ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿ ತೋರಿಸಲು ಏನೆಲ್ಲ ವಿಪುಲ ಅವಕಾಶಗಳಿವೆ. ಅಲ್ಲಿ ಗುರ್‍ತಿಸುವಂಥಾ ಹೃದಯ ಶ್ರೀಮಂತಿಕೆಯವರಿದ್ದಾರೆ. ಜ್ಞಾನ ಬೆಳೆದಂತೆಲ್ಲ ವಿಜ್ಞಾನ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಭವ್ಯ ಭಾರತದ ಹಿರಿಯ ವಿಜ್ಞಾನಿ ಹಾಗೂ ಡಿ‌ಆರ್‌ಡಿ‌ಒದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮಾಜಿ ಮುಖ್ಯ ನಿ...

(ಕಾರ್ಮೆನ್‌ಗೆ) ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ ಥೆಮ್ಸ್ ನದಿಗೆ ಅಪರೂಪದ ಭರ ನದಿಯ ಮಧ್ಯದ ತನಕ ಹಾಕಿದ ಮರದ ಸೇತುವೆಯಲ್ಲಿ ನಾವು ನಡೆದವು. ರೊಟ್ಟಿಯ ತುಣುಕಿಗೆ ಅಥವಾ ಸೇಬಿನ ತಿರುಳಿಗೆ ಬಾತುಕೋಳಿಗಳು ಹತ್ತಿರಕ್ಕೆ ಬರುತ್ತಿದ್ದುವು ನೋಡುತ್ತ ನಿ...

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು ಇಣುಕುತ್ತಿವೆ ಗದ್ದೆ ಗುಳ್ಳೆಗಳು ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ ಹದುಳಿಂದ ಪಾದ ಊರುತ್ತ, ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗ...

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ…. ಈಡೇರದ ಆಸೆಗಳ ಮೇಲೆ ಅಷ...

ಗಾನ ಮಾನಸ ಗಗನ ಅರಳಿತು ವಿಶ್ವ ಕಾನನ ತಟದಲಿ ಆತ್ಮ ವೀಣಾ ತಂತಿ ತುಡಿಯಿತು ಝನನ ಝೇಂಕರ ನಟಿಯಲಿ ಮಾಯೆ ಶಿಲ್ಪಿನಿ ರೂಪ ಬಲ್ಪಿನಿ ಕಟಿಯ ಕಂಪಿಂ ಕುಣಿದಳು ಎದಯ ಲಿಂಗನ ಆತ್ಮ ಲೋಲನ ತಪವ ಚಂಛಂ ಮಿಡಿದಳು. ಬಣ್ಣವಾಯಿತು ಬದುಕು ಮೂಡಿತು. ರಾಗ ಯೌವನ ತಂದಳು...

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದ...

ಅಂದು ಇಂದು ಎಂದಿಗೂ ಲೋಕದ ಥರ ಒಂದೇ ಅವತಾರಗಳಳಿದರೂ ಕ್ರಿಸ್ತ ಬುದ್ಧ ಎಳೆದರೂ ಒಂದೆ ಒಂದು ಇಂಚೂ ರಥ ಸರಿಯಲಿಲ್ಲ ಮುಂದೆ. ಅಂಥ ಇಂಥ ರಥವೆ ? ಕೊಂಚ ಕೊರಕಲತ್ತ ಜಾರಿ ತಪ್ಪಿತಷ್ಟೆ ದಾರಿ, ಪಥಕೆಳೆಯಲು ಬಂದ ಧರ್ಮ ಅಲ್ಲಲ್ಲೇ ಗೋರಿ! ಒಳಗೆ ಕುಳಿತ ದೈವದೆ...

ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ....

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...