ಜೈವ ತಂತ್ರಜ್ಞಾನದಿಂದ ರಕ್ತದ ಸೃಷ್ಟಿ

ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ್ನು ಸುರಿದು (Blood Bank) ನಲ್ಲಿ ರಕ್ತ ತಂದು ಪೂರೈಸ- ಬೇಕಾಗುತ್ತದೆ. ಇದೆಲ್ಲ ಕಷ್ಟಕರವಾದ ಕೆಲಸವೆ. ಆದರೆ ತಂತ್ರಜ್ಞಾನದಿಂದ ರಕ್ತವೂ ಸೃಷ್ಟಿಯಾಗಿ  ಬೇಕಾದವರಿಗೆ ಅಂಗಡಿಯಲ್ಲಿ ಸಿಗುವಂತಾದರೆ ಅದಕ್ಕಿಂತಲೂ ಇನ್ನೇನು ಬೇಕು. ರೋಗಿಯ ಪುಣ್ಯ ರಕ್ತಕ್ಕಾಗಿ ಅಲೆಯುವ ಸಮಸ್ಯೆಯೇ ಇರಲಾರದು. ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ‘ವಿಟ್‌ವೈಸ್’ ಎಂಬ ವಿಜ್ಞಾನಿ ಜೈವ ತಂತ್ರಜ್ಞಾನ ಸಾಧನೆಯಿಂದ ರಕ್ತದ ಸೃಷ್ಟಿಯನ್ನು ಕಂಡು ಹಿಡಿದರು. ಕೆಂಬ್ರಿಡ್ಜ್ ಮಸಾಚುಸೆಟ್ಟ್‌ನಲ್ಲಿರುವ  ಆಂಟೋಜೆನಿ ಎಂಬ ಜೈವ ತಾಂತ್ರಿಕ ಸಂಸ್ಥೆಯಲ್ಲಿ ಸಂಶೋಧಕ ವ್ಶೆದ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಪಥಮವಾಗಿ ಆದಿಕೋಶಗಳನ್ನು ಗುರುತಿಸಿ, ಪ್ರತ್ಯೇಕಿಸಿ ಪ್ರಯೋಗಾಲಯದ ಪ್ಲಾಸ್ಟಿಕ್ ತಟ್ಟೆಯೊಂದರಲ್ಲಿ ಅವನ್ನು ಬಿತ್ತಿದರು. ಅವಕ್ಕೆ ಪೋಶಾಕಾಂಶಗಳನ್ನು ಒದಗಿಸಿದರು. ಸೂಕ್ತಜನಕಾಣುಗಳನ್ನು ಪೂರೈಸಿದರು. ಕೆಲವೇ ದಿನಗಳಲ್ಲಿ ನಿಬ್ಬೆರಗಿನ ಫಲಿತಾಂಶವನ್ನು ನೋಡಿ ಕುಣಿದಾಡಿದರು. ಆದಿಕೋಶವು ಕೆಂಗಣಗಳನ್ನು ಉತ್ಪಾದಿಸಲಾಂಭಿಸಿತು. ರಕ್ತವು ಸ್ಪಷ್ಟಿಯಾಯಿತು. ಈ. ಸೂತ್ರವನ್ನು ಅನುಸರಿಸಿ ಸಂಶೋಧಕರು ರಕ್ತವನ್ನು ಸೃಷ್ಟಿಸಿ ಅಶಕ್ತ ರೋಗಿಗಳಿಗೆ ಈ ರಕ್ತವನ್ನು ಪೂರೈಸುತ್ತಾರೆ ಎಂಬ ದಿನಗಳು ಬರುತ್ತವೆ !

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯ ದೀಪವ ಎದೆಯ ಬೆಳಗಿ
Next post ಆರಂಕುಶಮಿಟ್ಟೊಡಂ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys