ಹಸಿವೆಗೆಷ್ಟು ಮಾತಿತ್ತೋ
ಕೇಳಲಾರಿಗೆ ಪುರುಸೊತ್ತು?
ವ್ಯರ್ಥ ಮಾತು ಯಾರಿಗೆ ಬೇಕು?
ರೊಟ್ಟಿ ಏತಕ್ಕೆ ಕಾದಿತ್ತೋ?
ಕಾಯುವ ತಪ
ಕಾದವರಿಗೇ ಗೊತ್ತು.
ಮುಟ್ಟಲಾಗದ ಗುಟ್ಟುಗಳು
ಮುಖವ ಕೊಲ್ಲುತ್ತವೆ.

*****