Home / ಕಥೆ / ಕಿರು ಕಥೆ / ನಾವೆಲ್ಲಾ ಒಂದೇ

ನಾವೆಲ್ಲಾ ಒಂದೇ

ಕೆಲವು ಪರಿವಾಳಗಳು ಮಡಿಗೆ ಶ್ರೇಷ್ಠ ಜಾಗವೆಂದು ಗುಡಿ ಗೋಪುರದಲ್ಲಿ ವಾಸವಾಗಿದ್ದವು. ಮತ್ತೆ ಕೆಲವು ಪಾರಿವಾಳಗಳು ಅಲ್ಲೇ ಅನತಿ ದೂರದಲ್ಲಿದ್ದ ಪಾಳು ಕೋಟೆಯಲ್ಲಿ ನೆಲೆಗೊಂಡಿದ್ದವು. ಎರಡು ಗುಂಪೂ ತಪ್ಪದೇ ದಿನವೂ ಗದ್ದೆ, ಹೊಲ, ಬಯಲು, ಹಸಿರಿನಲ್ಲಿ, ತೋಟಗಳಲ್ಲಿ ಆಹಾರ ಆರಿಸುವಾಗ ಒಂದಾಗುತ್ತಿದ್ದವು. ಗುಡಿಯಲ್ಲಿ ಬೀಡು ಬಿಟ್ಟ ಪಾರಿವಾಳಗಳು ಹೆಚ್ಚಳಿಕೆಯಿಂದ ತಮ್ಮ ಮಡಿವಂತಿಕೆಯನ್ನು ತೋರಿಸಿಕೊಂಡು ಪಾಳು ಕೋಟೆಯ ಪಾರಿವಾಳಗಳನ್ನು ದೂರ ಮಾಡುತಿದ್ದವು. ಒಮ್ಮೊಮ್ಮೆ ದಬ್ಬಾಳಿಕೆಯನ್ನೂ ಮಾಡುತ್ತಿದ್ದವು. ಒಂದು ಸಾರಿ ಎರಡು ಗುಂಪುಗಳ ನಡುವೆ ಘರ್‍ಷಣೆಯಾಯಿತು. ಅದರಲ್ಲಿ ಕೆಲವು ರೆಕ್ಕೆ ಪುಕ್ಕ ಕಡಿದು ಬಿದ್ದು ಜೀವವನ್ನೂ ತೆರಬೇಕಾಯಿತು. ಅಷ್ಟರಲ್ಲಿ ಒಂದು ಮುದಿ ಪಾರಿವಾಳ ಘರ್‍ಷಣೆ ನೋಡಿ ದಿಗ್ಭ್ರಾಂತವಾಗಿ ಮುಂದೆ ಬಂದು ಹೇಳಿತು.

“ಗುಡಿ ಗೋಪುರ, ಕೋಟೆ, ಅರಮನೆ, ಎಲ್ಲಿ ವಾಸವಾದರೇನು, ನಾವೆಲ್ಲ ಹಾರುವುದು ಒಂದೇ ಆಕಾಶದಲ್ಲಿ, ನೀವೆಲ್ಲಾ ಇರುವುದು ಒಂದೇ ಭೂಮಿಯಲ್ಲಿ” ಎಂದಾಗ, ಎಲ್ಲಾ ಪಾರಿವಾಳಗಳು ತಲೆ ತೂಗಿದವು.

“ಭೂಮಿ ಬಾನಿನ ಸ್ನೇಹಕ್ಕೆ ಅಂಟಿಕೊಂಡಿವೆ ನಮ್ಮ ಜಂಟಿ ರೆಕ್ಕೆಗಳು” ಎಂದು ಸ್ನೇಹ ಸೂತ್ರದಲ್ಲಿ ಒಂದಾದವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...