ನಿಶ್ಯಬ್ಧದ ಅಂತರಾಳದಲ್ಲಿ ನೆನಪಾಗುತ್ತವೆ
ರಾತ್ರಿಯ ಏಕಾಂತದಲ್ಲಿ ಪಿಸುಗುಡುತ್ತವೆ.
ಒಂಟಿತನದ ಬಯಕೆಯಲ್ಲಿ ಲಾಗ ಹಾಕುತ್ತವೆ.
ಬಿದ್ದ ಬಾವಿಯಿಂದ ಮೇಲೆತ್ತಿ ತರಲು ನೀ
ಎಸೆದ ಹಗ್ಗದ ಗುರುತು, ಹಿಡಿದೆತ್ತಿದ ಗುರುತು
ಹಗ್ಗ ಎಸೆಯದೇ ನೀನು ಸುಮ್ಮನಿರಬಹುದಿತ್ತು
ಉಳಿದವರಂತೆ ನಗುತ್ತ ನಿಲ್ಲಬಹುದಿತ್ತು
ಅಥವಾ ಎಲ್ಲರ ಜೊತೆ ಹಣವನ್ನೆತ್ತಬಹುದಿತ್ತು
ಆದರೆ ಅದೇಕೆ ನೀನು ಹಗ್ಗ ಎಸೆದೆ
ಅದೇ ನನಗೆ ಏಸ್ಮಯ
*****