ಗಂಡಸ್ಕತ್ರಿ

ಗಂಡಸ್ಕತ್ರಿ

ಪಾತ್ರಗಳು
ಈತ ಅಶ್ವತ್ಥನಾರಾಯಣ-ಲಾಯರಿ
ಈತನ ಸಹಪಾಠಿ ರಂಗಣ್ಣ-ಆಕ್ಟರು
ಈಕೆ ಇವರಿಬ್ಬರಾಕೆ
ಬೋರ ಜವಾನ

ದೃಶ್ಯ ೧

ಅಶ್ವತ್ಥನಾರಾಯಣನ ಮನೆಯ ಮುಂದಿನ ಕೋಣೆ [ಈತನ ಹೆಂಡತಿಯು ಈತನ ಮೇಜಿನ ಮುಂದೆ ನಿಂತು ಅದರ ಮೇಲಿರುವ ಪುಸ್ತಕ, ಪತ್ರಿಕೆಗಳ ಮೇಲೆ ಕೈಯಾಡಿಸುತ್ತಿರುವಳು. ಔಷಧಿಯ ಸೀಸೆಯನ್ನು ಕೈಯಲ್ಲಿ ಹಿಡಿದು ಬೋರನು ಆಗತಾನೇ ಒಳಗೆ ಬರುವನು.]

ಈಕೆ: ಬೋರ! ದೇವೇರೀಗೆ ಹೇಳು…. ಬೆಳಿಗ್ಗೆ ರೂಮು ಗುಡಿಸೋವಾಗ… ಈ ಪುಸ್ತಕಗಳೆಲ್ಲಾ ಒಂದೊಂದೂ ತೆಗೆದು ಧೂಳಿಲ್ದೆ ತಿರಿಗಿ ಇಡದಿದ್ದರೆ ಮೊದಲ ತಾರೀಖು ಸಂಬಳಕ್ಕೆ ಬರಲೇಬೇಡಾಂತ… ಔಷಧಿ ತಂದೆಯಾ?

ಊಂ… ರ್ರವ್ವ,

ಈಕೆ: ಚಿಕ್ಕರಾಯರಿಗೆ ಕೆಮ್ಮು ಜಾಸ್ತಿ ಆಗಿದೆ… ಆರ್ಧ ರಾತ್ರೀಲಿ… ಪೋಲ್ಟೀಸಿಗೆ ಸ್ಟೌವ್ ಹಚ್ಚಬೇಕಾಗುತ್ತೋ ಏನೋ… ನಿದ್ದೆಹೋಗಬೇಡ… ನಾರಾಣಪ್ಪನಿಗೆ ಹೇಳು, ರಾಯರು ಬರೋ ಹೊತ್ತಾಯ್ತು… ಹಂಡೆ ಕಾದಿದ್ರೆ… ಚಿಕ್ಕಹಂಡೇ ತುಂಬಾ ತಣ್ಣೀರಿರಬೇಕು ಸ್ನಾನಕ್ಕೆ…. ಅಂತ. ಹೋಗು.

[ನಿಷ್ಕ್ರಮಣ]
*****

ದೃಶ್ಯ ೨

ಸ್ಥಾನ: ಹಿಂದಿನದು ಕಾಲ: ಸಾಯಂಕಾಲ ಸುಮಾರು ೭ ಘಂಟೆ.

[ಅಶ್ವತ್ಥನಾರಾಯಣನೂ, ರಂಗಣ್ಣನೂ ಬೀದಿಯ ಬಾಗಿಲಿನಿಂದ ಮುಂದಿನ ಕೋಣೆಗೆ ಬಂದು ರುಮಾಲುಗಳನ್ನು ಸಾವಕಾಶವಾಗಿ ಮಾತನಾಡುತ್ತಲೇ ತೆಗೆದು ಗೂಟಗಳಿಗೆ ತಗುಲಿಸಿ ಮಧ್ಯದಲ್ಲಿರುವ ಸೋಫಾದ ಮೇಲೆ ಕುಳಿತುಕೊಳ್ಳುವರು.]

ಅಶ್ವತ್ಥ: ಹನ್ನೆರಡು ವರ್ಷ ಆಯ್ತು ರಂಗೂ ನಿನ್ನೋಡಿ… ಆಗಿದ್ದ್‌ಹಾಗೇ ಇಧೀಯಾ !… ನನ್ನೋಡು! ಎಷ್ಟು differenceoo…. ಹಾಗೆ ಮ್ಯಾನೇಜ್ ಮಾಡ್ತೀಯಾ?

ರಂಗಣ್ಣ: ದೇವರೇ ಗತಿ! ನಿನ್ differenceಏನೋ ಗಮನಿಸ್ದೆ. ಆದರೆ ನಾನು ಆಗಿದ್ಹಾಾ…ಗೆ ಇದ್ದೇನೆ. ತಿಂಗಳು ತಪ್ಪದೆ ಇನ್ನೂರು ಮುನ್ನೂರು ರೂಪಾಯಿ ಬರ್ತಿದ್ದ ಕೆಲ್ಸಾನೂ ಓದರ್ಬಿಟ್ಟು ಹುಟ್ದಾರಭ್ಯ ನನ್ನ ರಕ್ತದಲ್ಲಿ ತುಂಬಾ ತುಳುಕ್ತಾ ನನ್ ಮಿದಳ್ಗೆ ಹತ್ತಿದ ನಾಟಕದ ಹುಚ್ಚಿಗೆ ಬಲಿಯಾಗಿ ವಂದ್ ತಿಂಗಳ ಸಾವಿರಾ, ಮೂರ್ ತಿಂಗಳ್ ಸೊನ್ನೆ, ಹೀಗೆ ಹಿಂದ್‌ ಮುಂದ್ ದೃಢವಿಲ್ದೆ ನಾನೇ ಪೇಚಾಡೋದಲ್ದೆ ನನ್ನ ನಂಬಿರೋ ಹತ್ತಿಪ್ಪತ್ತು ಹುಡುಗರ ಜೀವನಾನ್ನು ಜರಿಗಿಸೋ ಜವಾಬ್ದಾರೀಗ್ ಕೈಹಾಕಿ ಕಣ್ ಕಣ್ ಬಿಡತಿರೋ…

ಅಶ್ವತ್ಥ: [ಅಡ್ಡಮಾತಾಡಿ] ಇದಲ್ಲ ನಾನು ಕೇಳಿದ್‌ ರಂಗೂ! ನಿನ್ನ ದೇಹಸ್ಥಿತಿ.

ರಂಗಣ್ಣ: ಅದಕ್ಕೇನ್ಮಾಡೋದು… ಬಿತ್ತಿದ್ಹಾಗೇನೆ ಹೊರ್ತು ಬೆಳೆ… ಬಯಸಿದ್ದಾಗಲ್ಲ, ನಿನ್ನ ಕಾಲೇಜ್ ಲೈಫ್ ಎಲ್ಲಾ ಲೈಬ್ರೆರೀಲಿ-ನಂದು ಫುಟ್ಬಾಲ್ ಫೀಲ್ಡ್‌ನಲ್ಲಿ! ಫಲ-ನಿಂಗೆ ಬಂಗ್ಲೆ, ಕಾರು, ಪೊಸಿಷನ್‌ನ್ನು, ಪೆಲ್ಫು!… ನನಗೊ sound lungs, Sound digestion, supple muscles ಉ. ಈಗ ನನಗೆ ಇಲ್ಲದ ಸಂಪತ್ನ ಸಂಪಾದ್ಸೋದಾರಿ ಹುಡುಕ್ತಿಧೇನೆ ನಾನು. ನಿನಗಿರೋ dyspepsia ಅಜೀರ್ಣಾನ ಹೊಗಲಾಡಿಸಿಕೊಳ್ಳೋ ದಾರಿ ನೋಡ್ತಿಧೀಯ ನೀನು!

