ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ. ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ. ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ...
ಫ್ಲೈಓವರ್ ಮೇಲಿಂದ ಹೋಗುತ್ತಿದ್ದಾಗ ರೇಸ್‌ಕೋರ್ಸಿನ ಅಂಗಳದಲ್ಲಿ ಕುದುರೆಗಳು ಓಡುತ್ತಿದ್ದುದನ್ನು ನೋಡಿದ ಚಂದ್ರಹಾಸ ಕೂಡಲೇ ಬೈಕ್ ನಿಲ್ಲಿಸುವಂತೆ ಡೇವಿಡ್‌ನಿಗೆ ಹೇಳಿದ. ಊರಿನಿಂದ ಬಂದಿದ್ದ ಗೆಳೆಯ ಚಂದ್ರಹಾಸನಿಗೆ ಬೆಂಗಳೂರನ್ನು ತೋರಿಸುತ್ತೇನೆಂದ...
ಆಶಾಢ ನಿಬ್ಬಣ ಸೂಶ್ಯಾಡಿ ಬಂತು ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ || ಲೇಸವಾದ ತಾಯಿಯಾಸೆ ಬಿಟ್ಟು ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.|| ಮುತ್ತೈದಿ ಮಂದಿ ಕೂಡಿ ಗೊತ್ತಿಟ್ಟು ಮುದ್ದಾಡಿ ನಿತ್ಯ ನಿರಂಜನ ತೋರಮ್ಮಾ ತಾರಕ ಮನೆಯೊಳು ಮೀರಿದ ದಾ...
ಮಳಿ ಬಂತೇ ರಮಣಿ ಮಾಯದ್ದೊಂದು ||ಪ|| ಮಳಿ ಬಂತೇ ರಮಣಿ ಬೆಳಗು ಮೀರಿತೆ ನಳಿನಲೋಚನೆ ಮಳಿ ಬಂದಿತು ಛಳಿ ಬಿದ್ದಿತು ಕಳೆದೋರಿತು ಇಳಿಸ್ಥಳದೊಳು ಜಲಜಮುಖಿ ಪ್ರಳಯ ಸೂಚನೆ ಇದು ||೧|| ನಾವು ಬರುವ ಹಾದಿ ತಪ್ಪಿ ಸುವಿಚಾರದೋರದೆ ತೊಯ್ಯದ ಗೊನಿ ತಪ್ಪಲಮನಿ ಮ...
ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ ಜಾಣನಾದ ಚಂದ್ರಮನ ಅಳುಕಿಸಿ ಕೋಣೆಯೊಳಗೆ ಅವಮಾನಗೊಳಿಸಿತೆ ||೧|| ರಾಹು ಸಿಟ್ಟಲೆ ಬಂದು ಠಾವು ತಿಳಿಯದೆ ನಿಂದು ತೋಯದ ಗೋನಿಯನು ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨|| ಮಂಗಳವಾರ ಒಂದಾದಿ ರಂಗು...
ಹುಡಕುತ ನಾ ಎಲ್ಲಿ ಹೊಗಲಿ? ಹುಡುಕಿ ನಾ ಬ್ಯಾಸತ್ತೆ ||ಪ|| ಏಳು ಸಮುದ್ರಗಳು ಏಳು ದಿವಸಗಳು ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ ||೧|| ಧರಿಯೆಲ್ಲ ತಿರುಗಿದೆ ಗಿರಿಯೆಲ್...
ವಾರಿಜಾಕ್ಷಿ ವನಪಿನೊಯ್ಯಾರೆ ಬಾರೆ ನೀರೆ ನಿನ್ನನಗಲಿರಲಾರೆ || ಪ || ದೀರೆ ಮರೆಯದಿರಲಾರೆ ಬ್ರಹ್ಮದ ನೀರು ತುಂಬಿದ ಕೆರಿಯ ಮೇಲಿನ ಏರಿಯೊಳು ನೀ ಬಾರದಿಹೆ ನಾ ದಾರಿಯೊಳು ತರುಬಿದರೆ ಸುಮ್ಮನೆ ||ಅ.ಪ.|| ಹರನಾ ಹಿಡಿದೆ ವಿಧಿ ತಲಿಗಡಿದೆ ಹರಿಯ ಚರಣಾಂಬ...
ಗುಗ್ಗುಳ ಹೊರಟಿತಮ್ಮಾ ಈ ಊರೊಳು ಗುಗ್ಗುಳ ಹೊರಟಿತಮ್ಮಾ || ಪ|| ಗುಗ್ಗುಳ ಹೊರಟಿತು ವೆಗ್ಗಳಾಯಿತು ಮ್ಯಾಳಾ ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ ||ಅ.ಪ.|| ಭೂತ ಪಂಚಕ ರೂಪದಾ ಪುರಂತರು ಆತುಕೊಂಡಿರುತಿಹರು ನೂತನವಾಯಿತು ಏ ತರುಣಿ ಕೇಳೆ ಧಾತ ಶಿವ...
ಮುತ್ತು ರನ್ನದ ಕಿಡಿ ಉದುರೀತು ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು || ಪ || ಅಪ್ಪ ಅಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಅಸು ಹಾರಿಹೋಯಿತು ||ಆ.ಪ.|| ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್...
ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ ತಿಳಿದು ಬ್ರಹ್ಮದ ಬಯಲೊಳಗಾಡೋಣಮ್ಮಾ || ಪ || ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ ಸುಳಿದಾಡಿ ಶರಣರ ಬಳಿವಿಡಿದಾಡುತ || ಆ. ಪ. || ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ ಹಮ್ಮನಳಿದು ದಾರಿ ಸುಮ್ಮನೆ ಹಿಡಿದು ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






