ಕಂಪ್ಯೂಟರ್ ವೈರಸ್?!

ಕಂಪ್ಯೂಟರ್ ವೈರಸ್?!

ಮಾನವ ದೇಹದ ವೈರಸ್ ಒಂದು ಜೈವಿಕ ಅಂಶ. ಮಾನವ ದೇಹಕ್ಕೆ ಜೈವಿಕ ವೈರಸ್ನ ವಿರುದ್ಧ ಹೋರಾಡುವ ಶಕ್ತಿ ಇದೆ. ಆದರೆ ಕಂಪ್ಯೂಟರ್ ವೈರಸ್ ಹಾಗಲ್ಲ. ಇದೊಂದು ಪ್ರೋಗ್ರಾಂ. ಕಂಪ್ಯೂಟರನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಬರೆಯಲಾಗುತ್ತದೆ. ಈ ಪ್ರೋಗಾಂ ಕಂಪ್ಯೂಟರ್ ಅರಿವಿಗೆ ಬಾರದಂತೆ ಪ್ರವೇಶಿಸುತ್ತದೆ. ನಂತರ ತನ್ನಂತೆ ಇರುವ ಪ್ರೋಗ್ರಾಂಗಳನ್ನು ಸೃಷ್ಟಿಸುತ್ತದೆ. ನಂತರ ಕಂಪ್ಯೂಟರ್ ವಿಚಿತ್ರವಾಗಿ ವರ್ತಿಸುವಂತೆ ಮಾಡುತ್ತದೆ. ಕಂಪ್ಯೂಟರ್ ವೈರಸ್ಸಿಗೂ ಮಾನವ ದೇಹದ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಭೌತಿಕ ಹೋಲಿಕೆಯೂ ಇಲ್ಲ. ಆದರೆ ಈ ಎರಡು ವೈರಸ್‌ಗಳು ಮಾಡುವ ವಿಧ್ವಂಸಕ ಕೃತ್ಯಗಳು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ.

ಕಂಪ್ಯೂಟರ್‌ನಲ್ಲಿ ಶೇಖರವಾಗಿರುವ ಇತರ ಪ್ರೋಗ್ರಾಂಗಳು, ಬೇರೆ ಬೇರೆ ಮಾಹಿತಿಗಳನ್ನು ಈ ವೈರಸ್ ನಾಶಗೊಳಿಸಲು ಪ್ರಾರಂಭಿಸುತ್ತದೆ.