ಅಶ್ವತ್ಥ: ನಿಜ ರಂಗು… ಅಜೀರ್ಣ ಅನ್ನುತ್ಲು ಜ್ಞಾಪಕಕ್ಕೆ ಬರುತ್ತೆ. ನಿಂಗ್ ಹಸಿವೋ ಏನೊ!… ನನಗೆ ಡಾಕ್ಟರ್ ಹಾಕಿರೋ ಪ್ರೋಗ್ರಾಮು ಸೆವೆನ್ ಓ ಕ್ಲಾಕ್‌ಗೆ ಕೋಕೋ, hot bathಉ, breathing exercises ಉ, ಯೋಗಾಸನಾಸು, restoo: ಠಾಕೊ ಠಾಕ್ ಎಂಟು ಘಂಟೆಗೆ ಊಟ… ಈಗ ಏಳು ಆಗ್ತಾ ಬಂತು; ಹಸಿವೇ ?… ಇಲ್ಲಾ… ನೀನೂ ಕೋಕೋ ಕುಡ್ದು ಇನ್ನು ಒಂದು ಘಂಟೆ ಉಪವಾಸ… ಪರವಾ ಇಲ್ವೆ?

ರಂಗಣ್ಣ: Don’t be silly! ಹುಟ್ಟಿದಾರಭ್ಯ frendsoo! ಇದುವರೆಗೂ ಇಲ್ಲದ ಉಪಚಾರ ಈಗೇನು ಷುರು ಮಾಡಿಬಿಟ್ಟೆ?

ಅಶ್ವತ್ಥ: ಸರಿ ಹಾಗಾದ್ರೆ… (ಒಳ ಬಾಗಿಲ ಬಳಿ ಹೋಗಿ) ಇದ್ದೀಯಾ… ಕೋ ಕೋ … ಇಬ್ಬರಿಗೆ (ವಾಪಸು ಬರುತ್ತ ತಿರುಗಿ) ಊಟಾನೂ… ಇಬ್ಬರಿಗೆ! (ವಾಪಸು ಬರುತ್ತ ವಿಸ್ಮಯವನ್ನು ಸೂಚಿಸುತ್ತಿರುವ ರಂಗಣ್ಣನ ಮುಖವನ್ನು ನೋಡಿ) ಹೌದು ರಂಗೂ! ನಿನ್ನ ನಾನ್ last ನೋಡಿದಾಗ ನನ್’ wifeನ ಕಳ್ಕೊಂಡು, ಅವಳ್ ಬಿಟ್ ಹೊದ ಕೈಕೂಸ್ನೂ ಇಟ್ಕೊಂಡು ಪೇಚಾಡ್‌ತಿದ್ದೆ. ನನ್ ಮುದಿತಾಯಿ ದಿನವಹೀ ಎತ್‌ತಿದ್ದ Marriage Questionoo ಅಸಹ್ಯವಾಗಿದ್ರೂ, ಹಾಗೇ ನಾಲ್ಕೈದು ವರ್ಷ ಕಳೆದು ಬರ್ತಾ ಬರ್ತಾ ಬರ್ತಾ ನನಗೆ ಆಗಿದ್ದ ಅಲ್ಪ ಸ್ಥಿತೀಲಿ, ಕೂಸ್ನೂ ನೋಡ್ಕೋತಾ ಮನೇಕೆಲ್ಲಾನೂ ಮಾಡ್ತಾ ನರಳಿದ್ದ ನಮ್ಮಮ್ಮನ ಕಷ್ಟಾನ್ ನೋಡಲಾರ್ದೆ… (ಕಿರುನಗೆಯಿಂದ) Don’t be shocked!… ಇದು Social reform ಕಾಲ!… ಹದಿನೆಂಟಿಪ್ಪತ್ ವಯಸ್ಸಾಗಿ, ಗಂಡನ್ನ ಕಳ್ಕೊಂಡು ದಿಕ್ ಕೆಡ್ತಿದ್ದ ಒಬ್ಬ poor widowನ marriage ಮಾಡ್ಕೊಂಡೆ. ಆಗಿನಿಂದ ಈಗ್ಯೆ ಎಂಟು ವರ್ಷಾನೂ regular saint ಹಾಗೆ, ನಮ್ಮಮ್ಮ ಸತ್ತಮೇಲೆ ನನ್ನೂ ನನ್ delicate ಮಗನ್ನೂ ನೋಡ್ಕೊಳ್ತಿಧಾಳೆ, ನನ್ನ wifeಉ… God bless her!… ಈ ಸೆಕೆಂಡ್ ಮ್ಯಾರೇಜ್‌ನಿಂದ ಕೋಪಿಸಿಕೊಂಡ ನಮ್ಮ ಮಾವ ನನ್ನ ಹೆಂಡ್ತಿ ಬಿಟ್ಟು ಹೋದ ನನ್ನ ಮಗನ ಮೇಲಿನಾಶೆಯಿಂದ, ಆತನ ಎಪ್ಪತ್ತು ಸಾವಿರದ propertyಲಿ, ನನಗೆ ಮೂವತ್ತು, ಆ ನನ್ನ ಬೇಬಿ…. ಆತನ ಮೊಮ್ಮಗನಿಗೆ-ನಲವತ್ತೂಂತ ಹಂಚಿಬಿಟ್ಟು ಕಣ್ಣು ಮುಚ್ಚಿದ. ಇದೇ, ಮುಂದಕ್ಕೆ ನಾನು ನನ್ನ wifeನೂ ನನ್ನ ಮಗನ್ನೂ comfortable ಆಗಿ ಬಿಟ್ಟು ಹೋಗೋಕೆ assuranceಉ.

ರಂಗಣ್ಣ: ಮಗ delicateಏ..?… ವಯಸ್ಸೇನೂ?

ಅಶ್ವತ್ಥ:ಹನ್ನೆರಡು, ಡಾಕ್ಟ್ರು ಹೇಳ್ತಾನೆ, Consumptionಉ… Congenital ಊಂತ ಇನ್ ಹಾರ್ಟೂ ವೀಕು-ಅವರಪ್ಪನನುಗ್ರಹ!… ಅವನ್ನ ತನ್ನ ಮಗನ ಹಾಗೆ ನೋಡ್ಕೊಳ್ತಿಧಾಳೆ ಮನೆ ಕೆಲಸದ ಜೊತೇಕೆ… (ಕಣ್ಣುಗಳಿಂದ ಕೇಳುತ್ತ) ಆಕೊ ಬಂತು… ಕೋ ಕೋ !

[ಒಂದು ಬೆಳ್ಳಿಯ ತಟ್ಟೆಯ ಮೇಲೆ ಎರಡು ಬೆಳ್ಳಿಯ ಲೋಟಗಳ ತುಂಬ ಕೊಕೊ ತೆಗೆದುಕೊಂಡು ಅಶ್ವತ್ಥನ ಹೆಂಡತಿಯು, ಅವನಿಗದನ್ನು ಕೊಡಲು ಬಾಗಿಲನ್ನು ದಾಟಿ ಕೋಣೆಯೊಳಕ್ಕೆ ಎರಡು ಹೆಜ್ಜೆ ಬರುವಲ್ಲಿ ಅಶ್ವತ್ಥನು ಹೋಗಿ ಅವಳಿಂದ ಅವುಗಳನ್ನು ತೆಗೆದುಕೊಳ್ಳುವನು. ಅಶ್ವತ್ಥನನ್ನೇ ಹಿಂಬಾಲಿಸಿದ್ದ ರಂಗಣ್ಣನ ಕಣ್ಣುಗಳೂ, ದೀಪದ ಬೆಳಕು ಮುಖದ ಮೇಲೆ ಬಿದ್ದು ಹೊಳಪಾದ ಆಕೆಯ ಕಣ್ಣುಗಳೂ, ಕ್ಷಣಮಾತ್ರ ಸೇರುವುವು. ರಂಗಣ್ಣನು ಮೊದಲು ಬೆಚ್ಚಿ, ಮನಸ್ಸಿನಲ್ಲುದ್ಭವಿಸಿದ ಸಂಕಟವನ್ನೂ ಭಯವನ್ನೂ ಅಶ್ವತ್ಥನ ಕಣ್ಣಿಗೆ ಬೀಳದಂತೆ ತನ್ನ ನಟನಾಚಾತುರ್ಯದಿಂದ ಮರೆಸುವನು.]

ರಂಗಣ್ಣ (ಮೆಲ್ಲನೆ) ಅಯ್ಯೋ ದೇವರೇ… ಇದೂ ನಿನ್ನ ವಿಚಿತ್ರವೇ ?… ಇವಳಿಲ್ಲಿ ಬಂದ್ಲು ಇಲ್ಲೀ…!!?? ?

