ಮಾತಿನ ತೆರೆ ಒಂದು “ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ ಇದು ಇರದಿದ್ದರೆ ನನಗೆ ಸಮಾಧಾನವೇ ಇಲ್ಲ. ಪ್ರತಿಯೊಂದು ಕಾರ್ಯವನ್ನು ಆರಂಭಿಸುವಾಗ...
ನಲವತ್ತಾಗುವವರೆಗೆ ತಿನ್ನುವುದಕ್ಕೆ ಬದುಕಿರುತ್ತಾರೆ ನಲವತ್ತಾದ ನಂತರ ಬದುಕುವುದಕ್ಕೆ ತಿನ್ನುತ್ತಾರೆ *****...
ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ ಬಗ್ಗೆ ಅಳು ನಗುವಿನ ಬಗ್ಗೆ ಏನು ಹೇಳುತ್ತಿದೆಯೊ ಅರ್...
ಶಬರಿಗೆ ಒಂದೊಂದು ಮರವನ್ನೂ ತಬ್ಬಿಕೊಳ್ಳಬೇಕನ್ನಿಸಿತು. ಹತ್ತಾರು ಮರಗಳನ್ನು ತಬ್ಬಿಕೊಂಡಳು. ಒಂದು ಮರದ ಹತ್ತಿರ ತಬ್ಬಿ ನಿಂತುಬಿಟ್ಟಳು. ಬಿಟ್ಟು ಕೂಡಲಾರೆನೆಂಬ ಭಾವ. ಮುಚ್ಚಿದ ಕಣ್ಣೊಳಗೆ ಮೂಡಿನಿಂತ ಸೂರ್ಯ ಚೈತನ್ಯ. “ಏಯ್ ಶಬರಿ” ತ...
೧ ಈ ಕದಡಿದ ಕೊಳ ತಿಳಿಯಾಗುವುದಿಲ್ಲ. ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ ೨ ಬಿಳಿತೊಗಲಿನ ಗೋಡೆಯ ಮೇಲೆ ಬೆಳೆಯುತ್ತಿದೆ ಊರು ನಗರ ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ. ೩ ತರು ಲತೆಗಳು ಅಲ್ಲಿಲ್ಲಿ ಬೋ...
ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ ಹೊರಟು ಹೋಯಿತು ನೆಲವನ್ನು ತೊಯ್ಯದೆ ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ...
ಅಧ್ಯಾಯ ಮೂರು ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಎಷ್ಟೇ ಆ...
ಅವಳ ಬೆರಳಾಡಿ ಬಣ್ಣಹೂವಾಗುತ್ತದೆ. ಅವಳ ಮೈ ತನ್ನದೇ ನೆನಪುಗಳಲ್ಲಿ ಅರಳುತ್ತದೆ. ಅವಳಿಗೆ ಸದಾ ಕೆಲಸ- ನಮ್ಮ ಮದುವೆ ಉಡುಪು ಹೊಲಿಯುವುದೊಂದೇ, ಪಕ್ಷಿಯ ಹಾಗೆ ಸದಾ ನಮಗೆ ತಿನ್ನಲು ಆಹಾರ ಹುಡುಕುವುದೊಂದೇ. ಬದುಕಲ್ಲಿ ಮುಳ್ಳುಗಳಿದ್ದರೆ ಅವಳೇ ತನ್ನೆದೆ...
ಮೂಡಣ ಪಡುವಣ ಕಡಲಿನ ವಡಬನೆ ನಡು ಬಾನಿನ ವರ ಭಾಸ್ಕರನೆ ವೀಚೀ ರಂಗಾ ಭುವನ ತರಂಗಾ ಕೊಂಕಣ ತೆಂಕಣ ಶಾಮಲನೆ ಗಗನಾಂಗಣ ರವಿ ಎದೆಯಾಂಗಣ ಕವಿ ಭಾರತಿಯಾತ್ಮದ ಚಿನ್ಮಯನೆ ಸತ್ಯಾರಾಧನ ಶಾಂತಾಹ್ಲಾದನ ಹುಯ್ಲಿನ ಕೊಯ್ಲಿನ ವಿಪ್ಲವನೆ ಓವೋ ಗುರುಹರ ಆತ್ಮಾಂಗಣ ಚಿ...
ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು. ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು. ಸ್ನೇಹಕೂ ಹುಬ್ಬುಗಂಟನು ತರುವ ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








