ಮಧ್ಯಯುಗೀನ ಇಂಗ್ಲೆಂಡ – ರಾಜಕೀಯ, ಧಾರ್‍ಮಿಕ, ಸಾಮಾಜಿಕ ಸಾಹಿತ್ಯಿಕ ನೋಟ

ಮಧ್ಯಯುಗೀನ ಇಂಗ್ಲೆಂಡ – ರಾಜಕೀಯ, ಧಾರ್‍ಮಿಕ, ಸಾಮಾಜಿಕ ಸಾಹಿತ್ಯಿಕ ನೋಟ

ಚಿತ್ರ: ವಿಕಿಮೀಡಿಯ

ಹದಿನಾಲ್ಕನೇ ಶತಮಾನದ ಉದ್ದಕ್ಕೂ ಬದಲಾವಣೆಯ ಗಾಳಿ ಇಂಗ್ಲೆಂಡಿನ ಪ್ರತಿ ಹಂತಗಳಲ್ಲೂ ಬೀಸತೊಡಗಿತ್ತು. ರಾಜಕೀಯ, ಸಾಮಾಜಿಕ, ಧಾರ್‍ಮಿಕ, ಹಾಗೂ ಸಾಹಿತ್ಯಿಕ ರಂಗಗಳಲ್ಲಿ ಅಭೂತವಾದ ಬದಲಾವಣೆಗಳು ಗೋಚರಿಸತೊಡಗಿದ್ದವು.

ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ ಹದಿನಾಲ್ಕನೇ ಶತಮಾನದ ಪೂವಾರ್ಧದಲ್ಲಿ ೧೩೨೭ರಲ್ಲಿ ಸಿಂಹಾಸನವೇರಿದ ಮೂರನೇ ಎಡ್ವರ್ಡನು ರೋಜರ್ ಮೋರ್‍ಟಿಮರನಿಂದ ಹಲವು ರಾಜಕೀಯ ತೊಂದರೆಗಳ ಅನುಭವಿಸಿದ. ಅದೂ ಅಲ್ಲದೇ ಆತನ ತಂದೆ ಎರಡನೇ ಎಡ್ವರ್ಡಗೆ ಹತ್ತಿರನಾಗಿದ್ದ. ಆತ ರಾಣಿ ಕ್ವೀನ್ ಇಸಾಬೆಲ್ಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ಎಲ್ಲ ಕಾರಣಗಳಿಂದ ಮೂರನೇ ಎಡ್ವರ್ಡ ಆತನನ್ನು ಬಂಧಿಸಿ ನೇಣಿಗೇರಿಸಿದ ಮತ್ತು ತಾಯಿ ಇಸಾಬೆಲಳನ್ನು ಬಂಧಿಸಿಟ್ಟ. ಆದರೆ ಆತನ ಕಾಲ ರಾಜ್ಯಾಡಳಿತಕ್ಕಿಂತ ಪ್ರಾನ್ಸನೊಂದಿಗೆ ಯುದ್ಧದ ಭೀತಿಯ ಏರಿಳಿತ ಕಂಡ ಕಾಲ. ಸುಮಾರು ನೂರು ವರ್ಷಗಳ ಕಾಲ ಪ್ರಾನ್ಸ ಮತ್ತು ಇಂಗ್ಲೆಂಡ ವೈರಿಗಳಾಗಿದ್ದವು. ಈ ಯುದ್ಧ ಕಾಲವೂ ಎರಡೂ ಪ್ರಮುಖ ಗೆಲವು ಮತ್ತು ಎರಡು ಸೋಲಿನ ಅವಧಿಯೆಂದೆ ಹೇಳಬೇಕು. ಯುದ್ಧದ ಮೊದಲ ಅಲೆ ಮೂರನೇ ಎಡ್ವರ್ಡನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ಪ್ರಾನ್ಸ ತನ್ನ ನೈರುತ್ಯಭಾಗವನ್ನು ಇಂಗ್ಲಂಡಿನ ಆಳ್ವಿಕೆಗೆ ಬಿಟ್ಟುಕೊಟ್ಟಿತು.

ಎರಡನೇಯ ಅವಧಿಯಲ್ಲಿ ಪ್ರಾನ್ಸನ ರಾಜ ಚಾರ್‍ಲ್‍ಸ್-೪ ನನ್ನು ಸೋಲಿಸಿ ಇಂಗ್ಲೆಂಡಿನ ದೊರೆ ಐದನೇಯ ಹೆನ್ರಿ ಆತನ ಸುಂದರಿಯಾದ ಮಗಳನ್ನು ವಿವಾಹವಾಗುತ್ತಾನೆ. ಅಷ್ಟೇ ಅಲ್ಲ ೧೪೨೦ರ ಟ್ರೋಯ್ಸ ಒಪ್ಪಂದಕ್ಕೆ ನಾಲ್ಕನೇಯ ಚಾರ್‍ಲ್‍ಸ್ ಸಹಿ ಹಾಕುತ್ತಲೂ ಹೆನ್ರಿ-೫ ಚಾರ್‍ಲ್‍ಸ್-೪ ಪುತ್ರ ಚರ್‍ಲ್‍ಸ್ ದ ಡಾಫಿನ್ ಹಕ್ಕನ್ನು ಕಸಿದುಕೊಂಡು ಆ ರಾಜ್ಯವನ್ನು ತನ್ನ ವಶಕ್ಕೆ ಪಡೆದು ಎರಡೂ ರಾಜ್ಯಗಳ ರಾಜ್ಯಭಾರವನ್ನು ತಾನೇ ವಹಿಸಿಕೊಳ್ಳುತ್ತಾನೆ. ಆದರೆ ೧೪೨೨ರಲ್ಲಿ ಹೆನ್ರಿ-೫ ಮರಣ ಹೊಂದುತ್ತಲೂ ಆತನ ಪುತ್ರ ಬರಿಯ ಎಂಟು ತಿಂಗಳ ಹೆನ್ರಿ-೬ಗೆ ಪಟ್ಟಾಭಿಷೇಕವಾಗುತ್ತದೆ. ಈಗ ೧೯ರ ಹರೆಯದ ಚರ್‍ಲ್‍ಸ್ ದ ಡಾಫಿನ್ ತನ್ನ ತಂದೆ ರುಜುಹಾಕಿದ ಒಪ್ಪಂದವನ್ನು ಮುರಿದು ತನ್ನ ಹಕ್ಕಿನ ರಾಜ್ಯಕ್ಕಾಗಿ ಹಂಬಲಿಸುತ್ತಾನೆ. ಆದರಾತ ರಣಹೇಡಿ, ಸ್ವಯಂಸಶಕ್ತ ಮಾನಸಿಕ ಛಲವಿಲ್ಲದ, ಬಲವಿಲ್ಲದ ರಾಜಕುಮಾರ. ಹಾಗಾಗಿ ಇಂಗ್ರೆಜಿಮೆಂಟ್ನ ಡ್ಯೂಕ್ನೊಂದಿಗಿನ ಕಾಳಗದಲ್ಲಿ ಹಿಮ್ಮೆಟ್ಟಿ ಸೋತು ಹೋಗುತ್ತಾನೆ. ಫ್ರಾನ್ಸನ ದಕ್ಷಿಣಭಾಗದ ಆರ್‍ಲಿಯನ್ಸ್ ಕೋಟೆಯನ್ನು ಇಂಗ್ಲೀಷ ಸೈನ್ಯ ಆಕ್ರಮಿಸುತ್ತದೆ. ಅದೇ ಸಮಯಕ್ಕೆ ಚರ್‍ಲ್‍ಸನ ನೆರವಿಗೆ ಆತನಿಗೆ ಗೊತ್ತಿಲ್ಲದ ಸಹಾಯವೊಂದು ಕಾಯುತ್ತಿದೆ. ಅವಳೇ ಜೋನ್ ಆಫ್ ಆರ್ಕ. ಅದ್ಭುತವಾದ ಶೌರ್ಯ, ಅಗಾಧವಾದ ಆತ್ಮವಿಶ್ವಾಸ ಆಕೆಯ ಆಸ್ತಿ. ರಾಜನಾಗುವ ಚರ್‍ಲ್‍ಸನ ಭಾಗಕ್ಕೆ ಆಕೆ ವರದೇವತೆಯಾಗಿ ಬರುತ್ತಾಳೆ. ಇಂಗ್ಲೆಂಡಿನ ವಿಜಯಕ್ಕೆ ಎರವಾಗುತ್ತಾಳೆ. ಮತ್ತು ಆಗ ಪ್ರಾನ್ಸ ತನ್ನ ಸ್ವತಂತ್ರ ಅಸ್ಥಿತ್ವವನ್ನು ಪ್ರತಿಪಾದಿಸಿಕೊಂಡಿತು.

