ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ಮಳೆಯ ಮರುದಿನ ಇರುವಗಳಿಗೆ ಜಾತ್ರೆಯೋ ಜಾತ್ರೆ ಸತ್ತ ಹುಳುಗಳ ತೇರು ಗೋಡೆಯ ಉದ್ದಗಲ ಎಳೆದೂ ಎಳೆದೂ ಹರಕೆ ತೀರಿಸಿ ಮರುದಿನ ಮಾಯವಾಗಿ ಬಿಡುತ್ತವೆ *****...

ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ.  ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...

ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ ಇದೇ ಚಳುವಳಿ. ತರಂಗದಂತೆ ದೇಶವನ್ನೆಲ್ಲಾ ಮುಳುಗಿಸಿ ಒಳ್ಳೆಯ ಸ...

ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ, ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ ತನ್ನ ಕಷ್ಟವ ನೆನೆದು ಅವನಿಗಳು ಬಂತು “ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು “ಬಿರ್ಜು ನೀ ಎಷ್ಟೊಂದು ಅದೃಷ್ಟವಂತ! ಗೊತ್ತಿಲ್ಲ ನಿನಗೆ ...

ಒಬ್ಬ ವ್ಯಕ್ತಿ ಸನ್ಯಾಸಿಯ ಬಳಿಗೆ ಹೋಗಿ ಕೈಮುಗಿದು ನಿಂತ. ಸನ್ಯಾಸಿ: “ಏನು ಬೇಕಪ್ಪ, ನನ್ನಿಂದಲೇನಾದರೂ ಸಹಾಯ ಆಗಬೇಕೆ?” ವ್ಯಕ್ತಿ: “ಹೆಂಡತಿಯನ್ನು ಪಳಗಿಸುವುದು ಹೇಗೆ ಎಂದು ದಯಮಾಡಿ ತಿಳಿಸುವಿರಾ?” ಪ್ರಾರ್ಥಿಸಿದ. ಸ...

ಬಟ್ಟಬಯಲಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿದು, ಮರ ಒಣಗಿತ್ತು. ಉಲುಹು ನಿಂದಿತ್ತು. ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿ...

ಅನಿಸಿಕೆಯ ಬೀಜ ಮರವಾಗಿ ಅಭಿವ್ಯಕ್ತಿ ಪಡೆಯುವುದನ್ನು ಎಲ್ಲ ಗೋಲಿಗಳೂ ಸಟಸಟ ತಂತಮ್ಮ ಗುಳಿಗಳಲ್ಲಿ ಸಲೀಸಾಗಿ ಬೀಳುವುದನ್ನು ಎಲ್ಲ ಬಾಗಿಲುಗಳು ನನ್ನ ಟಕಟಕಾಟಕ್ಕೆ ಕೂಡಲೇ ತೊರೆದುಕೊಂಡು ನನ್ನ ಸ್ವೀಕರಿಸುವುದನ್ನು ಎಲ್ಲ ಕಲ್ಪತರುವಿನ ತಲೆಕಾಯಿಗಳಿಗೆ ...

ಪ್ರಿಯ ಸಖಿ, ಹುಟ್ಟು ನಮ್ಮ ಕೈಯಲಿಲ್ಲ. ಹಾಗೂ ಸಾವೂ ಕೂಡ. (ಆತ್ಮ ಹತ್ಯೆಗಳನ್ನು ಹೊರತುಪಡಿಸಿ) ಆದರೆ ಇವೆರಡರ ನಡುವಿನ ಬದುಕು ನಮ್ಮ ಕೈನಲ್ಲೇ ಇದೆ. ಇದನ್ನು ನಮಗೆ ಬೇಕೆಂದಂತೆ ರೂಪಿಸಿಕೊಳ್ಳುವ ಅವಕಾಶ ನಮಗಿದೆ. ಒಂದು ಮಗುವಿನ ಹುಟ್ಟಿನೊಂದಿಗೆ ಅನೇ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....