
ಕೆಲವರು ವಿಷಯದ ಬಗ್ಗೆ ಮಾತನಾಡುತ್ತಾರೆ ಗಂಟೆಗಟ್ಟಲೆ ಕೆಲವರು ವಿಷಯ ಬಿಟ್ಟು ಮಾತನಾಡುತ್ತಾರೆ ದಿನಗಟ್ಟಲೆ *****...
ಲಕ್ಸರಿನ ಬೀದಿಯಲ್ಲಿ ಪೋಲೀಸರು ಒಬ್ಬ ಕಳ್ಳನನ್ನು ಬಿಡದೇ ಮರ್ದಿಸುತ್ತಿದ್ದಾರೆ ಅವನ ದವಡೆ ಒಡೆದು ರಕ್ತ ನಿರಂತರ ಸೋರುತ್ತಿದೆ. ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ ಎಲ್ಲರನ್ನೂ ಕೇಳುತ್ತಿದ್ದಾಳೆ: ಹಿಂದಾದುದನ್ನು ನಾನು ಕಂಡಿದ್ದೇನೆ ಮುಂದಾಗುವುದು ನನ...
ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ ಚಿಗುರತಣಿಸಿ...
೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದ...
ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವ...
ನನ್ನ ಗೆಳೆಯಾ ಚಿನ್ನ ತೆನೆಯಾ ಆಗು ಕಾರಣ ಪುರುಷ ನೀಂ || ತೋಳ ಬಲವು ತೋಳವಾಗದೆ ಬಿದ್ದ ಮಕ್ಕಳ ಎತ್ತಲಿ ಬುದ್ದಿ ಬಲವು ಬೂದಿಯಾಗದೆ ಬೆಂದ ಬಡವರ ಅಪ್ಪಲಿ ಹಸಿರು ಆಗೈ ಹೂವು ಆಗೈ ಹಣ್ಣು ಹಂಪಲ ಸುರಿಯು ನೀ ಜಂಗು ಕಬ್ಬಿಣವಾಗಬೇಡೈ ದ್ರಾಕ್ಷಿ ಗೊಂಚಲವಾಗು...
ಸರಕಾರದ್ದು ಸಮನ್ವಯದ ಮೋಡಿ; ಟಂಕಿಸಿದ ಒಂದು, ಎರಡು ರೂಪಾಯಿ ನಾಣ್ಯಗಳ ನೋಡಿ! *****...
ಮೊನ್ನೆ ನಾನು ಕಾರು ಓಡಿಸುತ್ತಿದ್ದಾಗ ಸಮೀಪ ಕಂಡ ಒಬ್ಬ ಪೊಲೀಸಿನವನಿಗೆ ನ್ಯಾಶನಲ್ ಪಾರ್ಕಿನ ದಾರಿ ಕೇಳಿದೆ. ಆತ ಹೇಳಿದ – ‘ಡೆಡ್ ಎಂಡ್‌ವರೆಗೂ ಹೋಗಿ. ನಂತರ ರೈಟಿಗೆ ತಿರುಗಿ…’ ಡೆಡ್ ಎಂಡ್…. ಶಬ್ದ ಕೇಳುತ್ತಲೇ ನಡುಗಿಬಿಟ್ಟೆ...
ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ; ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ ಮೀರಿ ಮಿಂಚಿದ ಚಿಗರೆ ಹರಿದೋಡಲಿ ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ, ಮರ್ತ್ಯಲೋಕದ ಮಿತಿಗೆ ಮಾನ ಬರಲಿ ಎಲ್...
‘ಕಾಯ’ಬೇಕಿರುವುದು ಕಾಯಾತೀತ ರೊಟ್ಟಿಯಾತ್ಮಕ್ಕಾಗಿಯೇ ಎಂದು ಅರ್ಥವಾಗಿದ್ದರೆ ಅಕಾಯ ಹಸಿವೆಗೆ ಕಾಯುವುದೂ ಅಮೂಲ್ಯವೆನಿಸುತ್ತಿತ್ತು. ಈಗ ಕಾಯವೇ ಮುಖ್ಯ,...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...














