ನಮ್ಮ ಬಾಪೂ
ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ, ಮಾಂಸ, ಜೊತೆಗಿರಿಸು ವಾಪವಂ ನೆರೆತೆರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ; ಹುಚ್ಚು- ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ; ಹಾಲುಹಸುಳೆಯ ಮಂದಹಾಸವನ್ನು ಲೇಪಿಸದಕೆ, ಒಳಗಿರಿಸು, ಜೇನು ನಗುವವೊಲಿನಿಯ ನಾಲಿಗೆಯ ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ. ಪೂರಣವೊ? ನೋಯಬೀನ್ಸ್, ಖರ್ಜೂರ, ಮೇಕೆ […]