ತನು ತುಂಬಿ ಮನ ತುಂಬಿ
ಭಾವ ತುಂಬಿ ರಾಗ ತುಂಬಿ
ತುಂಬಿತೋ ಭಕ್ತಿ ಎಂಬ ಕೊಡವು||

ಗಂಗೆ ತುಂಬಿ ಯಮುನೆ ತುಂಬಿ
ತುಂಗೆ ತುಂಬಿ ಭದ್ರೆ ತುಂಬಿ
ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು ||

ಬಣ್ಣ ತುಂಬಿ ಬಿಂಕ ತುಂಬಿ
ಬೆಡಗು ತುಂಬಿ ಬಿನ್ನಾಣ ತುಂಬಿ
ತುಂಬಿತೋ ಅಕ್ಕ ತಂಗಿಯರ ಕೊಡವು ||

ಸುಂಕ ತುಂಬಿ ನ್ಯಾಯ ತುಂಬಿ
ಧರ್ಮ ತುಂಬಿ ಕರ್ಮ ತುಂಬಿ
ತುಂಬಿತೋ ಮಾವ ಅಳಿಯರ ಒಲುಮೆಯ ಕೊಡವು ||

ನವರಸ ತುಂಬಿ ಶೃಂಗರ ತುಂಬಿ
ನಾದ ತುಂಬಿ ನೀನಾದ ತುಂಬಿ
ತುಂಬಿತೋ ಪಂಚಾಗ್ನಿಯೆಂಬ ಕೊಡವು ||

ಜಾಣನೆಂಬ ಜಾಗೃತಿ ತುಂಬಿ
ಮಾನವೆಂಬ ಮಾನ್ಯತೆ ತುಂಬಿ
ತುಂಬಿತೋ ಸಂಸಾರವೆಂಬ ಕೊಡವು||
*****