ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು
ಜಡಿದ ಬಾಗಿಲ ಬೀಗ
ಶಿವನು ಆಗಿಹನೆ ಅಲ್ಲಿ ಬಂಧಿ
ವಿಶ್ವ ಕರ್ತನ ತಂದು
ಗುಡಿಯ ಬಂಧನವಿಟ್ಟು
ಮೆರೆದ ಮೌಢ್ಯವು ಮನುಜ ಬುದ್ಧಿ

ಹಲವು ನಾಮದ ಒಡೆಯ
ಸಕಲ ಸೃಷ್ಟಿಯ ಸುಧೆಯ
ಹರಿಸುವಾತಗೆ ಬೇಕೆ ಒಂದು ಮನೆಯು
ಜೀವ ಜೀವದ ಒಳಗೆ
ಹುದುಗಿರುವ ಆತ್ಮನವ
ಭಾವಿಸಲು ಸರ್ವರೂ ಅವನ ಕುಡಿಯು

ಸರ್ವಶಕ್ತನು ಅವನು ಸರ್ವಜ್ಞನು
ರವಿರಶ್ಮಿ ಪ್ರಭೆಯಲ್ಲೂ
ರಮ್ಯಶಶಿ ಕಳೆಯಲ್ಲೂ
ನೀಲಾಮಂಬುಧಿ ಆಳದಲ್ಲೂ
ಅಣುರಣತೃಣ ಕಾಷ್ಟದಲ್ಲೂ
ಸರ್ವವ್ಯಾಪಕನು

ಬಿಡು ನಿನ್ನ ಅಜ್ಞಾನ
ತಿಳಿ ಆತ್ಮವಿಜ್ಞಾನ
ಬೆಳಗುವುದು ಅವಿರತದಿ ಬ್ರಹ್ಮಜ್ಞಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಾನ
Next post ಕಾಳಗ

ಸಣ್ಣ ಕತೆ

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ತಿಮ್ಮರಾಯಪ್ಪನ ಬುದ್ಧಿವಾದ

  ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…