ಉಲ್ಕಾ ವೃಷ್ಟಿ!!

ಉಲ್ಕಾ ವೃಷ್ಟಿ!!

ನಿರ್ಧಿಷ್ಟ ಪಥದಲ್ಲಿ ತಿರುಗುವ ಗ್ರಹಗಳ ನಡುವಿನ ಹಾದಿಯಲ್ಲಿ ಅಡ್ಡ ಬರುವ ಸಣ್ಣ ಬಂಡೆಗಳಂತಹ ಮಿಟಿಯೋರಾಯ್ಡ್ಸ್ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಗಾಳಿಯ ಜತೆ ಸಂಘರ್ಷಕ್ಕೊಳಗಾಗುತ್ತವೆ. ತಿಕ್ಕಾಟದಿಂದ ಇವು ಉರಿಯತೊಡಗುತ್ತವೆ. ಭೂಮಿಗೆ ಗುರುತ್ವಾಕರ್ಷಣೆ ಇರುವುದರಿಂದ ಭೂಮಿ ಎಡೆಗೆ ಧಾವಿಸಿ ಮಿಂಚುವ ನಕ್ಷತ್ರಗಳಂತೆ ಕಂಡು ಕರಗಿ ಹೋಗುತ್ತವೆ. ಉರಿದು ಬೀಳುವ ಈ ಸ್ಥಿತಿಯಲ್ಲಿ ಇವಕ್ಕೆ ‘ಮೀಟಿಯೋರ್ಸ್’ ಉಲ್ಕೆಗಳೆಂದು ಕರೆಯಲಾಗುತ್ತದೆ.

ಇಂಥಹ ಅಸಂಖ್ಯಾತ ಉಲ್ಕೆಗಳ ಪಾತ ದಿನವೂ ಆಕಾಶದಲ್ಲಿ ನಡೆಯುತ್ತಲೇ ಇರುತ್ತದೆ. ಬೀಳುವ ನಕ್ಷತ್ರ ಉಲ್ಕೆಯು ಸಾವುನೋವಿನಂತಹ ವಿಪ್ಲವ ತರುತ್ತದೆನ್ನುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಪ್ರತಿ ಮೂವತ್ಮೂರು ವರ್ಷಗಳ ಅಂತರದಲ್ಲಿ ಉಲ್ಕಾಪಾತ ಗಣನೀಯವಾಗಿ ಹೆಚ್ಚುತ್ತದೆಂದು ಖಗೋಳ ವಿಜ್ಞಾನಿಗಳ ಅಭಿಮತ. ಗಂಟೆಗೆ ೫೦ ರಿಂದ ೧೦೦ ರ ತನಕ ನವೆಂಬರ್ ತಿಂಗಳ ೧೮ ರ ಬೆಳಗಿನ ಜಾವ ೨-೧ಂ ಗಂಟೆಗೆ ಶಿಖರ ತಲುಪುವ ಈ ನಕ್ಷತ್ರ ಮಳೆ ಬರಿಕಣ್ಣಿಗೆ ವಿಜ್ಞಾನಿಗಳಿಗೆ ಕಂಡಿತು. ಲಿಯೋನಿಡ್ ಮಿಟಿಯೋರಾಯ್ಡ್ಸ್‌ ಎಂದು ವಿಜ್ಞಾನಿಗಳು ಹೆಸರಿಸಿರುವ ಈ ಆಕಾಶಕಾಯಗಳು ‘ಟೆಂಪಲ್‌ಟಟ್ಸ್’ ಎನ್ನುವ ಧೂಮಕೇತು ಉಳಿಸಿ ಹೋದ ಧೂಳು ಕಸದಿಂದ ನಿರ್ಮಾಣವಾದವು. ಭೂಮಿಯ ಮೇಲ್ಮೈ ತಲುಪುವ ವೇಳೆಗಾಗಲೇ ಉಷ್ಣತೆ ಕಳೆದುಕೊಂಡು ಮತ್ತೆ ಬಂಡೆಗಳಂತಾದಾಗ ಉಲ್ಕೆಗಳನ್ನು ಮಿಟಿಯೋರೈಟ್ಸ್ ಎಂದು ಕರೆಯುತ್ತಾರೆ. ಲೋಹ ರಾಸಾಯನಿಕಗಳ ಕಲ್ಲು ಧೂಳುನಿಂದ ಕೂಡಿದ ಉಲ್ಕೆಗಳು ಜೀವ ಸೃಷ್ಟಿಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಒದಗಿಸಬಲ್ಲವು ಎನ್ನುತ್ತಾರೆ. ಖಗೋಳ ವಿಜ್ಞಾನಿಗಳು. ೩೬ ವರ್ಷಗಳಿಗೊಮ್ಮೆ ಪಾತಗೊಳ್ಳುವ ಈ ಉಲ್ಕೆಗಳ ದೃಷ್ಟಿಯಿಂದ ಇದುವರೆಗೆ ಅಪಾಯಗಳಾದ ವರದಿಗಳಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೋರುವ ತೂತು ಮುಚ್ಚ ಬೇಡವೇ ?
Next post ಏಕಿಷ್ಟು ದೂರ ಮಾಡಿದೆ ಎನ್ನ?

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…