ಅಶ್ವತ್ಥ:ಇಕೋ, ಕೋ ಕೋ…

(ರಂಗಣ್ಣನ ಮುಂದೆ ಮೇಜಿನ ಮೇಲೆ ಒಂದು ಲೋಟವನ್ನಿಟ್ಟು, ತನ್ನ ಲೋಟದ ಕೋಕೋ ಕುಡಿದು ಬೀದಿಯ ಬಾಗಿಲ ಕಡೆ ನೋಡಿ “ಯಾರದು-ಬೋರನೇ?” ಎಂದು ಕೂಗುತ್ತ ಬಾಗಿಲ ಬಳಿ ಹೋಗಿ, ದುಡ್ಡು ಕೊಟ್ಟು ಬೋರನನ್ನು ಕಳುಹಿಸಿ ಬಲಗಡೆ ಇರುವ ತನ್ನ ದಿವಾನಖಾನೆಯ ಒಳಗೆ ಹೋಗುವನು.]

ರಂಗಣ್ಣ: ಹೌದೂ… regular Saintoo!… ತನ್ನ ಮಗನ ಹಾಗೇ ನೋಡ್ಕೊಳ್ತಿಧಾಳೆ, ಈ delicate boyನ ತ್ಸು! ತ್ಸು!! (ತಲೆದೂಗುತ್ತ) ಏನೋ. ಹೀಗೊಂದ್ವೇಳೆ, ಹಳೇ ಚಾಳೀನೆಲ್ಲಾ ಹೂತಿಟ್ಟು ಈತನ ಗುಣಕ್ಕನುವಾಗಿ ಇರ್ತಿರೋಳ್ನ, ಬದುಕಿಲ್ಲದೆ ಒದ್ದೋಡಿಸೊದು ಧರ್ಮವಲ್ಲ!… ಇಲ್ಲಿಂದ ಹೊರಟು ಹೋಗೋದೇ best thingoo!. ಹೌದೂಊ! ಇನ್ನು ಮುಂದೆ ಯಾವಾಗಲಾದರೂ ಇವಳ ಚರಿತ್ರೆ ನನ್ನ ಸ್ನೇಹಿತನ ಕಿವಿಗೆ ಬಿದ್ದುಗಿದ್ರೆ… ಇವಳ ಗತಿ ಏನೂ ?!… ಇಲ್ಲಾ, ಮಾಡಿದ ಪಾಪಕ್ಕೆ ಪಶ್ಚಾತ್ತಾಪಪಟ್ಟು ಇದುವರೆಗೂ ಯೋಗ್ಯಳಾಗಿ ಇದ್ದದ್ದೂ ವ್ಯರ್ಥವಾಗಿ ಕಾಡುಪಾಲಾಗೊ ಗತಿ ಸಂಭವಿಸದ್ಹಾಗೆ ನೋಡ್ಕೊಳ್ಳೋದೂ ನನ್ನ ಧರ್ಮ… ಇಂಥಾ ಸನ್ನಿವೇಶದಲ್ಲಿ… ಇವನ ಅಭಿಪ್ರಾಯಾನ ಈಗಲೇ ಇತ್ಯರ್ಥ ಮಾಡಿಕೊಂಡರೇನೇ ನನ್ನ ಮುಂದಿನ ಕ್ರಮಾನ ವಿಂಗಡಿಸ್ಕೋ ಬಹುದು ನಾನು !… ಹ್ಯಾಗೆತ್ತೋದು ಈ ಮಾತ್ನ… ಇವನ ಹತ್ತ್ರ?

(ಅಂಗೈಯಲ್ಲಿ ಮುಖವನ್ನು ಮುಚ್ಚಿ ನಿಟ್ಟುಸಿರಿಡುವನು)

ಅಶ್ವತ್ಥ: (ಕೋಟನ್ನು ಬಿಚ್ಚಿಟ್ಟು, ಭುಜದ ಮೇಲೆ ಪಂಚೆಯನ್ನೂ ಟವಲನ್ನೂ ಹಾಕಿಕೊಂಡು, ಬಲಗೈಯಲ್ಲಿ ರಂಗಣ್ಣನಿಗೋಸುಗ ಟವರೊಂದನ್ನೂ ಎಡಗೈಯಲ್ಲಿ ಒಂದೆರಡು ವರ್ತಮಾನ ಪತ್ರಿಕೆಗಳನ್ನೂ ಮಾಸಪತ್ರಿಕೆಗಳನ್ನೂ ಹಿಡಿದುಕೊಂಡು ಕಿರುಮನೆಯಿಂದ ಹೊರಬಿದ್ದ ಅಶ್ವತ್ಥನು ಅದುವರೆಗೆ ಬೀದಿಯ ಬಾಗಿಲಿಗೆ ಬಂದಿದ್ದ ಬೋರನ ಕೈಯಿಂದ ಸಿಗರೇಟು ಪ್ಯಾಕನ್ನೂ ಬೆಂಕಿಯ ಪೆಟ್ಟಿಗೆಯನ್ನೂ ತೆಗೆದುಕೊಂಡು, ಮೇಜಿನ ಬಳಿ ಬಂದು, ಸೋಫಾದ ಮೇಲೆ ಟವಲನ್ನು ಹಾಕಿ] ಇಕೋ ಟವಲು -some old magazines you are usually fond of looking into… and…ನಿನ್ನ poisonoo. ನಿನ್ನ ಹಳೇ ಅಭ್ಯಾಸಾನ ನಾನಿನ್ನೂ ಮರ್ತಿಲ್ಲ!

(ಸಿಗರೇಟ್ ಪ್ಯಾಕನ್ನು ಮೇಜಿನ ಮೇಲಿರಿಸಲು ಹೋಗಿ ಕೋಕೋ ಹಾಗೆಯೇ ಇದ್ದದ್ದನ್ನು ನೋಡಿ!

ಇದೇನು ಕೋಕೊ ಹಾಗೇ ಇಧೆ!? (ರಂಗಣ್ಣನ ಕಡೆ ಚೆನ್ನಾಗಿ ನೋಡಿ] ಇದೇನು ?… ಯೋಚನೆ ನಿಂಗೆ… ಈಗ ?…

ರಂಗಣ್ಣ … ಏನೂ ಇಲ್ಲಾ… – [ಕೋಕೋ ಕುಡಿದು, ಸಿಗರೇಟನ್ನು ಹಚ್ಚಿ ಸೇದುತ್ತಾ] ಒಂದು smail problemಉ… psychologicalಊ… to err is human… to forgive is divine ಕೇಳಿಲ್ವೇ ?… Repent and ye shall be forgiven ಅಂತ ಹೇಳತ್ತೆ ಬೈಬಲ್ಲು. [ಹೊಗೆಯನ್ನು ಬಿಡುತ್ತ]

ಅದೇ ಪ್ರಕಾರ ಬರುತ್ತೆ ಪ್ರಾಬ್ಲಮ್ಮ… ನನ್ನ ಡ್ರಾಮಾದಲ್ಲಿ ಒಂದು situation ಇದು! Erring wifeoo… ಜಾರಿದ್ರೂನೂವೆ, ಅವಳ ಆಮೇಲಿನ ಒಳ್ಳೇ ನಡತೇನ ಗಮನಿಸಿ ಅವಳ ಕ್ಷಮಿಸಿ ಆದರಿಸೋದ್‌ ತಾನೆ… correct solutionoo…?

