ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ
ಈ ಹವಳದ ಕಣ್ಣಿನ ಪಾರಿವಾಳ
ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ,
ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ.
*****