
ಮಾತು ಸೋತರೇನು? ಕತ್ತಲಲಿ ಬೆಳಕು ಹೂತಿದೆ ನೋಡು ಮೌನ ಮೋಡವಾದರೇನು? ಇಳೆಯ ತುಂಬ ಮಳೆ ಸಿರಿದಿದೆ ಹಾಡು *****...
ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”? ಹೊರಟಿಹೆ ಗಬ್ಬೆದ್ದ ದೇಹ ಮನಸು ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ- ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು....
ರಶ್ಮಿ ರಥವನೇರಿ ಬರುವ ಸೂರ್ಯ ನನ್ನಯ ಕಾಂತಿಯು, ಬ್ರಹ್ಮ ಬೆಸೆದ ಗಂಟ ನಂಟಿನಿನಿಯ ಜೀವನ ಸಂಗಾತಿಯು | ಇರುಳ ಬೇಗುದಿಯ ಕಳೆವ ಮೂಡಲೆಡೆಗೆ ಚಿತ್ತವು. ಅಡಿಯಿಟ್ಟನೆಲೆಯ ಹದುಳತನವೆ ಬಾಳ ಮಧುಬನ ಚೈತ್ರವು. ಅತ್ತ ಇತ್ತ ಸುತ್ತ ಜೋಕೆಯಿಂದ ಕಿರಣದೆಡೆಗೆ ಯಾ...
ನಿರಂತರ ಚಲನೆಯ ಹಾದಿ ಬೇಸಿಗೆಯ ನಡು ಮಧ್ಯಾಹ್ನ ಕಾಲವೇ ಏನು ನಿನ್ನ ಆಟ ಎಲ್ಲವೂ ಆವಿಯಾಗುವ ಹೊತ್ತು ಮತ್ತೆ ಬೆವರಸ್ನಾನ. ಕಾಲವೇ ವರ್ಷಋತುಗಳಾಗಿ ಮುಂದೆ ಸಾಗುವ ಗುರಿ ಕಾಣದ ಚಲನೆಯ ಆಯಾಮದಲಿ ಪಾಠ ಎಲ್ಲವೂ ಬೆಂದು ಬಸವಳಿದು ಹಣ್ಣಾಗುವ ಮಾಗಿ. ನಡೆಯಲು ...
ಬಲು ಕಾಲ ಸುತ್ತುತಲಿ ಬಳಲಿದೆನು ಬಲು ದೂರ ಬಂದಿಹೆನು ಎಡಹಿದೆನು ಎನಿತೆನಿತೊ ದಾರಿಯಲಿ ಕೊನೆಗಿಲ್ಲಿ ನಿಂದಿಹೆನು! ನಾಳೆ ಬಾಳೆಂತಹುದೋ ಅರಿಯೆನದ ಇಂದೊಂದೆ ನಿಜವೆನಗೆ; ಅದನೆನಗೆ ತೋರಿಸುತ ಬೆಳಗಿಸಿದ ಉಷೆಯನ್ನ ಬಾಳ ನಗೆ! *****...
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ ಯಾರಿಗಾದರೂ ಮೇಲ್ನೋಟಕ್ಕೆ ಅನ್ನಿಸುವಂ...
(ಷಟ್ಪದಿ ಪದ್ಯ) ಜನ್ಮ ಪಡೆಕೊಂಡು ಬೀದಿ ಬದಿಯ ಚರಂಡಿಯಲ್ಲಿ ಹರ್ಷದಿಂದ ಆ ನಾಥ ಮಗುವು ಜಯಜಯಕಾರವ ಘೋಷಿಸುತ್ತಿತ್ತು. ಅದರ ಶರೀರ ಮೇಲಿನ ಬಟ್ಟೆ ಯೇ ಇ ಆಕಾಶವೆಂದು ನಾಯಿ ಯು ಬೋಗಳುವುದೇ ತಾಯಿಯ ಜೋಗುಳೆಂದು ಭಾವಿಸಿ || ತಾನು ಅನಾಥನೆಂದು ಅನ್ಯಥ ಭಾವಿ...
ಕೇರಳದ ಹುಡುಗಿಯರು ಸದಾ ಶೋಡಶಿಯರು ಎಂದರೆ ಅತಿಶಯೋಕ್ತಿ ಹೌದು ಅಲ್ಲ ಕಾರಣ ಇದ್ದೀತು ಹೀಗೆ- ಕೇರಳದ ಮಣ್ಣು ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ ಛಲೋ ಹೊಸ ಹೆಣ್ಣು-ಎಂದರೆ ಈ ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ ಜೀವಂತ ಒಡ್ಡಿದ ಬೆತ್ತಲೆ...
ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ ಅಂದು, ಅಂತೆಯೇ ಮಾರಿದನೊಬ್ಬ ತನ್ನ ಸತಿಯ ನಡುಬೀದಿಯಲಿ ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು ಬಿಕರಿಗಿಟ್ಟ ವಸ್ತುವಿನಂತೆ ಕೊಟ್ಟಮಾತ ಉಳಿಸಿಕೊಳ್ಳಲು ಸತ್ಯದ ಕೀರ್ತಿಗಾಗಿ ಸತಿಯ ಮಾರಿ, ತನ್ನ ತಾ ಮಾರಿಕೊಂಡ ಹ...
ಮುಗಿದುಹೋಯ್ತು ಬಂದ ಕೆಲಸ ಇನ್ನು ಹೊರಡಬೇಕು ದಿಗಂತದೆಡೆಗೆ ಪಯಣ ಮುಗಿದು ಹೋದ ಬಾಳಿಗರ್ಥ ಹುಡುಕಿ ವ್ಯರ್ಥವಾದ ಮೇಲೆ ಹೋಗಿ ಸೇರುವ ಕಡಲ ತಡಿಯ ಕ್ಷಿತಿಜದಂಚಿನ ಬೆಳ್ಳಿ ರೇಖೆಯ ಮೇಲೆ ಬಾನಿರಬಹುದು ಶೂನ್ಯ ಶೂನ್ಯ ಶೂನ್ಯವ ಮೀರಿ ನಿಲ್ಲುವ ಕೆಚ್ಚೆದೆ ಬಂ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














