ನಮ್ಮೊಳಗೊಬ್ಬ ನಾಜೂಕಯ್ಯ

ನಮ್ಮೊಳಗೊಬ್ಬ ನಾಜೂಕಯ್ಯ
ಸ್ವಪ್ರತಿಷ್ಠೆಗೆ ಆಗರವಯ್ಯ
ಮಾತಿಗೂ ತಕ್ಕಡಿ ನಗುವಿಗೂ ತಕ್ಕಡಿ
ಮುನಿಸಿಗೆ ಏತಕೊ ಬರ ಇಲ್ಲವಯ್ಯ //ಪ//

ನಮ್ಮೊಳಗೊಬ್ಬ ನಾಜೂಕಯ್ಯ
ಇವನಿಗೆ ಸಮವು ಯಾರಿಲ್ಲವಯ್ಯ
ಕಂಡರೆ ಯಾರಾದರೂ ಇವನೆತ್ತರ
ಬೇರಿಗೆ ಬಿಸಿನೀರು ಗ್ಯಾರಂಟಿಯಯ್ಯ

ನಮ್ಮೊಳಗೊಬ್ಬ ನಾಜೂಕಯ್ಯ
ಇವನದ್ದು ಏಕಪಾತ್ರಾಭಿನಯ
ಇಲ್ಲಿದ್ರೆ ಮಂತ್ರಿ ಅಲ್ಲಿದ್ರೆ ತಂತ್ರಿ
ಇವನಿಗೆ ಇವನಾಟ ಬಲು ಚೆಂದವಯ್ಯ

ನಮ್ಮೊಳಗೊಬ್ಬ ನಾಜೂಕಯ್ಯ
ಇವನಿಗೆ ಪ್ರೀತಿ ಪಾತ್ರ ಇವನಯ್ಯ
ಆದರೂ ಬಿ.ಪಿ. ಮೈಯೆಲ್ಲ ಸಕ್ಕರೆ
ಯಾವ ಪುರುಷಾರ್ಥಕ್ಕಿದು ಎಲ್ಲವಯ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲುವೀನಾ
Next post ಪರಿವರ್‍ತನೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…