ಪರಿಸರವನುಳಿಸಲಿಕೆಂದು ನೂರೊಂದು ತರದೊಳೋದಿಹರುಪಾಯವನು ಹೂಡುವರು ಪರಿಸರಕೆಂದುನ್ನತದಧ್ಯಯನ ಪೀಠವಿರುತಿಹುದು ಪರಿಣಾಮದೊಳೊಂದು ಟಿಪ್ಯೂಪೇಪರನುಳಿಸಿ ಕರವಸ್ತ್ರಕೆಳಸುವ ಮನವನನುಗೊಳಿಸದಿರಲೆಲ್ಲ ವ್ಯರ್ಥ – ವಿಜ್ಞಾನೇಶ್ವರಾ *****...

ದೇಶಪ್ರೇಮ – ಕಾಗದದ ಮೇಲೆ ಚಿತ್ರ ಕೃತಕ ಧ್ವನಿಯ ಹಾಡು ಅಂಗಾಂಗ ಅಲುಗಾಡಿಸುವ ನೃತ್ಯಗಳಾಗದೇ ಧಮನಿ ಧಮನಿಗಳಲ್ಲಿ ಹರಿವ ಉಸಿರಾಗಬೇಕಲ್ಲವೆ? *****...

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ ಬೃಹತ್ತಾ...

ಸರ್ವಜನಪ್ರಿಯ ಪೌರ್ಣಿಮೆಯ ಪೂರ್ಣಚಂದ್ರನಲ್ಲಲ್ಲದೆ ಈ ಪರಿಯ ಸೊಬಗಾವ ದೇವರೊಳು ಕಾಣೆ ಚಂದ್ರ: ಸತ್ಯವಾಗಿ ಹೇಳುತ್ತಿದ್ದೇನೆ ಮುಖಸ್ತುತಿಗಲ್ಲ ಬೇಕಿದ್ದರೆ ಉಳಿದೆಲ್ಲ ಕಣ್ಣಿಗೆ ಕಾಣದ ದೇವರ ಮೇಲೆ ನನ್ನಾಣೆ. *****...

ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ ಹಾಡಿ ಕುಣಿದು ಪಾಠ ಹೇಳಿಕೊಡುವುದು ಅವರ ರೂಢಿ. ಸದಾ ಹಸನ್ಮುಖದ ಗಡ್ಡ ಮೀಸೆ ಎರಡ...

ಅಜ್ಜೀ ಅಜ್ಜೀ ಯಾವಾಗ್ಲೂ ನಾನ್ ನಿನ್ ಜೊತೇನೇ ಇರ್‍ತೀನಿ ನಿನ್ಹಾಗೇನೇ ನಾನೂನೂ ಏಕಾದಶೀ ಮಾಡ್ತೀನಿ. ನಿನ್ಹಾಗೇನೇ ಬೆಳಿಗ್ಗೆ ಪಾವು ಉಪ್ಪಿಟ್ ಮಾತ್ರ ತಿಂತೀನಿ ಹಾಲನ್ ಕುಡಿದು ಕಣ್ಮುಚ್ಚಿ ಮಿಣಿ ಮಿಣಿ ಜಪ ಮಾಡ್ತೀನಿ ದೇವರ ಪ್ರಸಾದ ಅಂತ ನಾಲ್ಕೇ ರಸಬ...

ಒಂದು ಸಲ ಕೈಲಾಸಂರವರು ಊಟಕ್ಕೆ ಕುಳಿತಾಗ ಮಾಣಿ ಅನ್ನ ಬಡಿಸಿ, ಬಕೆಟ್ನಿಂದ ಸಾಂಬಾರ್ ಸುರಿದು ನಿಂತ. ಅದರಲ್ಲಿ ತರಕಾರಿಯ ಒಂದು ಹೋಳೂ ಕಾಣಲಿಲ್ಲ. ಹೊಟೆಲ್ ಮಾಲೀಕರನ್ನು ಕರೆದು ಅವರ ಕಿವಿಯಲ್ಲಿ “ಒಂದು ಕೌಪೀನ (ಲಂಗೋಟಿ) ಇದ್ದರೆ ದಯಪಾಲಿಸುತ್...

ನೆನೆದಿಹೆನೆಂದರೆ, ಏನ ನೆನೆವೆನಯ್ಯ! ಮನ ಮಂಕಾಯಿತ್ತು. ತನು ಬಯಲಾಯಿತ್ತು. ಕಾಯ ಕರಗಿತ್ತು. ದೇಹ ಹಮ್ಮಳಿಯಿತ್ತು. ತಾನು ತಾನಾಗಿ, ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಮೇಲೆ ಚಂದ್ರಾಮ ಇಲ್ಲಿ ಚಿಗುರೆಲೆ ಬಳ್ಳಿ ಅದರಲ್ಲಿ ಬಿಟ್ಟ ಅಮೃತಕಲಶ ಮೇಲೊಂದು ಜೇನತೊಟ್ಟು ಈ ತಂಬೂರಿ ಕುಂಬಳಕಾಯಿ ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ ಈ ದೇಗುಲ ಕಲೆಯುಸಿರಾಡುವ ಸ್ತಂಭಗಳು ನವರಂಗದ ಮೇಲೆಕೆಳಗಿರಿಸಿದ ಅರಳಿದ ಕಮಲ ಇದರೊಂದು ರನ...

ಪರಮದಾನಿಗಳ ಬೀಡು, ವಾಣಿಜ್ಯೋದ್ಯಮಿಗಳ ನಾಡು, ಲಲಿತಕಲೆಗಳ ತವರೂರು ವಿದ್ವಜ್ಜನರ ಕೂಡಲ ಸಂಗಮವೆಂದೇ ಪ್ರಖ್ಯಾತವಾದ ದಾವಣಗೆರೆ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮಹಾಸಮ್ಮೇಳನ ನಡೆಯುತ್ತಿದೆ. ಅದ್ದೂರಿ ಜಾತಿ ಸಮ್ಮೇಳನಗಳಿಂದ ಸಂಬಂಧಪ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....