ಅಶ್ವತ್ಥ: ಹೌದು, ನಿಮ್ಮ ನಾಟಕದಲ್ಲಿದೇ Correct solutionoo!… ಸಮಾಜ ಜೀವನದಲ್ಲಿ incorrectoo… ಸಮಾಜದ ಕಣ್ಣು ಮುಂದೆ, ಹೆಂಡತಿ, ಮನೆ, ಮಕ್ಕಳು ಅಂಬೋ ಜವಾಬ್ದಾರೀನ ಒಪ್ಪೋಂಡು ಇವರಿಗೂ ಕೂಳೊದಗಿಸೋಕೆ ದಿನವಹಿ ಮೈಯಿ ಮುರಿಯೋ ಹಾಗೆ ದುಡೀತಿರೋ ಗೃಹಸ್ಥನಿಗೇ… ನಿಮ್ಮ ನಾಟಕದ ಲೆಕ್ಕಾಚಾರ ಸರಿ ಬೀಳೋದಿಲ್ಲ. ಸಮಾಜದಲ್ಲಿ… ಜಾರಿದ ಸ್ತ್ರೀ ಮತ್ತಿರಿಗೆ ಜಾರಿದ್ದರಿಂದ ತನ್ನ ಕುಟುಂಬಕ್ಕೂ ಗಂಡನ ಕುಟುಂಬಕ್ಕೂ ಆಗೊ ಅಪಮಾನಕ್ಕೇ ಅಲ್ದೆ, ಮುಂದೆ ತಮ್ಮ ಮಕ್ಕಳಿಗೂ ಆಗಬಹುದಾದ ಅನಾಹುತಕ್ಕೆ ಆಸ್ಪದಾ ಕೊಡದೇನೂ ಮನೆಯಿಂದ ಒದ್ದು ಓಡ್ಸೋದೊಂದೇ ದಾರಿ… ಕೊಪಿಸ್ಕೋಬೇಡಾ, ನಿನ್ನ ಹೃದಯಕ್ಕಿಂತ ನನ್‌ದೇನೂ ಕಠಿಣವಲ್ಲಾ… ಆದ್ರೂನೂವೆ ನೀನು ಹೇಳೋ ದಾರಿ ನಿನ್ನ stageಗೂ public lecturerಗೂ ಸರಿಹೋಗುತ್ತೇಯೇ ಹೊರ್ತು… ಸಮಾಜ ಸರಿಯಾಗಿ ಬದುಕೋ ದಾರಿ ಅಲ್ಲ. ವ್ಯಕ್ತಿ ಸಮಾಜದ ಸುಖಕ್ಕೇ ಹೊರತು, ಸಮಾಜ ವ್ಯಕ್ತಿ ಸುಖಕ್ಕಲ್ಲ- except of course you artistಊ- ಯಾಕೇಂದ್ರೆ ನೀವು ಮೊದಲೇ abnormalಉ. ನಿಮ್ಮಿಂದ ಸಮಾಜಕ್ಕಾಗೋ abnormal ಲಾಭಾನಾ ಗಮನಿಸ್ಯೇ, ನನ್ನಂಥಾ normal ವ್ಯಕ್ತಿಗಳಲ್ಲಿ ಕಂಡುಬಂದ್ರೆ ತಪ್ಪೂಊಂತ ತೋಚೋ albnermalities ನಿಮ್ಮಲ್ಲಿ ಕಂಡುಬಂದ್ರೂನೂವೆ, ಒಟ್ಟಿನಲ್ಲಿ ಈಗಿನ ಸಮಾಜಕ್ಕೂ ಇನ್ನು ಮುಂದೆ ಬರೋ ಸಮಾಜಕ್ಕೂ ನಿಮ್ಮಿಂದಾಗೋ ಪ್ರಯೊಜನಾನ್ನ ನಿಮ್ಮ ತಪ್ಪುಗಳಿಗೆ ಎದುರು ತೂಗಿ ಕಣ್ಣು ಮುಚ್ಚಿಕೊಂಡು condone ಮಾಡ್ತವೆಯೇ ಹೊರ್ತು, ಸಮಾಜಕ್ಕಾಗೋ ಲಾಭಾ ವಂದಿಷ್ಟೂ ಇಲ್ದಿದ್ರೆ ಸಾಮಾಜಿಕ ಜೀವನದಲ್ಲಿ ನಿಮಗೆ, ಸ್ಥಳವೇ ಇಲ್ಲ. ಆದ್ರಿಂದ ಜಾರಿದ ಹೆಂಗ್ಸು ತಿರಿಗಿ ಜಾರ್ಕೊಳೊಂಬೋದ್ನ ಮರೀದೆ, ಮನೆತನದ ಮಾನವನ್ನ ಕಾಪಾಡಿಕೊಳ್ಳೋದು ಮುಖ್ಯವೇ ಹೊರ್ತು, ಮನೆತನದ ಮಾನವನ್ನು ಮರೆತು ತನ್ನ ಗಂಡನೊದಗಿಸ್ದ, ಅನ್ನದಿಂದ ಬೆಳೆದ ರಕ್ತಮಾಂಸದ ಕೊಬ್ಬನ್ನ ಕರಗಿಸಿಕೊಳ್ಳೋಕೇಂತ ಜಾರಿದ ವ್ಯಕ್ತಿಯ ಮುಂದಿನ ಗತೀನ ಗಮನಿಸೋಕೆ ಬಿಡುವಿಲ್ಲ-ಗೃಹಸ್ಥನಿಗೆ! ಅದು ಹೋಗಲಿ ; comfortable ಆಗಿ ಓದ್ತಿರು. Exerciseoo, ಸ್ನಾನಮುಗಿಸಿಕೊಂಡು ಬಂದ್ ಬಿಡ್ತೇನೆ ಭೇಗ .. say in twenty mintues

[ನಿಷ್ಕ್ರಮಣ] 

ರಂಗಣ್ಣ: ಚೆನ್ನಾಗಿದೆ situationoo! ಇವಳ ಸ್ವಭಾವ ಮುಂಚಿನ ಹಾಗಿದ್ರೇನೋ… ಅಶ್ವತ್ಥನಿಗಪಾಯ… ಇಲ್ಲಾ, ಇವಳು ಈಗ ನೆಟ್ಟಗಿದ್ದು, ಇವಳ ಚರಿತ್ರೆ ಇವನ ಕಿವಿಗೆ ಬಿದ್ರೇನೋ ಇವಳಿಗೆ ಅಪಾಯ ಮುಂದಕ್ಕೆ… ಈಗೇನ್ ಮಾಡೋದು ನಾನು ?… [ಹಂಡೆಯ ನೀರನ್ನು ಚೊಂಬಿನಿಂದ ತುಂಬಿ ಸ್ನಾನ ಮಾಡಲು ಸುರಿಯುತ್ತಿರುವ ಶಬ್ದ}

[ಅಶ್ವತ್ವನ ಹೆಂಡತಿಯು ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ ರಂಗಣ್ಣನ ಬಳಿ ಬಂದು ಸ್ವಲ್ಪದೂರದಲ್ಲಿ ನಿಲ್ಲುವಳು]

ಈಕೆ: (ನಡುಗುವ ಸ್ವರದಲ್ಲಿ… ಈಗೇನ್ಮಾಡ್ತೀರಿ… ಹೇಳೇ ಬಿಡ್ತೀರಾ..?

ರಂಗಣ್ಣ: ಹೇಳದೇ ಏನೂ?… ನನ್ನ ಪ್ರಾಣಸ್ನೇಹಿತ!?… ನನ್ನ ನೀನು ಬಿಟ್ಟಿಟ್ಟು ಹೋದ ಹಾಗೆ ಆತನೂ ಕಿಚ್ಚಿನ ಪಾಲುಮಾಡಿ ಹೊಗೊ ಅಪಾಯದಿಂದ ತಪ್ಪಿಸೋದು ನನ್ನ ಧರ್ಮ, ನನ್ನ ಸ್ನೇಹಿತನಿಗೆ ಹೇಳದೇ ಇರೋ…

