ಬೇಲಿ
ಭ್ರಮಿಸುತ್ತೆ
ಬೇರ್‍ಪಡಿಸಿದಂತೆ
ಮನುಜರನ್ನು
ಮನ ಮನೆಗಳನ್ನು
ಅವರ ನಾಡನ್ನು

ಬಳ್ಳಿ ಹಬ್ಬಿಕೊಳ್ಳುತ್ತೆ
ಆಶ್ರಯಿಸಿ
ಬೇಲಿಯನ್ನು
ಸ್ನೇಹದ
ಸೇತುವೆಯಾಗಿ
ಹೊಮ್ಮಿಸುತ್ತೆ
ಹೂಗಳನ್ನು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)