ನಿನ್ನ ನಾನು ಪ್ರಿತಿಸುವೆನು ಶ್ಯಾಮ ಮಧುರ ಯಾಮಿನಿ ನಿನಗಾಗಿಯೆ ಹಾತೊರೆವೆನು ಸ್ವಪ್ನ ಲೋಕ ಸ್ವಾಮಿನಿ. ನೀ ಬಂದರೆ ಇಳೆಗಿಳಿವುದು ಅತುಲ ದಿವ್ಯ ಶಾಂತಿಯು ನಿನ್ನಿರುಳಲಿ ಕರುಳಿಗೆಲ್ಲಿ ಸಂಸಾರದ ಭ್ರಾಂತಿಯು ಉಕ್ಕಿಸುತ್ತ ಕಾಳ್ಗಡಲನು ಬ್ರಹ್ಮಾಂಡವ ಮುತ್ತಿದೆ ಬಾನ್ಬಯಲಲಿ ಹಣ್ಣಿಸಿರುವ ರವಿ ತೇಜವ ಮುಕ್ಕಿದೆ. ಅಂಧಂ...

ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ ಹೆಂಚಿನ ಮನೆಯದು. ಗೆದ್ದಲು ಹಿಡಿದ ಪುಟ್ಟ ಬಾಗಿಲನ್ನು ಮುಚ್ಚಿಬಿಟ್ಟರೆ ಒಡೆದು ಹೋದ ಹೆಂಚು...

ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್...

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ ಕೆಂಪು ಮೀರಲು ಅಲರ ಕಂಸ ಎಲರ ...

ಸತ್ತ ದನವ ತಿಂದೂ ತಿಂದೂ ನಾವಿನ್ನೂ ಸತ್ತಿಲ್ಲವಲ್ಲ ಯಾಕೆ? ಯುಗಯುಗಗಳಿಂದಾ ಪಾಂಡವರಂತೇ… ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ? * ಹೊಲೆಗೇರಿಲಿದ್ದು, ಯುಗಯುಗಗಳಿಂದಾ ಸತ್ತ ದನವೇ ನಮಗಾಯಿತಲ್ಲ ಯಾಕೆ? ಕರೆಬಾನಿಲಿ ಮುಳುಗೆದ್ದರೂ, ಇವ್ರಿನ್ನು...

ಬಟ್ಟೆಗಳ ಕಳಚಿನಿಂತ ಭಂಗಿ ಕೆಳಗಡೆ ಹುಡುಕಿ ಕಾಣದುದು ಮೇಲಿದೆಯೇನೋ ಎಂದು ತದೇಕವಾಗಿ ಆಗಸದಲ್ಲಿ ಕೀಲಿಸಿ ಕಣ್ಣ ಬೆಳಕಿಗೆ ಮುಖಮಾಡಿ ಕೇಳದ ಧ್ವನಿಯೆಡೆಗೆ ಕಿವಿಮಾಡಿ ತುಡಿಯದ ಸ್ಪಂದನಕ್ಕೆದೆ ತುಡಿತವ ತೆರೆದಿಟ್ಟು ಗೆಜ್ಜೆ ತಾಳಲಯದಲ್ಲಿ ಏಕತಾರಿಯ ಏಕನಾ...

ನಾವು ಒಂದು ಕಾಡುಕುದುರೆಯನ್ನು ವಶಪಡಿಸಿಕೊಳ್ಳಬಲ್ಲೆವು. ಆದರೆ ಒಂದು ಹುಲಿಯ ಬಾಯಿಗೆ ಕಡಿವಾಣ ಹಾಕಲಾರೆವು. ಹೀಗೇಕೆ? ಯಾಕಂದರೆ ಹುಲಿಯ ಸ್ವಭಾವದಲ್ಲಿ ಕ್ರೂರತನವಿರುತ್ತದೆ. ಅದನ್ನು ಯಾವ ವಿಧದಿಂದಲೂ ತಿದ್ದಲಿಕ್ಕೆ ಶಕ್ಯವಿಲ್ಲ. ಇದೇ ಕಾರಣದಿಂದ ನಾವ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....