ಈಕೆ: (ಅಡ್ಡಮಾತಾಡಿ) … ಹಯ್ಯೋ … ನೀವೋ… ಜ್ಞಾನವಿಲ್ಲೆ ಬಿದ್ದಿದ್ರಿ… ಆ ಡಾಕ್ಟ್ರೋ… ಬೆಳಕು ಹರಿಯೋತನಕ ಪ್ರಾಣಗಳಿರೋದಿಲ್ಲಾಂದೇ ಬಿಟ್ರು…!! ನಾನೇನ್ಮಾಡೋದು ?… ಹೊಸೂರು… ಹೊಸ ಜನರು… ನಾಟಕದೋರು ಸುತ್ತು ಮುತ್ತಲೂ… ವಯಸ್ಕ ಚಿಕ್ಕದು. ಇನ್ ಜ್ಞಾನ ಬೇರೇ ಬರೋದಿಲ್ಲಾಂದ ಡಾಕ್ಟ್ರು… ಇನ್ನು ಹ್ಯಾಗಿದ್ರೂ ನೀವು ತಪ್ಹೋದ್ರಿಂತ ಗಟ್ಟಿ ಮಾಡ್ಕೊಂಡು ನಮ್ಮಮ್ಮನ ಜ್ಞಾಪಿಸ್ಕೊಂಡು ನಿಮ್ಮನ್ನ ಬಿಟ್ಟು ಹೋದಾಗ, ನನ್ನ ಮೈಮೇಲೆ ಜ್ಞಾನವೇ ಇರಲಿಲ್ಲ ಅಂದ್ರೆ… ವಂದೇ ಜ್ವರದಲ್ಲಿ ಮೂರು ತಿಂಗಳು ಬಿದ್ಕೊಂಡೆ…. ನಾನು ಬದುಕಿದ್ದೆ ಪುನರ್ಜನ್ಮ!… ಆಮೇಲೆ ವಿಚಾರಿಸ್ದೇ ಇದ್ದ ಜನಗಳೇ ಇಲ್ಲ… ಓದ್ದೇ ಇದ್ದ ಪೇಪಲೇ ಇಲ್ಲ… ನಿಮ್ಮ ಸುದ್ದಿನೇ ಇಲ್ಲ!… ಕೂದ್ಲೂ ಹೋಗಿ ಕೆಂಪು ಸೀರೇನೋ ಕಟ್ಕೊಂಡು ನಮ್ಮಮ್ಮ ಸತ್ತದ್ರೂ ಕಣ್ಣಾರೆ ನೋಡಿ, ದಿಕ್ಕಿಲ್ದೆ, ದೆಶೆ ಇಲ್ದೆ ನಾನು ಪಟ್ಟ ಪಾಡು ಪರಮಾತ್ಮನಿಗೆ ಗೊತ್ತು! ಈಗ ನಿಮಗೊತ್ತು! ಈಗ ನಿಮ್ಮ ಮನಸ್ಸಿಗೆ ನನ್ನ ತಪ್ಪು ಹಾಗಿದ್ರೂನೂವೆ ನನ್ನ ಮನಸ್ಗೇನೊ ನೀವು ಬನ್ನಿ ಚೆನ್ನಾಗಿರೋದು ಎಷ್ಟು ಸಂತೋಷಾಂತ ಬಾಯಿಂದ ಹೇಳಲಾರೆ…

(ಮುಂದಕ್ಕೆ ಮೆಲ್ಲನೆ ಸರಿದು ರಂಗಣ್ಣನ ತೋಳಿನ ಮೇಲೆ ಕೈಗಳನ್ನಿಡಲು ಉದ್ಯುಕ್ತಳಾಗುತ್ತ ] …. ಈಗೇನ್ಮಾಡ್ತೀರಿ..?

ರಂಗಣ್ಣ: ಮಾಡೋದೇನು! [ಅವಳೆರಡು ಕೈಗಳನ್ನೂ ತೆಗೆದು ತನ್ನ ಕೈಗಳಲ್ಲಿ ಹಿಡಿದುಕೊಂಡು]

ನಿನ್ನ ಗಂ… ಅಲ್ಲ ನನ್ನ ಸ್ನೇಹಿತನಿಗೆ… ಯಾರ ತಪ್ಪೂ ಇಲ್ದೆ ಒದಗಿರೋ ಈ ಸನ್ನಿವೇಶಾನ ಇತ್ಯರ್ಥ ಮಾಡಿ ಬಿಟ್ಟು…

ನಾವಿಬ್ಬರೂ ಇಲ್ಲಿಂದ ಈಗ್ಗೆ ಹೊರಡೋದಲ್ಲಿ ಬೇರೇ ಏನು ಮಾಡೋದು?

ಈಕೆ: ಈಗೆಲ್ಲಿಧೀರಾ… ಕಂಪ್ನೀನೇ… ಕಲೆಕ್ಷನ್ನೂ… ಸಂಪಾದ್ನೇ…?

ರಂಗಣ್ಣ: ನನ್ನ ಕಂಪ್ನಿ ಹೋಗಿ ನಾಲಕ್ ವರ್ಷದ ಮೇಲಾಯ್ತು. ಈಗ್ ನನ್ ಸಂಪಾದ್ನೇ…. ನಲವತ್ತು ಐವತ್ತಕ್ಕೆ ಇಳಿದಿದೆ. ಆದರೇನು (ಹತ್ತಿರ ಬರುತ್ತಾ)… ನಾವಿಬ್ಬರೂ… ಅನ್ಯೋನ್ಯವಾಗಿರೋವಾಗ ಐವತ್ತು ಆದರೇನು, ಐದು ಆದರೇನು… ಆತ ಬಂದ್ ಮೇಲೆ ಹೇಳಿ ಹೋಗೋದೆ…?…

(ಸ್ವಲ್ಪ ಯೋಚಿಸಿ, ಮೇಜಿನ ಹತ್ತಿರ ಸರಿದು ಲೇಖಣಿಯನ್ನು ಮಸಿಯಲ್ಲಿ ಅದ್ದಿ ಕಾಗದದ ಮೇಲೆ ಬರೆಯಲುದ್ಯುಕ್ತನಾಗುತ್ತ)…

ಇಲ್ಲಾ… ಬರೆದುಬಿಟ್ಟು ಹೋಗೋದೇ ಮೇಲು…

ಈಕೆ: (ಹಾರಿಹೋಗಿ, ಬರೆಯುವ ಆತನ ಕೈಯನ್ನು ನಿಲ್ಲಿಸಿ) ಅಯ್ಯೋ ಬೇಡೀಂದ್ರೆ… ಇಲ್ಲಿ ಬನ್ನಿ ಹೇಳ್ತನೆ.

[ರಂಗಣ್ಣ ಮುಂದಕ್ಕೆ ಬರುವನು]

ಇದೀಗ್ಲೇ ತಿಳಿದುಬಿಟ್ರೆ ಇವರಿಗೆ, ಆತನಿಗೂ ವಳ್ಳೇದಲ್ಲ. ನಮ್ಮಿಬ್ಬರಿಗೂ ವಳ್ಳೇದಲ್ಲ!!

ರಂಗಣ್ಣ: ಆತನಿಗೂ ವಳ್ಳೇದಲ್ಲಾ?! ಅದ್ಹ್ಯಾಗದು…?

ಈಕೆ: ಈಗ ನೋಡಿ! ಆತನಿಗೆ ಮೈ ಚೆನ್ನಾಗಿಲ್ಲ… heartಊಂತಂತಾರಲ್ಲ… ಹೃದ್ಯ. ಅದು ಸರಿಯಾಗಿಲ್ಲವಂತೆ, ಡಾಕ್ಟ್ರು ಹೇಳಿದ್ದಾರೆ. ಥಟ್ನೆ ಏನಾದ್ರೂ ಆದ್ರೆ ನಿಂತೇ ಹೋಗುತ್ತದೆ. ಹೀಗಿರೋವಾಗ ಅವ್ರಿಗೂ ಆಪಾಯಾನ್ ತಂದಿಡ್ದೆ… ಸ್ವಲ್ಪ ದಿನದ ಮಟ್ಟಿಗೆ ನಾವಿಬ್ಬರೂ ಬೇರೆ ಬೇರೆಯಾಗಿಬಿಟ್ರೆ, ನಮಗೆ, ಇನ್ ಕೊಂಚ ದಿನದಲ್ಲಿ… ಆತನ ನಂತರ ಸೌಖ್ಯವಾಗಿರೋದು… ಬಿಟ್ಟು… ನಿಮ್ಮ ಈ ಚಿಕ್ಕ ಸಂಪಾದ್ನೇಲಿ, ನನ್ನ ಜವಾಬ್ದಾರೀನೂ ಯಾಕ್ ಕಟ್ಟಿಕೋಬೇಕೂಂದ್ರೆ ನೀವು ?

ರಂಗಣ್ಣ: ಆತನ ನಂತರ… ಬರೋ… ಸೌಖ್ಯವೇನು? ಈಗಿಲ್ಲದ್ದು?