ಈ ರಾಜಕೀಯ ವಿಪ್ಲವಗಳು ಮಾತ್ರವಲ್ಲದೇ ಸಾಮಾಜಿಕ ಧಾರ್‍ಮಿಕ ಸ್ಥಿತ್ಯಂತರಗಳು ಆ ಕಾಲದ ಶಿಶುಗಳು. ಜಾನ್ ವೈಕ್ಲೀಫ್ ಮತ್ತಾತನ ಅನುಯಾಯಿಗಳು ಚರ್‍ಚಿನ ಧಾರ್‍ಮಿಕ ಕಂದಾಚಾರಗಳ ಬಯಲಿಗೆಳೆಯಲು ಪ್ರಾರಂಭಿಸುತ್ತಲೇ ಪ್ರೋಟೆಸ್ಟಂಟ್ ಚಳಿವಳಿ ಪ್ರಾರಂಭವಾಗಿತ್ತು. ಜಾನ್ ವೈಕ್ಲೀಫ್ ಕ್ಯಾಥೋಲಿಕ್ ಚರ್‍ಚಿನ ಅಧಿಕಾರವನ್ನು ಪ್ರಶ್ನಿಸಿದ ಮೊದಲ ಇಂಗ್ಲೀಷ ವ್ಯಕ್ತಿ. ಚರ್‍ಚಿನ ಕ್ಲರ್‍ಜಿಗಳು ಅನಭಿಷಕ್ತ ದೊರೆಗಳಂತೆ ಜೀವನ ಸಾಗಿಸುತ್ತಿದ್ದು, ಅವರ ಸಂಪತ್ತು ದಿನೇದಿನೇ ಪ್ರವರ್ಧಮಾನಕ್ಕೆ ಬರಲು ಕಾರಣವಾದ ಸಂಗತಿಗಳನ್ನು ವೈಕ್ಲೀಫ್ ವಿರೋಧಿಸಿದ. ಅಲ್ಲಿಯ ಭ್ರಷ್ಟ ಅನಾಚಾರಗಳ ಬಯಲಿಗೆಳೆದ. ಚರ್‍ಚಿಗೆ ಕಾಣಿಕೆಗಳ ನೀಡುವ ಮೂಲಕ ಮೋಕ್ಷ ಪಡೆಯಬಹುದೆಂದು, ಪಾಪದಿಂದ ಮುಕ್ತಿ ಪಡೆಯಬಹುದೆಂಬ ವಿಚಾರಗಳೆಲ್ಲವೂ ಜನರನ್ನು ಮೋಸಗೊಳಿಸುವ ಸಂಗತಿಗಳೆಂಬ ಅರಿವು ಜನರಲ್ಲಿ ಮೂಡತೊಡಗಿದವು.