ವೈರಸ್‌ಗಳ ಹುಟ್ಟು : ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಮತ್ತೊಂದು ಪ್ರೋಗ್ರಾಂ ಬರೆದು ಹಾಳು ಮಾಡಬಹುದೆಂಬ ಐಡಿಯಾ, ಕಂಪ್ಯೂಟರ್‌ಗಳು ಚಲಾವಣೆಗೆ ಬಂದ ಹಲವಾರು ವರ್ಷ ಯಾರಿಗೂ ಗೊತ್ತಿರಲ್ಲಿಲ್ಲ. ಮೊದಲಬಾರಿಗೆ ‘ಜಾನ್‌ವಾನ್ ನ್ಯೂಮ್ಯಾನ್’ ಎಂಬುವವರು ೧೯೫೦ ರಲ್ಲಿ ಇಂತಹ ಪ್ರೋಗ್ರಾಂಗಳನ್ನು ಬರೆಯಬಹುದೆಂದು ಪ್ರತಿಪಾದಿಸಿದ್ದರು. ಇವರ ಮಾತನ್ನು ಯಾರೂ ಕೇಳಲಿಲ್ಲ ನಂತರ ಅಮೇರಿಕಾದ ಎ.ಟಿ ಯಂಡ್ ಟಿ. ಪ್ರಯೋಗಶಾಲೆಯ ವಿಜ್ಞಾನಿಗಳಲ್ಲಿ ಕೆಲವರು ಇಂತಹ ಸಾಧ್ಯತೆ ಇದೆ ಎಂದು ಮನಗಂಡರು ಮತ್ತು ಈ ದೆಸೆಯಲ್ಲಿ ಕಾರ್ಯಪ್ರವೃತ್ತರಾದರು. ಕೆನ್.ಥಾಮಸ್ ಎಂಬುವವರು ಇಂತಹ ಪ್ರೋಗ್ರಾಂಗಳನ್ನು ಬರೆಯಲು ಸಾಧ್ಯವಿದೆ ಎಂದು ಒಮ್ಮೆ ವಿಶ್ವಕ್ಕೆ ತಿಳಿಸಿದರು. ಇವರು ಹೇಳಿದ ಕೆಲವೇ ದಿನಗಳಲ್ಲಿ ಇಂತಹ ಹಲವು ವೈರಸ್‌ಗಳು ಹುಟ್ಟಿಕೊಂಡವು. ಮೊದಮೊದಲು ಹುಟ್ಟಿಕೊಂಡ ವೈರಸ್‌ಗಳು ಹಲವು ಕಿಡಿಗೇಡಿ ಬುದ್ದಿವಂತ ಜನರಿಂದ ರೂಪಿತವಾಗಿದ್ದವು. ಬೇರೆಯವರ ಕಂಪ್ಯೂಟರ್‌ಗಳನ್ನು ನಾಶಗೊಳಿಸುವುದೇ ಇವರ ಉದ್ದೇಶವಾಗಿತ್ತು. ವೈರಸ್‌ಗಳಲ್ಲಿ ಎರಡು ವಿಧಗಳಿವೆ. ಒಂದು ಫೈಲ್ ವೈರಸ್, ಮತ್ತೊಂದು ಬೂಟ್‍ಸೆಕ್ಟರ್ ವೈರಸ್. ಈ ಎರಡು ರೀತಿಯ ವೈರಸ್‌ಗಳು ಪ್ಲಾಪಿಗಳ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಪಯಣಿಸುತ್ತದೆ. ಕಂಪ್ಯೂಟರ್‌ನಲ್ಲಿ ನಾವು ಮಾಡಿದ ಲೆಕ್ಕಪತ್ರಗಳನ್ನು ಹಾರ್ಡ್‌ಡಿಸ್ಕಿನಲ್ಲಿ ಶೇಖಕರಿಸುತ್ತವೆ. ಹೀಗೆ ಶೇಖರವಾಗಿರುವ ಪ್ರತಿ ಕಡತಕ್ಕೂ ಒಂದು ಹೆಸರು ನೀಡಬೇಕು. ನಾವು ನೀಡುವ ಹೆಸರಿನ ಮುಂದೆ ಆ ಕಡತಕ್ಕೆ ಅನ್ವಯವಾಗುವ ರೀತಿಯಲ್ಲಿ ಮೂರು ಅಕ್ಷರಗಳ ವಿಸ್ತರಣಾ ಹೆಸರನ್ನು ಕಂಪ್ಯುಟರ್ ನೀಡುತ್ತದೆ. ಈ ರೀತಿಯ ವಿಸ್ತೀರ್ಣಗಳಲ್ಲಿ COM ಮತ್ತು EXE ಇದೆ. ಫೈಲ್ ವೈರಸ್‌ಗಳು ಈ ವಿಸ್ತೀರ್ಣ ನಾಮಧೇಯವುಳ್ಳ ಕಡತಗಳನ್ನು ನಾಶಗೆಡವುತ್ತದೆ. ಬೂಟ್‌ಸೆಕ್ಟರ್ ವೈರಸ್‌ಗಳು ಪ್ಲಾಪಿಡಿಸ್ಕಿನ ಬೂಟ್ ಸೆಕ್ಟರ್‌ನಲ್ಲಿ ಸೇರಿಕೊಂಡು ಅಲ್ಲಿಂದ ಎಲ್ಲೆಡೆ ಪಸರಿಸುತ್ತವೆ.

ಈ ವೈರಸ್‌ಗಳ ದುರುದ್ದೇಶಗಳು : ಮಾಹಿತಿಗಳನ್ನು ಮತ್ತು ಶೇಖರಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವುದು. ಕಂಪ್ಯೂಟರ್ ಕಾರ್ಯನಿರ್ವಹಣಾ ವೇಗವನ್ನು ಕಡಿತಗೊಳಿಸುವುದು. ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಮಾನೀಟರ್ ತೆರೆಯ ಮೇಲೆ ಚಿತ್ರ ವಿಚಿತ್ರ ಸಂಕೇತಗಳನ್ನು ಮೂಡಿಸಿ ಬಳಕೆದಾರನಿಗೆ ಗಲಿಬಿಲಿಯುಂಟು ಮಾಡುವುದೇ ಆಗಿದೆ. ಆಗ ಕಂಪ್ಯೂಟರ್ ರೋಗಗ್ರಸ್ತವಾಗುತ್ತದೆ.