ಈಕೆ: ಇಲ್ನೋಡೀಂದ್ರೆ… ವಿಲ್ ಬರ್ದಿಧಾರೆ! ಎಪ್ಪತ್ತು ಸಾವಿರ ಅವರ ಆಸ್ತಿ! ಮೂವತ್ತು ನನಗೆ!… ಕೆಮ್ಮಿ ಕೆಮ್ಮಿ ಹಗಲು ರಾತ್ರಿ, ನನಗೆ ಬಿಡುವೂ ನಿದ್ರೇನೂ ತಪ್ಪಸ್ತಾ ಕ್ಷಯರೋಗ ಹಿಡಿದ ಆ ಹುಡುಗನಿಗೆ ನಲವತ್ತು…. ಇನ್ನವನಿಗೆ ಹದ್ನೆಂಟು ವಯಸ್ಸು ತುಂಬೋವರ್ಗೂ ಆ ದುಡ್ಡಿನ್ ಬಡ್ಡಿ ನನ್ ಕೈಲಿ!… ಆ ವಯಸ್ಸು ನೋಡೋ ಹಾಗೂ ಇಲ್ಲ ಅವನು…. ಇನ್ನು ಈ ಮುದಿಗೊಡ್ಡೋ … ನಿಮ್ಮಂಥಾವರು ಸುಮ್ಮನೆ ನೂಕಿದರೆ ಪ್ರಾಣ ಬಿಟ್ ಬಿಡುತ್ತೆ! ಡಾಕ್ಟ್ರು ಹೇಳಿದ್ದರ ಮೇಲೆ ನಿಮಗೂ ಅಪಾಯವಿರೋದಿಲ್ಲ! ಹೀಗಿರೋವಾಗ ಎಷ್ಟು ಬೇಗ… ಈತನ ವಿಲ್ಸಿನ ಲಾಭಾ ನಮ್ಮ್ ಗೊದಗುತ್ತೋ ಅಷ್ಟು ಬೇಗ ನಾವಿಬ್ರೂ…

ರಂಗಣ್ಣ: ಎಷ್ಟು ಬೇಗಾ….ಂ..ದ್ರೆ? ಇವತ್ತು ರಾತ್ರೀನೇ ಅಂತ ಇಟ್ಕೊ-ಮಸಲ-ನೀನು ಹೇಳಿದ ಹಾಗೆ ನಾನು ತಿಳಿದೇ ನೂಕಿ… ಒಂದುವೇಳೆ… ಆತನು… [ಮುಖದಲ್ಲಿ ಭಯವನ್ನು ಪ್ರಕಟಿಸುವನು]

ಈಕೆ:ಅಯ್ಯೋ ಬೆದರಬೇಡಿ ಅಂದ್ರೆ ! ಡಾಕ್ಟ್ರು ಹೇಳಿಧಾರೆ!

ರಂಗಣ್ಣ: ಆ ಮೇಲೆ…?

ಈಕೆ: ಆ ಮೇ ಲೇ ನು! (ಹತ್ತಿರ ಸರಿದು ರಂಗಣ್ಣನ ಕೈಯನ್ನು ಹಿಡಿದು ಸವರುತ್ತಾ… ಥಟ್ಟನೆ] ಅಕೋ! ಬರ್ತಿದ್ದೆ! (ಅವನ ಕೈಯನ್ನು ಕೊಡವಿ ಬಾಗಿಲಿನ ಹತ್ತಿರಕ್ಕೆ ಓಡಿ ಹೋಗಿ ಅರ್ಧ ಹಿಂತಿರುಗಿ] ನಮ್ಮಿಬ್ಬರ ಸೌಖ್ಯಕ್ಕೆ…. ದೇವರು… ನಿಮ್ಮ ಧೈರ್ಯಾನೇ ದಾರಿ… ತೋರಬೇಕು.

[ಮುಗುಳುನಗೆಯೊಡನೆ]

ನಮ್ಮಿಬ್ಬರ ಮುಂದಿನ ಗತಿ ನಿಮ್ಮ ಕೈಯಲ್ಲೇ ಇದೆ.

[ಹೋಗುವಳು]

ರಂಗಣ್ಣ: (ಸಿಗರೇಟೊಂದನ್ನು ಹಚ್ಚಿಸಿಕೊಳ್ಳುತ್ತ… ತಾನೇ)

ಚನ್ನಾಗಿದೆ … Tragic situationಉ grotesquely comic back-groundಊ-ಬೇಕಾದಹಾಗೆ ಈಗ ನನ್ನ ನಗು, poor ಅಶ್ವತ್ಥನಿಗೆ ಮುಂದೆ ಬರೋ shockಗೆ, background ಊ!… ಇರ್ಲಿ… ಇನ್ನು ಈ ಗಂಡಸ್ಕತ್ರಿ ಈ ಮುಖವ್ಯಾಘ್ರದ ಬಾಯಿಗೆ ನಾನು ತುತ್ತಾಗೋದಿರಲಿ, ನನ್ನ ಸ್ನೇಹಿತನೂ ಅವನಿಗಿರೋ ಮಗನೂ ತುತ್ತಾಗದ ಹಾಗೇ safeguard ಮಾಡೋದೊಂದೇ ಈಗ ನನ್ನ ಧರ್ಮ!

[ಹೊಗೆಯನ್ನು ಬಿಡುತ್ತ ಯೋಚಿಸುತ್ತಿರುವನು] [ಅಶ್ವತ್ಥನು ಬರುವನು]

ಅಶ್ವತ್ಥ: Sorry ರಂಗೂ! ಇಷ್ಟು late ಆದ್ದಕ್ಕೆ…. ಇದೇನಿದು… Worried ಆಗಿಧೀಯಾ …?

ರಂಗಣ್ಣ: ಏನೂ ಇಲ್ಲ…. ನಾಳೆ ನನ್ನ drama, tragic endಊ, ರಿಹರಲ್ಲೂ ಮಾಡ್ದೇನೇ ಅಂತೊಪ್ಕೊಂಡಿದ್ದೆ, ನಮ್ಮ conductor ಹತ್ರ, ಅದನ್ನು ಮರೆತು ಇಲ್ಲಿಗೆ ಬಂದ್ರೂ, ಈ atmosphereನಲ್ಲಿ ನಾನೇ ಒಂದ್ ಸಾರ್ತಿ ರಿಹರ್ಸಲ್ ಮಾಡ್ಕೊಬೇಕೂಂತ ಯೋಚಿಸ್ತಾ ಇದ್ದೆ… ಆದರೆ ಇನ್ನೊಬ್ಬ Partner ಇದ್ದಿದ್ರೆ… perfect ಆಗಿರೋದು,

(ಹೊಗೆಯನ್ನು ಬಿಡುವನು]

ಅಶ್ವತ್ಥ: Why not get on? ರಂಗಣ್ಣ ಹಾಗಾದ್ರೆ CO-Operate ಮಾಡ್ತೀಯಾ … ನಿಜವಾಗಿ?

ಅಶ್ವತ್ಥ: Certainly!…. ನನಗ್ಯಾವಾಗಲೂ ರಂಗೂ, ನಿನ್ನ brilliance oth-the stageಉ ಎಷ್ಟರ ಮಟ್ಟಿಗೆ extermporeಉ… ಎಷ್ಟರಮಟ್ಟಿಗೆ practised ಊಂತ wonder ಮಾಡ್ತಿದ್ದ ನನಗೆ ನಿನ್ನ ಈ ರಿಹರಲ್ ನೋಡೇಬೇಕೂಂತ ಅನ್ನಿಸುತ್ತೆ. ———————————————————

ರಂಗಣ್ಣ ನೋಡು ! ಆದ್ರೆ or one Condition, ಯಾಕೇಂದ್ರೆ… situation seriousoo…. ಮರ್ಡರ್ ಸೀನೂ !

ಅಶ್ವತ್ಥ: Condition ಏನೋ !? ರಂಗಣ್ಣು ಏನೂ ಇಲ್ಲ… ನೀನು ಸುಮ್ಮನೆ ಸೋಫಾ ಮೇಲೆ ಮಲಕೊಂಡಿರಬೇಕು. ಒಂದ್ five minutes… during that time ನಾನು ಏನೇ ಮಾತನಾwfli, ಎಷ್ಟು ತಾನೇ ಕಿರಿಚಿಕೊಳ್ಲಿ… ಒಂದನ್ನೂ ಗಮನಿಸದೆ ತೆಪ್ಪನಿರಬೇಕು. ಮಧ್ಯದಲ್ಲಿ disturb ಮಾಡಿದ್ಯೋ…. ನಾನು ರಂಗಣ್ಣ ನೀನು ಅಶ್ವತ್ವ: ನಾನು ಗೆಸ್ಟು, ನೀನು ಹೋಸ್ಟು, ಅಂಬೋದು ಜ್ಞಾಪಕಕ್ಕೆ ಬಂದು ನನ್ನ atmosphere ಕೆಟ್ಟುಹೋಗುತ್ತೆ. ನಾನು murdereroo …. ನನ್ನ ಕೆಲಸದಲ್ಲಿ ನನ್ನ actionsoo ನನ್ನ voiceoo ಕೇಳಿ ಹೆದರ್ಬಾರ್ದು, Quiet ಆಗಿ ಬಿದ್ದುಕೊಂಡಿರ್ತಿಯಾ …Promise ಏ?