ಇಂಗ್ಲೆಂಡ ಅರ್ಥವೈವಸ್ಥೆಯ ದುಸ್ಥಿತಿಯನ್ನು ಸಮಾಜದ ಮೇಲೆ ತೆರಿಗೆ ಹಾಕುವ ಮೂಲಕ ತುಂಬಿಕೊಳ್ಳುವ ಪ್ರಯತ್ನಕ್ಕೆ ಸಮಾಜದಲ್ಲಿ ಅಶಾಂತಿ ವಿರೋಧಗಳು ವ್ಯಕ್ತವಾದವು. ಅಕ್ಷರಶಃ ಇಂಗ್ಲೆಂಡ ಬೆಂಕಿಯ ಕುಲುಮೆಯಾಗಿತ್ತು. ಅದರೊಂದಿಗೆ ರೈತಾಪಿ ವರ್ಗದ ಬಂಡಾಯ. ಮಧ್ಯಯುಗೀನ ಜಮೀನ್ದಾರಿ ಪದ್ದತಿಯ ದಬ್ಬಾಳಿಕೆ ವಿರುದ್ಧವೂ ಹೋರಾಟವು ನಡೆದವು. ಹೊಲದಲ್ಲಿ ಕೆಲಸಮಾಡುವ ರೈತ ತನ್ನ ಮನೆಯಿಂದ ಹೊರಹೋಗಲು ಹಳ್ಳಿಯಿಂದ ದೂರದೂರಿಗೆ ಹೋಗಲು, ವಿವಾಹವಾಗಲು ತನ್ನ ಧಣಿಯ ಅಪ್ಪಣೆ ಪಡೆಯಬೇಕಿತ್ತು. ಜಮೀನ್ದಾರನ ಸೇವಕರಂತೆ ದುಡಿಯಬೇಕಿತ್ತು. ಜೀತದ ಇನ್ನೊಂದು ರೂಪವೇ ಆಗಿದ್ದ ಈ ಆಚರಣೆ ಕ್ರಮೇಣ ಬದಲಾಗತೊಡಗಿತು. ಇದರಿಂದ ರೈತರು ಹೆಚ್ಚಿನ ಸ್ವಾತಂತ್ರ್ಯ ನೆಮ್ಮದಿಯ ಹೊಂದಿದರು.

ಅದರೊಂದಿಗೆ ದುಡಿಯುವ ವರ್ಗ, ಕಾರ್‍ಮಿಕವರ್ಗದವರೂ ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಶಕ್ತಿಗಳನ್ನು ಎದುರಿಸಲು ಸನ್ನದ್ಧರಾಗಿದ್ದರು. ಹದಿನಾಲ್ಕನೇ ಶತಮಾನದಲ್ಲಿ ಕಾರ್‍ಮಿಕವರ್ಗವನ್ನು ಬ್ಲ್ಯೆಕ್ ಡೆತ್ ತಲ್ಲಣಗೊಳಿಸಿತು. ಯೂರೋಪಿನ ಮೂರನೇ ಒಂದರಷ್ಟು ಜನಸಂಖ್ಯೆ ಈ ಪ್ಲೇಗ್ ಮಹಾಮಾರಿಗೆ ಬಲಿಯಾಯಿತು. ಇದು ಕಾರ್‍ಮಿಕರ ಕೊರತೆಗೆ ಕಾರಣವಾಗಿ ಕಾರ್‍ಮಿಕರಿಗೆ ಬೇಡಿಕೆಗಳು ಹೆಚ್ಚಾದವು. ಅವರು ಕೇಳಿದಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಯಿತು. ಇದನ್ನು ತಡೆಯಲು ಮೂರನೇ ಎಡ್ವರ್ಡನ ಆಡಳಿತ ಹಳೆಯ ಕಾರ್‍ಮಿಕ ವೇತನವನ್ನು ವಿರೋಧಿಸುತ್ತಿದ್ದ ಕಾರ್‍ಮಿಕರನ್ನು ಬಂಧಿಖಾನೆಗೆ ತಳ್ಳಿ ಅವರನ್ನು ಧಮನಿಸುವ ಪ್ರಯತ್ನ ನಡೆಸಿತು. ಇದು ಸಮಾಜದಲ್ಲಿ ಅಶಾಂತಿಯ ಕೆರಳಿಸಿದವು. ಇವೆಲ್ಲವೂ ಆಗಬೇಕಾದ ಬದಲಾವಣೆಗಳೇ ಆಗಿದ್ದು, ಜಾನ್ ಬಾಲ್, ಕೆಂಟಿಸ್ ಪ್ರೀಸ್ಟ್ ಮುಂತಾದ ಸಮಾಜ ಸುಧಾರಕರು ಕಾರ್‍ಮಿಕರಿಗೆ ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಹಾಗಾಗಿ ಇಲ್ಲಿಯೂ ಬದಲಾವಣೆಯ ಗಾಳಿ ಬೀಸತೊಡಗಿತು.

