಸಿರ ಬಿಟ...

ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು. ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ ಅಲ್ಲಲ್ಲಿ ಹೊಳೆಯುವುದ...

ಇಂದು ಮುಂಜಾವಿನಿಂದ ಸಂಜೆಯವರೆಗೂ ನಮ್ಮೊಡನಿದ್ದು, ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿ ಮಾರ್ಗದರ್ಶನ ನೀಡಿ, ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಈಗ ತುರ್ತು ಕೆಲಸದ ಮೇಲೆ ನಿರ್ಗಮಿಸುತ್ತಿರುವ ಸನ್ಮಾನ್ಯ ‘ದಿವಸ್ಪತಿ ಹೆಗಡೆ’ಯವರಿಗ...

ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಮಕ್ಕಳಿದ್ದಿಲ್ಲ; ಮರಿಗಳಿದ್ದಿಲ್ಲ. ಅಂಬಾಣಾ ತೊರೆಯಂಥ ಜಾಗಾಕ ಹೋಗಿ ಎಲ್ಲ ಜನರಿಗೆ ಊಟ-ಉಪಶಾಂತಿ ಮಾಡಬೇಕೆಂದು ನಿಶ್ಚಯಿಸಿದರು. ನಾಲ್ಕು ಬಂಡಿ ಕಟ್ಟಿ ಸಾಹಿತ್ಯ ಸಲಕರಣೆ ಸಹಿತ ತಯಾರಾದರು. ಅಡಿಗೆ ಅಂಬಲಿ ಸಿದ್ಧ...

ನೀರನು ಚೆಲ್ಲುವ ಮೋಡಕ್ಕೆ ಭೇದ ಬುದ್ಧಿ ಇಲ್ಲ, ಬಿಸಿಲನು ಸುರಿಸುವ ಸೂರ್ಯನಿಗೆ ಪಕ್ಷಪಾತವಿಲ್ಲ, ಪರಿಮಳ ಹರಡುವ ವಾಯುವಿಗೆ ಜಾತಿ ಪಂಥವಿಲ್ಲ, ಮಾನವರಲ್ಲಿ ಮಾತ್ರವೆ ಇಂಥ ಏರು ತಗ್ಗು ಎಲ್ಲ. ಎಲ್ಲರ ಮೈಲೂ ಹರಿಯುವುದು ರಕ್ತ ಮಾತ್ರವೇನೇ, ಚಳಿ ಮಳೆ ಗಾ...

ಒಬ್ಬ ಸರ್ದಾರ್ಜಿ ಒಂದು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ. ಡ್ರೈವರ್ ಸಡನ್ ಆಗಿ ಬ್ರೇಕ್‍ಹಾಕಿ ಬಿಟ್ಟ. ದುರಾದೃಷ್ಟಕ್ಕೆ ಬಸ್ಸಿನಲ್ಲಿದ್ದ ಹುಡುಗಿಯೊಂದು ದಪ್ಪನೆ ಸರ್ದಾರ್‌ಜಿಯ ಮೇಲೆ ಬಿದ್ದು ಬಿಟ್ಟಳು. ಸಿಟ್ಟಗೆದ್ದ ಸರ್ದಾರ್‍ಜಿ ಅವಳನ್ನು ದೃಷ್...

ಒಂದು ಊರಿಗೆ ಒಂಬತ್ತು ಬಾಗಿಲು, ಆ ಊರಿಗೆ ಐವರು ಕಾವಲು, ಆರು ಮಂದಿ ಪ್ರಧಾನರು, ಇಪ್ಪತ್ತೈದು ಮಂದಿ ಪರಿವಾರ, ಅವರೊಳು ತೊಟ್ಟನೆ ತೊಳಲಿ ಬಳಲಲಾರದೆ, ಎಚ್ಚತ್ತು ನಿಶ್ಚಿಂತನಾದ ಅರಸರ ಕಂಡೆ. ಅರಸಿನ ಗೊತ್ತುವಿಡಿದು, ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್...

ಇವರ ಡೊಳ್ಳು ಹೊಟ್ಟೆಗಳನೆಲ್ಲ ನಗಾರಿ ಬಾರಿಸಬೇಕು ಒಡೆಯುವವರೆಗೆ ಇವರ ಮುಖವಾಡಗಳ ಕಿತ್ತೆಸೆದು ಇವರ ಕತ್ತೆ ಮುಖಗಳ ಕತ್ತುಹಿಡಿದು ಹೊಲೆಗೇರಿಗಳ ಕೊಳಚೆಗಳಲ್ಲದ್ದಬೇಕು ಇವರು ಕಟ್ಟಿದ ಸಂಚುಕೋಟೆಗಳ ನುಡಿಗುಂಡುಗಳಿಂದ ಒಡೆಯಬೇಕು ಇವರು ಹಾಕಿದ ಲಕ್ಷ್ಮಣರ...

ರಾಜಾಧಿರಾಜ ರಾಜಮಾರ್ತಾಂಡ ಕಾಮಗೇತಿ ಕಸ್ತೂರಿ ಕುಲತಿಲಕ ಶ್ರೀಮಾನ್ ಮಹಾನಾಯಕಾಚಾರ್ಯ ಹಗಲು ಕಗ್ಗೊಲೆಮೂನ್ಯ ಗಂಡುಗೊಡಲಿಯ ಸರ್ಜಾ ಗಾಧುರಿಮಲೆ ಹೆಬ್ಬುಲಿ ಚಂದ್ರಗಾವಿಛಲದಾಂಕ್ಯ ಧೂಳಕೋಟೆ ವಜೀರ ಎಪ್ಪತ್ತೇಳು ಪಾಳೇಗಾರರ ಮಿಂಡ ರಾಜಾವೀರ ಮದಕರಿನಾಯಕರಿಗೆ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....