ಅಶ್ವತ್ಥ: ಹೋ! ready!

[ಅಶ್ವತ್ಥನು ಸೋಫಾದ ಮೇಲೆ ಮಲಗಿಕೊಳ್ಳುವನು)

ರಂಗಣ್ಣ (ದೀಪವನ್ನು ಸಣ್ಣದು ಮಾಡಿ) Low lightಊ !! [ಗಟ್ಟಿಯಾಗಿ You have no right to keep her here… ನನ್ನ ಹೆಂಡ್ತಿ ಅವಳು! ನಿಂಗೆ ಹಕ್ಕಿಲ್ಲ!… ಹಯ್ಯೋ… ಹಯೊ … ಹಯೋ- ಹಯ್ಯೋ- ರಂಗಣ್ಣ-ಬೇಡ-ಬೇಡ-ಬೇಡ-ಬೇಡಾ… Be damned.

(ಸುತ್ತಮುತ್ತಲಿರುವ ಕುರ್ಚಿ, ಮೇಜು ಇತ್ಯಾದಿಗಳನ್ನು ತಳ್ಳಿ ದಬ್ಬಿ ನೂರಾರು ಜನಗಳ ಗಲಾಟೆಯನ್ನು ಹೊರಡಿಸುತ್ತಾ ಸಾಯಿ… ಸಾಯಿ… ಅಯೋ-ಅಯೋ–ಅಯ್ಯೋ-ಅಯ್ಯೋ- ಅಯ್ಯೋ-ಆ

(ಅಶ್ವತ್ರನ ಕೊರಳಿನ ಮೇಲೊಂದು ದಿಂಬನ್ನಿಟ್ಟು ಅದುಮಿ, ಮುಖದ ಮೇಲೆ ಒಂದು ಟವಲನ್ನು ಮುಚ್ಚಿ, ಮೆಲ್ಲಗೆ ಹಲ್ಲುಗಳ ಸಂದಿಯಲ್ಲಿ)

ಸುಮ್‌ ನಿರು !! Part of my rehearsal!!

[ಒಂದು ನಿಮಿಷಪೂರ್ತಿ ಕೋಣೆಯಲ್ಲಿ ನಿಶ್ಯಬ್ದ ]

ಬಾಗಿಲು ಮಲ್ಲನೆ ತೆರೆಯುವುದು. ಆಸೆ, ಸಂತೋಷ, ಕೊರತೆ, ಮತ್ತು ಜಯ ಇವುಗಳನ್ನು ಕಣ್ಣಿನಲ್ಲಿ ಹೊಳೆಯಿಸುತ್ತಾ ಹಾವಿನಂತೆ ಮೆಲ್ಲನೆ ಆಕೆಯು ಒಳಗೆ ಸರಿದು ಬರುವಳು. ರಂಗಣ್ಣನು ದೀಪವನ್ನು ಹೆಚ್ಚಿಸುವನು.)

ಈಕೆ: (ಗಟ್ಟಿಯಾದ ಪಿಸುಮಾತಿನಲ್ಲಿ ] ಆಯ್ತೆ?… ಆಗಿಹೋಯ್ತೇ ? ಎಲ್ಲಾ ಆಗಿಹೋಯ್ತೆ ?

ರಂಗಣ್ಣ: ಹೌದು! ಎಲ್ಲಾ ಆಗಿಹೋಯ್ತು. ಪೋಲೀಸಿನೋರ ಹೆದರಿಕೇನೂ ಇಲ್ಲ!… ಕುತ್ತಿಗೆನ ಹಿಸುಕಿದ ನನ್ನ ಬೆರಳುಗುರ್ತು ಕಂಡುಬರದ ಹಾಗೆ ದಿಂಬನ್ನಿಳ್ಕೊಂಡು… ಎಲ್ಲಾ ಆಗೋಯ್ತು !… ಈಗ ಮುಂದಿನ ಕ್ರಮ….?

[ಆಕೆಯು ಸೋಫಾ ಬಳಿಗೆ ಬರಲುದ್ಯುಕ್ತಳಾದ ಒಡನೆಯೇ, ರಂಗಣ್ಣನು ಮುಖದ ಮೇಲಿನ ಬಟ್ಟೆಯನ್ನು ಅರ್ಧ ತೆಗೆದು, ತಾನೇ ಮುಖವನ್ನು ನೋಡಲಾರದೆ ಅಸಹ್ಯದಿಂದಲೂ ಭಯದಿಂದಲೂ ಬಟ್ಟೆಯನ್ನು ಪುನಃ ಮುಖದ ಮೇಲೆಯೇ ಕೊಡುವವನು.]

ಈಕೆ: (ಮುಖವನ್ನು ನೋಡಲು ಹೆದರಿ, ದೂರಸರಿದು) ಮುಂದಿನ ಕ್ರಮಾ..?… ನೀವೇ ಹೇಳಿ!

ರಂಗಣ್ಣ ಈಗ… ಡಾಕ್ಟರಿಗೆ ಹೇಳಿ ಕಳುಹಿಸಿ ಇವರ heart weakಊಂಬೋದನ್ನು shocks ಊಂದ್ರೆ ಸಾಯತಾರೇಂತ ಡಾಕ್ಟ್ರು ಹೇಳಿದ್ರೂಂದ್ಯಲ್ಲಾ!… ಆತನ್ನೇ ಕರಿಸಿ ಹಾಗೇ ಆಗ್ಹೋಯ್ತೂಂತ ಆತನ ಕೈಲಿ ಸರ್ಟಿಫಿಕೇಟು ತಕ್ಕೊಳ್ಳೋದೇ ಅಲ್ವೆ… ಕ್ರಮ…?

ಈಕೆ: (ಗಟ್ಟಿಯಾಗಿ) ಡಾಕ್ಟರಿಗಲ್ಲಾ ಹೇಳಿಕಳಿಸೋದು! ಪೋಲೀಸಿಗೆ!…

[ಕಿರಿಚುತ್ತ] ಬೋರಾ! ಬೋರಾ! ಬೋರಾ! ಏನೋ ಆಗಿಹೋಗಿದೆ ಯಜಮಾನರಿಗೆ! ಖೂನಿ! ಖೂನಿ! ಖೂನಿ!!! ಬೋರಾ! ಬೋರಾ! ಬೋರಾ

[ಬೋರನು ಓಡಿ ಬರುವನು]

ಬೋರ: ಏನ್ರವ್ವ!

ಈಕೆ: ಪೋಲೀಸ್ಪೂರ್ನ ಕರಕೊಂಡು ಬಾ ಖೂನಿ! ಖೂನಿ! [ಬೋರನು “ಅಯ್ಯೋ ದೇವರೇ!” ಎಂದು ಕೂಗುತ್ತಾ ಹೊರಗೋಡುವನು)

ರಂಗಣ್ಣ ಪೋಲೀಸ್ ಯಾಕೆ ಈಗ?!

ಈಕೆ: ಹ ಹ! ಪ್ಲ! ಜೋಪಾನವಾಗಿ ಸಾಗಿಸೋಕೆ… ನಿಮ್ಮನ್ನ! Heart Weak ಆದೋರು ಪ್ರಾಣಸ್ನೇಹಿತನ್ನ ಪಕ್ಕದಲ್ಲಿಟ್ಟುಕೊಂಡು ಸತ್ತರೆ ಕೋಣೆ ಸಾಮಾನೆಲ್ಲಾ ಹೀಗುರುಳಿರುತ್ತೆಯೆ?

