ಇರುಳೆಲ್ಲ ಹಣ್ಣಾಗಿ ಬೆಳ್ದಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕಿರುವಾಗ ಮಕರಂದ ಜೇನಾಗಿ ಬರುವಹಾಗೆ ನೂರಾರು ನೋವುಗಳ ನಕ್ಕಿಸು...

ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. ತನ್ನ ಜಾತಕ ನೋ...

ಹೊತ್ತು ಬೇಗನೆ ಮುಳುಗುವುದೆಂದರೆ ಥಂಡಿ ಗಾಳಿ ಬೀಸುವುದೆಂದರೆ ಸೀತಾಫಲ ಮಂಡಿಗೆ ಗಾಡಿಗಳು ಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿ ಮುಂಜಾವದ ಮುಸುಕಿನಲ್ಲಿ ಎಲ್ಲಿಂದಲೊ ಯಾರಿಗೆ ಗೊತ್ತು ಎಲ್ಲರಿಗೂ ನಿದ್ದೆಯ ಮತ್ತು ಎದ್ದು ನೋಡಿದರೆ ಮು...

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ ದಾನದ ಸ್ಫುರಣೆ ನಮ್ಮಯ ಮನದಲಿ ನಿನ್ನದೇ ಸ್ಮರಣೆ ಕಾಳಿ ಜಪವಿದೋ ಮರೆಸಿತು ಬವ...

ನಾನು ಪ್ರೀತಿಸಿದ್ದು ನನ್ನನ್ನೆ ನನ್ನ ಅಹಂಕಾರವನ್ನು ನನ್ನ ದುಃಖವನ್ನು ನನ್ನ ಕೆಟ್ಟತನವನ್ನು ಅದಮ್ಯವಾಗಿ ಪ್ರೀತಿಸಿದ್ದು ನಾನೆ. ಪ್ರೀತಿ ಬಟ್ಟಲು ತುಂಬುವ ಮೊದಲೆ ಆಸೆ ಬರುಕಿಯಂತೆ ಕುಡಿಯುತ್ತಿದ್ದವಳು ನಾನೆ. ಒಮ್ಮೆ ಮಾತ್ರ ನನಗೆ ಗೊತ್ತಿಲ್ಲದ ಹಾ...

ಗುಳ್ಳೌ ಬಾರೇ ಗೌರೌ ಬಾರೇ ಸೀಗೌ ಬಾರೇ ಸಿವನಾರೇ ಗೆಳತೇರೆಲ್ಲಾ ಗರ್ದಿಲ್ಬಾರೆ ಸುಬ್ಬೀ ಸುಬ್ಬೀ ಸುವನಾರೇ ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ ಗೆಳತೇರ್‍ಕೂಡಿ ಆಡೋಣು ಕುಂಬಾರ್‍ಗುಂಡಾ ತಿಗರೀ ತಿರುವಿ ಬಗರೀ ಬಿಂಗ್ರೀ ಆಗೋಣು ಚಂಚಂ ಚಂದಾ ಮುಗಿಲಾ ನೀರಾ ...

ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ! ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ… ಟೆನ್ಶನ್ನಿನ ತಿಪ್ಪವ್ವ… ರಕ್ತದೊತ್ತಡದ ರಂಗವ್ವ… ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...