ನಸುಕಿನಲ್ಲಿ
ಹಲ್ಲು ಮೂಡದ ಹಸುಳೆಯನ್ನು
ಅವರು ಹೊಸಕಿ ಹಾಕಿದರು

ಹಾಡು ಹಗಲೇ ಹರೆಯದ
ಹುಡುಗಿಯನ್ನು ಎಳೆದಾಡಿದರು

ಮುಸ್ಸಂಜೆಯಲ್ಲಿ ಮನೆಗೆ
ಮರಳುತ್ತಿದ್ದ ಮುದುಕನನ್ನು ಮುಗಿಸಿದರು.

ಬಲಿಯಾದವರು-ಬಲಿಗೈದವರು
ಇಬ್ಬರೂ ನನ್ನ ಒಡಹುಟ್ಟುಗಳು
ಅಯ್ಯೋ, ದ್ವೇಷವೊಂದೇ ಉಸಿರಾಡುತ್ತಿದೆ
ರಾತ್ರಿ-ಹಗಲು…
*****
ಗುಜರಾತ್‌ಗೆ ಕವಿ ಸ್ಪಂದನ