ರಂಗಣ್ಣ (ಅವಸರವಸರವಾಗಿ ಕೋಣೆ ಸಾಮಾನುಗಳನ್ನು ಸರಿಯಾಗಿಡಲುಪಕ್ರಮಿಸುವನು.)

ಈಕೆ:ಅದೇನೂ ಪ್ರಯೋಜನವಿಲ್ಲ! ಬೋರ ನೋಡಿಬಿಟ್ಟ… ಕೋಣೆ ಇದ್ದ ಸ್ಥಿತಿ! ಕೋರ್ಟಿನಲ್ಲಿ ಅದೇ ಕೈಫಿಯತ್ತು ಕೊಡುತ್ತಾನೆ.

[ರಾಕ್ಷಸಿಯಂತೆ ನಗುತ್ತಾ] ಹ್ಹ ! ಹ್ಹ ! ಹ್ಹ ! ಅಬ್ಬಾ! ಇದಕ್ಕೆ ನಾನು ಕಾದಿದ್ದದ್ದು… ಯಾವಾಗ ಈ ಮುದಿಗೊಡ್ಡು ಸತ್ತು, ವಿಲ್ಲಿನಲ್ಲಿ ಬರೆದಿಟ್ಟ ಮೂವತ್ತು ಸಾವಿರ ನನ್ನ ಕೈಸೇರಂತ!… ನಿಮ್ಮ ಹೆದರಿಕೆ ಒಂದೇಏ ನನಗಿದ್ದದ್ದು! … ನನ್ನ ಹಾಳು ಚರಿತ್ರೆನ ಎಲ್ಲಿ ಹೊರಗೆ ಹಾಕಿಬಿಡುತ್ತೀರೋ ಅಂತ! ಈಗ ಆ ಭಯಾನೂ ಇಲ್ಲ!

ರಂಗಣ್ಣ ಯಾಕಿಲ್ಲ?… ನನಗೆ ಬಾಯಿಲ್ಲವೇ ಹೇಳೋಕೆ…. ಹತ್ತು ಜನದ ಮುಂದೆ…?

ಈಕೆ: ಈಗಿದೆ… ಆದ್ರೆ ಪೊಲೀಸಿನೋನು ಬಂದೂ ನಿಮ್ಮ ಬಾಯಿಮುಚ್ಚಿಸಿ, ಕೈಗೆ ಕಂಕಣ ತೊಡಿಸೀ, ಮಾವನಮನೆ ಸೇರಿಸಿ ಮೊಕದ್ದಮೆ ಆಗಿ, ಗಲ್ಲಿಗೆ ಕಳಿಸೋವಾಗ ಇರೋದಿಲ್ಲಾ ನಿಮಗೆ ಈ ಬಾಯಿ! ನಿಮ್ಮಿ ಉಪಕಾರದಿಂದ ನನ್ನ ಕೈಸೇರೋ ಆಸ್ತಿ ಜೊತೇಲಿ, ಕ್ಷಯರೋಗದಿಂದ ಈಗಲೂ ಆಗಿ ಸಾಯೋ ಆ ಹುಡುಗನ ನಲವತ್ತು ಸಾವಿರಾನೂ ನನ್ನ ಕೈಸೇರಿಸೋಕೆ , ಆ ಹುಡುಗನ ಕುತ್ತಿಗೇನೂ ಹೀಗೇ ಕಿವಿಚಿಬಿಟ್ರೆ… ಮಹದುಪಕಾರ! ದೇವರು ಇದಕ್ಕೆ ನಿಮ್ಮನ್ನು ಈ ರಾತ್ರಿ ಈ ಮನೆಗೆ ಕಳುಹಿಸಿದ ಹಾಗೆ ಆಯ್ತು.

ಇನ್ನು ನೀವು ಆಯ್ತು, (ಹೆಣವನ್ನು ತೋರಿಸುತ್ತಾ) ನೀವು ಖೂನಿಮಾಡಿದ ಈ ಗೊಡ್ಡು ಹೆಣವಾಯ್ತು… ಪೋಲೀಸು ಆಯ್ತು… ಕೋರ್ಟು , ಕಛೇರಿ, ಗಲ್ಲಾಯ್ತು !!! ….ಅಬ್ಬಾ! ಈ ಮುದಿಗೊಡ್ಡು…!

[ಅಶ್ವತ್ಥನು ನಿಧಾನವಾಗಿ ಮೇಲಕ್ಕೆ ಎದ್ದು ಕೂಡುವನು]

ಈಕೆ:(ಚೀರಿ ಭಯದಿಂದ ತನ್ನ ಮುಖವನ್ನು ಕೈಗಳಲ್ಲಿ ಮುಚ್ಚಿಕೊಂಡು… ಬಿಕ್ಕಿ ಬಿಕ್ಕಿ ಅಳುವಳು)

ಬೋರ: ( ಓಡಿ ಬಂದು) ಬಂದವನವ್ವ ಪೋಲೀಸಿನೋನು!

[ ಕೋಣೆಯಲ್ಲಿ ಯಜಮಾನರನ್ನು ನೋಡಿ ಅವಾಕ್ಕಾಗಿ ನಿಲ್ಲುವನು.]

ಅಶ್ವತ್ಥ: (ಸಿಗರೇಟಿನ ಪ್ಯಾಕನ್ನು ಮೇಜಿನಿಂದ ತೆಗೆಯುತ್ತ ಆ ಪೋಲೀಸಿನವನಿಂದ ಐ.ಜಿ. ಸಾಹೇಬರು ಊರಲ್ಲಿದ್ದಾರೆಯೇ ಇಲ್ಲವೇ ತಿಳುಕೊಂಡು ಅವನ್ನ ಕಳಿಸಿ ಬಿಟ್ಟೂ…

[ಒತ್ತಿ ಹೇಳುತ್ತ]

ಅಮ್ಮಾ ಅವರು ಹೊರಗೆ ಹೋಗ್ತಾರೇ! ಹೋದ ಮೇಲೆ ಗೇಟು ಮುಚ್ಚಿ ಬಾಗಲು ಹಾಕ್ಕೊಂಡು ಮಲಕ್ಕೋ!

(ಆಕೆಯು ಬಿಕ್ಕಿಬಿಕ್ಕಿ ಅಳುತ್ತ ಹೊರಗೆ ಹೋಗುವಳು. ಬೋರನು ಹಿಂದೆಯೇ ಹೋಗುವನು)

(ಅಶ್ವತ್ಥನು ಉಕ್ಕಿಬರುವ ಉದ್ವೇಗವನ್ನು ಮನಸ್ಸಿನಲ್ಲಿಯೇ ಹಿಡಿದಿಡಲಾರದೆ ಅಲ್ಲಿಯೇ ಗೋಡೆಗೆ ತಗುಲಿಸಿರುವ ಸಣ್ಣ ಮಗುವಿನ ಪಟವೊಂದನ್ನು ಕೈಯಲ್ಲಿ ತೆಗೆದುಕೊಂಡು ಅದನ್ನೇ ನೋಡುತ್ತ ಕುರ್ಚಿಯ ಮೇಲೆ ಕೂಡುವನು. ರಂಗಣ್ಣನು ನಿಧಾನವಾಗಿ ಸಿಗರೇಟನ್ನು ತೆಗೆದು ಹಚ್ಚಿ ಒಂದ್ಹುರ್ಬು ಹೊಗೆಯನ್ನು ಬಿಟ್ಟು ಅದೇ ಕುರ್ಚಿಯ ಕೈಯಮೇಲೆ ಊರಿ ನಿಲ್ಲುವನು. ಒಳಗಡೆಯಿಂದ ಚಿಕ್ಕ ಹುಡುಗನು ಅತಿಯಾಗಿ ಕೆಮ್ಮುವುದು ಕೇಳಿಬರುವುದು. ಒಳಗೆ ಬಂದ ಬೋರನು ಬೇಗನೆ , ಸದ್ದು ಕೇಳಿ ಬಂದ ಬಾಗಿಲ ಕಡೆಗೆ ಹೋಗುವನು) .

[ಪರದೆಯು ನಿಧಾನವಾಗಿ]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗಲಿದ ಗೆಳೆಯನಿಗೊಂದು ಪತ್ರ
Next post ಕವಿಯ ಕಳವಳ

ಸಣ್ಣ ಕತೆ

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys