ನೀನೇ ನೋಡ್ತಿಯಲ್ಲ ಚಂದ್ರ
ಹೊತ್ತಿಗೆ ಮುಂಚೆ ಏಳ್ತಾಳೆ
ಎಷ್ಟು ಹೊತ್ತಿಗೋ ಮಲಗ್ತಾಳೆ
ರೇಗ್ರಿದ್ರೆ ರೆಷ್ಟ್ ಗಿಷ್ಟ್
ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ
ರೈಲು, ಬಸ್ಸು, ಲಾರಿ, ಯಾವುದಾದರೂ ಸರಿ
ಹಗಲೂ ರಾತ್ರಿ ಬುಗುರಿ ತಿರುಗ್ತಾಳೆ ಗಿರಿಗಿರಿ.
ಚಳಿ, ಗಾಳಿ, ಬಿಸಿಲು ಮಳೆ ಏನಿದ್ರೂ ಡೊಂಟ್ ಕೇರು.
ಒಂದು ಕ್ಷಣ ಕೆಲಸವಿಲ್ಲದೆ ಇರೋದು ಅಂದ್ರೆ ಮಹಾಬೋರು
ರೌಂಡ್ ದಿ ಕ್ಲಾಕ್ ಬೇಕು ಇವಳಿಗೆ
ಒಂದಲ್ಲ ಒಂದು; ಕಾರು – ಬಾರು
ಒಟ್ಟಿನಲ್ಲಿ ತಿಳಕೋ, ಇವಳೊಬ್ಬಳು ವರ್ಕೋಹಾಲಿಕ್ಕು
ಪ್ರೀತಿ ಪ್ರೇಮಾಂತ ಪರದಾಡೋ ನೀನೇನಿದ್ದರೂ
ಅವಳ ಕಣ್ಣಿಗೆ ಒಬ್ಬ ಅನ್ ಎಂಪ್ಲಾಯಿಡ್ ಸೈಕಲಾಜಿಕ್ಕು.
ಸುಮ್ಮನೇ ಕೊರಗಬೇಡ
ಅರ್ಥ ಮಾಡಿಕೋ ಮರಿ
ಈ ಭೂಮಿಗೆ ಬೆಳಗಿಂದ ಸಂಜೆವರೆಗೂ
ಬೆವರು ಸುರಿಸೋ ಆ ಸೂರ್ಯನೇ ಸರಿ.
*****