ಹೊಸತನವ ಅರಸುತ
ಮನದಿ-ಮುದಡಿ
ಆಕ್ರೋಶದಿ ಅರಚುತ
ಕೊರಗುವ ಕರಳು
ನೋವು ಅರಿಯುವರಾರು
ಹಟ್ಟಿ… ಬೆಟ್ಟಗಳ
ನಡುವಲಿ.. ಹುಟ್ಟಿ
ಬೆಳೆದು ಬಾಳಿದ
ದಶ-ದಶಕಗಳ
ಕಾಲ ಗತಿಸಿದರೂ
ಕಾಣದು-ತಿಳಿಯದ
ಹೊಸ ಬಗೆಯ..
ಹಸನ ಬದುಕು
ಕಾಡು… ಮೋಡಗಳ
ದಟ್ಟ ಕಣಿವೆಯಲಿ
ಕಠಿಣತೆಯ ಕಲ್ಲಾಗಿ
ರಕ್ತ… ದಾಹದಿ…
ಸಾಗುತಿರುವೆವು ನಾವೆಲ್ಲಾ
ಮೃಗಗಳಾಗುತ ಹಗೆತನದಿ
ಅಭಿವೃದ್ಧಿಯ ಅರೆ…
ಭರವಸೆಯಲಿ ಶೋಷಿಸುತ
ಅರೆನಗ್ನ ಜೋಗುತಿಗಳಾಗಿ
ತಿಮಿಂಗಲ ರೂಪದ
ಅಧಿಕಾರಿ-ರಾಜಕೀಯ
ಹೃದಯ-ಹೀನರು
ಕೊಳ್ಳೆ ಹೊಡೆಯುತಿಹರು
ಸರ್ಕಾರಿ ಬೊಕ್ಕಸವಾ
ಇರುವ-ನಮ್ಮಷ್ಟಕ್ಕೆ
ನಾವುಗಳು…
ನಿಸರ್ಗದ ವಾತ್ಸಲ್ಯದ
ಭೂಮಿ-ಆಕಾಶಕೆ…
ಕೈಮುಗಿದು… ಮಣ್ಣಲ್ಲಿ
ಕಣ್ಣಿಟ್ಟು ಬದುಕುವ
ಬಾಳ ಬಳ್ಳಿಯನೆ
ಕಡಿದು ಚೆಲ್ಲುವ
ಗೋಮುಖ ಕಿರಾತರು
ಸುಸಂಸ್ಕೃತ ಸೋಗಿನ
ರೂಪ ತೋರಿಸುತ
ಇರಿತದಿ ದಾಳಿಯಿಡುತ
ನಮ್ಮುಸಿರಿನ ಹಸಿರು
ನೆಲ… ಜಲ… ತಾಣ
ಬರಿದಾಗಿಸುತ ಬರಡು
ಮಾಡುತಿಹರು ಸಭ್ಯರು
ಕಣ್ಣು ಬಿಟ್ಟಾರೇನು ಇವರು
ನಮ್ಮ ಆಕ್ರೋಶದ
ಜನಪದ ದನಿಯ
ಸದ್ದು ಅಪ್ಪಳಿಸುತ
ಎದ್ದೇಳುವ ಮುನ್ನ…
*****
- ಅಮರ ಕಲಾವಿದ ಸಪ್ದರ - October 23, 2020
- ಪ್ರತಿಭಾವಂತ ಜಾದೂಗಾರ - August 7, 2020
- ಮಧುರ ಬಾಂಧವ್ಯದ ಭಾವಜೀವಿ - April 24, 2020