ಹುಟ್ಟುತ್ತೇನೆ ಹುಲ್ಲಾಗಿ

ನಮ್ಮಮ್ಮ ಹೇಳಿದ್ಲು
‘ದೊಡ್ಡವ್ರು ಸತ್ರೆ
ಆಕಾಶದಾಗೆ ಚುಕ್ಕಿ ಆಗ್ತಾರೆ
ನಮ್ಮೊಂತೋರು ಸತ್ರೆ
ಗುಡ್ಡದಾಗಿನ ಕಲ್ಲು,
ಹೊಲದಾಗಿನ ಹುಲ್ಲು
ಆಗ್ತೀವಿ’ ಅಂತ

ಹುಡುಕುವುದಿಲ್ಲ
ಸತ್ತ ಅಪ್ಪನ ಆಕಾಶದಲಿ
ಕಳೆದುಹೋದ ಅಮ್ಮನ
ಚುಕ್ಕಿಗಳಲಿ…

ಎದುರಾಗುವ
ಕಲ್ಲು ಬೆಟ್ಟಗಳಲ್ಲಿ ಕಾಣುತ್ತೇನೆ
ಅಪ್ಪನ ಗಟ್ಟಿತನ
ಹೊಲದ ಬದುವಿನ ಹುಲ್ಲಿನಲಿ
ಹುಡುಕುತ್ತೇನೆ ಅಮ್ಮನ
ಮಮತೆಯ…

ಇರಲಿ ನಿಮಗೇ
‘ಚುಕ್ಕಿ ಚಂದ್ರಮ’ರ ಬದುಕು
ಸಾಕೆನಗೆ
ಈ ಮಣ್ಣಿನ ಗೆಳೆತನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಬಾನು ಈ ಚುಕ್ಕಿ
Next post ಇಂಕದವನ ಕವಿತೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…