ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ
ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ
ಇದು ಮಾತ್ರ ಬೀಳ್ತಾನೇ ಇಲ್ಲ!

ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ
ಬಹುಶಾ ಧ್ರುವನ ತಮ್ಮ
ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ
ಶನಿ ಮಹಾತ್ಮನ ಅಮ್ಮ

ಆಕಾಶವೊ ಇದು ವಿಶ್ವಕೋಶವೋ
ಒಳಪುಟದಲ್ಲೆಲ್ಲೋ ಅಡಗಿ
ಕೂತ್ಕೊಂಡುದನು ಹುಡುಕೋದು ಹೆಂಗೆ
ಎಲ್ಲಾ ಕಡೆಯೂ ಕಿಟಕಿ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)