ಈ ವೈರಸ್ ತಡೆಯುವ ಕ್ರಮಗಳು : ಕಂಪ್ಯೂಟರ್ ವೈರಸ್ – ಎಲ್ಲರನ್ನೂ ಎಲ್ಲ ಕಂಪ್ಯೂಟರ್‌ಗಳನ್ನು ಚಿಂತೆಗೀಡು ಮಾಡಬಲ್ಲದು. ಆದರೆ ಸಾಕಷ್ಟು ಮುಂಜಾಗ್ರತೆ ವಹಿಸಿದಲ್ಲಿ ಇದರ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು.
೧. ಸಾಧ್ಯವಿದ್ದಷ್ಟು ಬೇರೆಯವರ ಪ್ಲಾಪಿಗಳನ್ನು ಬಳಸಬಾರದು.
೨. ಕಂಪ್ಯೂಟರ್‌ನ್ನು ಪ್ಲಾಪಿಯಿಂದ ಆರಂಭಿಸಬಾರದು (ಬೂಟ್ ಮಾಡಬಾರದು)
೩. ಪ್ರತಿ ಪ್ಲಾಪಿಯಲ್ಲಿಯೂ ‘ರೈಟ್ ಪ್ರೊಟೆಕ್ಟ್‌’ ಎಂಬ ಸೌಲಭ್ಯವಿದೆ. ಈ ಸೌಲಭ್ಯವನ್ನು ಉಪಯೋಗಿಸಿದರೆ ಅಂತಹ ಪ್ಲಾಪಿಯ ಮೇಲೆ ಯಾವುದೇ ರೀತಿಯಲ್ಲಿ ವೈರಸ್ ಬರಲಾರವು.
೪. ಬೇರೆಯವರ ಅಧಿಕೃತ ಸಾಫ್ಟ್‌ವೇರ್ ಅನ್ನು ನಕಲು ಮಾಡಿದರೆ ಅದರಲ್ಲಿವೈರಸ್ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
೫. ವೈರಸ್‌ಗಳ ವಿರುದ್ಧ ಸಮರ ಸಾರಿರುವ ಕಂಪನಿಗಳು ರೂಪಿಸಿರುವ ವೈರಸ್ ವಿರೋಧಿ ಪ್ರೋಗ್ರಾಂಗಳನ್ನು ಕೊಳ್ಳಬೇಕು.
೬. ಪ್ರತಿಪ್ಲಾಪಿಗಳಲ್ಲಿಯೂ ವೈರಸ್‌ಗಳ ನಕಲಿ ಸಹಿಯನ್ನು ಹಾಕಿಡಬೇಕು. ವೈರಸ್‌ಗಳು ಅಂತಹ ಪ್ಲಾಪಿಗೆ ವರ್ಗಾವಣೆಯಾಗುವುದಿಲ್ಲ.

ವೈರಸ್ ಪತ್ತೆದಾರಿ: ಕಂಪ್ಯೂಟರ್ ವೈರಸ್‌ಗಳು ತಮ್ಮಸಂಖ್ಯೆಯನ್ನು ದ್ವಿಗುಣಗೂಳಿಸಿ ಕೊಳ್ಳುವಾಗ ಒಂದೇ ರೀತಿಯ ಸಂಕೇತಗಳನ್ನು ಉಳಿಸಿಕೊಳ್ಳುತ್ತವೆ. ಒಂದೇ ರೀತಿಯ ಸಂಕೇತಾಕ್ಷರಗಳು ಅಸಂಖ್ಯವಿದ್ದಾಗ ಕಂಪ್ಯೂಟರ್‌ನ ಶೇಖರಣಾ ಸಾಮರ್ಥ್ಯ ತಗ್ಗುತ್ತದೆ. ವೈರಸ್‌ನ ಒಂದೇ ರೀತಿಯ ಸಂಕೇತಾಕ್ಷರಗಳನ್ನು ಅದರ ಸಹಿ ಅಥವಾ ‘ವೈರಸ್ ಸಿಗ್ನೇಚರ್’ ಎಂದು ಕರೆಯುತ್ತಾರೆ. ಈ ಸಿಗ್ನೇಚರ್‌ಗಳನ್ನು ಗುರುತಿಸುವುದರ ಮೂಲಕ ಎಂತಹ ವೈರಸ್ ಇದೆ ಎಂದು ಕಂಡು ಹಿಡಿಯಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾರಿ ಮರೆಯದಿರಲಾ ದಾರಿ ತೋರುವುದೊಂದು ಪರಿಯಲ್ಲವೇ?
Next post ದಯಮಾಡೋ ರಂಗಾ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys