ಚಿತ್ರ: ಡೇವಿಡ್ ಮಾರ್ಕ್
ಚಿತ್ರ: ಡೇವಿಡ್ ಮಾರ್ಕ್

ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ ಪೂಜ್ಯ ಭಾವನೆಯನ್ನು ಕೊಡುತ್ತಾ ಬಂದಿದಾನೆ. ‘ಗುರು’ ಎಂಬುವುದು ಸೂರ್ಯನ ಸುತ್ತಲೂ ಸುತ್ತುತ್ತಿರುವ ಅತ್ಯಂತ ದೊಡ್ಡ ಗ್ರಹ. ನಾವು ವಾಸಿಸುವ ಅಥವಾ ಇತರ ಗ್ರಹಗಳಿಗಿಂತಲೂ ಅತ್ಯಂತ ದೊಡ್ಡದಾಗಿದ್ದರಿಂದ ಭೌತಿಕ ಜಗತ್ತಿನಲ್ಲಿಯೂ ಈ ‘ಗುರು’ ಪದವು ಮೇಲ್ಮಟ್ಟದ್ದಾಗಿ ಬೆಳೆಯಿತು.

ಸೂರ್ಯಮಂಡಲದಲ್ಲಿ ಇದೊಂದು ವಿಶಿಷ್ಟವಾದ ಗ್ರ್‍ಅಹ. ಇದು ದೊಡ್ಡ ಗ್ರಹವೂ ಹೌದು ಚಿಕ್ಕ ಸೂರ್ಯಮಂಡಲವೂ ಹೌದು. ಇದಕ್ಕೆ ೧೧ಕ್ಕೂ ಕಡಿಮೆ ಇಲ್ಲದಷ್ಟು ಉಪಗ್ರಹಗಳಿವೆ. ಚಂದ್ರನಂತಹ ಅನೇಕ ಉಪಗ್ರಹಗಳು ಗುರುಗ್ರಹದ ಸುತ್ತಲೂ ಸುತ್ತುತ್ತಲಿವೆ. ೪ ಗ್ರಹಗಳು ಚಂದ್ರನಷ್ಟೇ ದೊಡ್ಡವಾಗಿವೆ. ಎರಡು ಉಪಗ್ರಹಗಳು ಕೇವಲ ೩೦ ಮೈಲಿಗಳ ವ್ಯಾಸವನ್ನು ಹೊಂದಿದ್ದರೆ, ಮೂರು ಗ್ರಹಗಳು ಕೇವಲ ೧೫ ಮೈಲಿಗಳ ವ್ಯಾಸವನ್ನು ಹೊಂದಿವೆ. ಗುರುಗ್ರಹದ ವ್ಯಾಸವು ಭೂಮಿಯ ವ್ಯಾಸಕ್ಕಿಂತಲೂ ೧,೩೦೦ ಪಟ್ಟು ದೊಡ್ಡದು. ಅಂದರೆ ಭೂಮಿಗಿಂತ ೩೬೭,೦೦೦,೦೦೦ ಮೈಲುಗಳ ಅಂತರದಲ್ಲಿದ್ದರೂ ಬರಿಗಣ್ಣಿಗೆ ಕಾಣುತ್ತದೆ. (ಕೆಲವೆಡೆ ಮಾತ್ರ) ಖಗೋಳ ಶಾಸ್ತ್ರಜ್ಞರು ಟೆಲಿಸ್ಕೋಪಿನಿಂದ ನೋಡಿದಾಗ ಗುರುಗ್ರಹಕ್ಕೆ ಕಪ್ಪುಪಟ್ಟಿಗಳು ಇರುವುದನ್ನು ಮತ್ತು ಅವು ವಲಯಗಳಿಂದ ಬೇರ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಈ ಪಟ್ಟಿಗಳು, ವಲಯಗಳು ಬದಲಾಗುತ್ತ ಇರುತ್ತವೆ. ಆಸಕ್ತಿಯ ವಿಷಯವೆಂದರೆ ಗುರುಗ್ರಹದ ಮೇಲೊಂದು ‘ಕೆಂಪುತಲೆ’ ಇದ್ದು ಅದು ಸು. ೩೦,೦೦೦ ಮೈಲುಗಳ ಉದ್ದ ಮತ್ತು ೮,೦೦೦ ಮೈಲುಗಳ ಅಗಲವನ್ನು ಹೊಂದಿದೆ. ಕಲೆ ಕೆಲವೊಮ್ಮೆ ಕಾಣಿಸುವುದೇ ಇಲ್ಲ, ಕೆಲವೊಮ್ಮೆ ಚಲಿಸುತ್ತಿರುವಂತೆ ಕಾಣಿಸುತ್ತದೆ.
*****