ಮದ್ಯಯುಗೀನ ಜೀವನ ವಿಧಾನದಿಂದ ಕ್ಲೀಷೆಗೊಂಡ ಯುರೋಪ ಆಧುನಿಕತೆಯ ಗಾಳಿಗೆ ಹಂಬಲಿಸತೊಡಗಿತ್ತು. ಇದೇ ಸಂದರ್ಭದಲ್ಲಿ ಔದ್ಯೋಗೀಕರಣದ ಉಗಮ, ಜವುಳಿ ಉದ್ಯಮಗಳು, ಕರಕುಶಲ ಉದ್ಯಮ, ವ್ಯಾಪಾರ ವಹಿವಾಟುಗಳು ವಿಸ್ತಾರಗೊಂಡವು. ಹೊಸ ಸಂಭ್ರಮದ ಯುಗ ಅದರೊಂದಿಗೆ ಪ್ರಾನ್ಸನೊಂದಿಗೆ ನೂರು ವರ್ಷಗಳ ಯುದ್ಧ ಪರಿಣಾಮವಾಗಿ ಜನರಲ್ಲಿ ರಾಷ್ಟ್ರ ಪ್ರಜ್ಞೆ ಜಾಗೃತಿಗೊಂಡವು. ರಾಷ್ಟ್ರೀಯತೆಯ ಬಿಂಬಿಸುವ ಸಾಹಿತ್ಯಗಳು ರಚನೆಯಾಗತೊಡಗಿದವು.

“ಫಾದರ್ ಆಪ್ ಇಂಗ್ಲೀಷ ಪೋಯಟ್ರಿ” ಎಂದು ಹೆಸರಾದ ಚಾಸರ್ನ ಬದುಕು ಮತ್ತು ಸಾಹಿತ್ಯ ಕೃತಿಗಳು ಆ ಕಾಲದ ಸಂಕೇತವಾಗಿ ನಿಲ್ಲುತ್ತದೆ. ಇಂಗ್ಲೀಷ ಕಾವ್ಯಜಗತ್ತನ್ನು ಗಮನಿಸಿದರೆ ಅದು ತೆರೆದುಕೊಳ್ಳುವುದು ಚಾಸರ್ನಿಂದ. ಇದರರ್ಥ ಆತನಿಗೆ ಮುನ್ನ ಕಾವ್ಯ ರಚನೆಯಾಗಿರಲಿಲ್ಲ ಎನ್ನಲಾಗದು. ಆದರೆ ಆತನಿಂದ ಕಾವ್ಯಕ್ಕೊಂದು ನಿರ್‍ದಿಷ್ಟ ರೂಪು, ವಿನ್ಯಾಸಗಳು ಒದಗಿಬಂದವು. ಆತನ ಕೃತಿಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಅವೆಂದರೆ ಪ್ರೆಂಚ್, ಇಟಾಲಿಯನ್ ಹಾಗೂ ಇಂಗ್ಲೀಷ ಕೃತಿಗಳು. ಚಾಸರ್ನ ಬಹುಮುಖ್ಯ ಕೃತಿ ಮಾಸ್ಟರ ಪೀಸ ಎಂತಲೆ ಕರೆಯಲ್ಪಡುವ ಕ್ಯಾಂಟರಬರಿ ಟೇಲ್ಸ ಎಲ್ಲ ಸಾಹಿತ್ಯ ಜಗತ್ತಿನ ಶ್ರೇಷ್ಟ ಕೃತಿ ಎಂದೆ ಪ್ರಸಿದ್ದ. ಅದರೊಂದಿಗೆ ಆ ಕಾಲದ ಬದುಕು ಮತ್ತು ಆದರ್ಶಗಳು ಜಗತ್ತಿಗೆ ಪರಿಚಯವಾದವು. ತ್ವರಿತವಾಗಿ ಬದಲಾಗುತ್ತಿದ್ದ ಆ ಕಾಲದಲ್ಲಿಯೇ ಬದುಕಿದ್ದ ಚಾಸರ್ ಸಮಕಾಲೀನ ಜಗತ್ತನ್ನು ಪ್ರತಿನಿಧಿಸುವ ಕಾವ್ಯವನ್ನು ಸೃಷ್ಟಿಸಿದ. ಆ ಮೂಲಕ ಕಾವ್ಯ ಜಗತ್ತಿನಲ್ಲಿ ಅಮರನಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೃತ್ಯ
Next post ಕುತೂಹಲ

ಸಣ್ಣ ಕತೆ

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…