ಹೊಸ ವರ್‍ಷವು ಬರಲಿ
ದಿನ ದಿನವೂ ಪ್ರತಿ ಕ್ಷಣವೂ
ಹೊಸತನವು ಬಾಳಿಗೆ
ಹೊಸ ಚೈತನ್ಯವ ತರಲಿ||

ಹರುಷದಾ ಮೊಗ ಚೆಲ್ಲಿ
ವರುಷದ ಕಳೆ ಚಿಗುರಿ
ಮುಂಗಾರಂಚಿನ ಇಬ್ಬನಿ ಹನಿ
ಪುಟಿದೇಳುವ ಕಾಮನೆ ಹೂವಾಗಲಿ||

ಚಂದ್ರಿಕೆಯಾ ಸಖಿ ಹಸೆಮಣೆಯ
ಕಾಂತೆಯರು ಮುತ್ತಿನಾರತಿ ಬೆಳಗಿ
ಅಂಬರಕೆ ಚಪ್ಪರ ಕಟ್ಟಿ
ಸ್ವರ್‍ಗ ಆಸೀಮ ಸಪ್ತಪದಿ ಸಾಗಲಿ||

ಸೊಬಗಿನಾ ಬಣ್ಣ ಹೊನ್ನರಂಗಿನಲಿ
ರಂಗಾದ ಹೂತೋಟ ನೈದಿಲೆ
ಕೋಗಿಲೆ ಕುಹೂ ಕುಹೂ ಜೀವನ ಗಾನ
ರಾಗ ತಾಳ ಮೋಹಕವೂ ಇಂಪಾಗಲಿ||

ಮೂಡಲೀ ಹೊಸ ವರುಷ
ಜೀವ ಜೀವದುಸಿರ ಪ್ರತಿಕ್ಷಣ
ಮಾನವತೆಯ ಮನ ಪಾವಿತ್ರತೆ
ತ್ಯಾಗ ಶಾಂತಿ ಸಹನೆ ಮಂದಹಾಸ
ಜಗದಭಿಮಾನ ಮೂಡಿ ಐಕ್ಯವಾಗಲಿ||
*****

Latest posts by ಹಂಸಾ ಆರ್‍ (see all)