ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ ಅಬ್ಬರದಿ ಮಾಂತನೊಳು ಕೂಡಿದ್ಯಾ ||ಪ|| ಮಂಗಳಾತ್ಮನೊಡನೆ ಮಾತಾಡಿದ್ಯಾ ಗಂಗಾಧರನಿಗೆ ಕೋರಿಯ ಬೇಡಿದ್ಯಾ ||೧|| ಮರ್ಟಾಳ ಪತಿಯ ಪದವ ಹಾಡಿದ್ಯಾ ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ ||೨|| ತಾನರಸಿ ವಿಷಯ ಕಲಿ ದೂಡಿದ್ಯಾ ದ...
ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ ಕಡಕೋಳದಲಿ ವಸತಿ ಮಾಡಿದಿಯೋ ||ಪ|| ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು ನೋಡಿ ಕನ್ನಡ ಪದ ಹಾಡಿದರಯ್ಯಾ ||೧|| ಮನಸಿ ನಿನಗೆ ನಾ ಏನಂದೆ ಆತ್ಮದಿ ನೆಲಸಿಕೊಂಡು ಸುಖವನು ಬೇಡಿಕೊಂಬೆನಯ್ಯಾ ||೨|| ರಸಿಕರಾಜ ಗೋವಿಂದನ ಸ...
ವಿರುಪಾಕ್ಷಲಿಂಗವಿದ್ದ ಹಂಪಿ ನೋಡೋಣ ಬಾರಾ ಇಬ್ಬರು ಕೂಡಿ ||ಪ|| ಅಂಗಲಿಂಗ ಸುಖ ಎರಡು ಕೂಡಿ ಒಂದೆ ಶಿವ ಶಬ್ಬದೊಳಗೆ ||೧|| ಗಂಗಿ ಸರಸ್ವತಿ ಯಮುನಾ ತೀರ ಮಧ್ಯದಿ ಹುಡುಕೋಣ ಬಾರೆ ||೨|| ಶ್ರೀಶಂಕರನ ಪಾದದಡಿಯಲ್ಲಿ ನೋಡಿದ ಕೊನೆಯೊಳು ನೋಡೋಣು ಬಾರೆ ||...
ಅರುಣ್‌ಗಾಂಧಿ ಹೆಗಲಿನಿಂದ ಲ್ಯಾಪ್‌ಟಾಪಿನ ಚೀಲವನ್ನು ಕೆಳಗಿಳಿಸಿ ತಿರುಗುವ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಬಿಳಿಯ ಸಮವಸ್ತ್ರ ಧರಿಸಿದ್ದ ಸೇವಕ ಬಂದು ಒಂದು ಕವರನ್ನು ಕೊಟ್ಟು ಸಹಿ ಮಾಡಿಸಿಕೊಂಡು ಹೋದ. ಪ್ರತಿದಿನ ಹೀಗೆ ಲೆಟರ್‌ಗಳು ಬರುತ್ತಿದ್ದ...
ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ ||ಪ|| ಮೇಧಿನಿಯೊಳು ಸಂಶಿಯ ಜನ ವಿನೋದದಿಂದು ಮಾಡಿದಂಥಾ ||ಅ. ಪ.|| ಧರಿಗೆ ಸಂಶಿ ಮರೆವ ಮೋಜಿನ ಪರಿ ಬಾರೆ ಪ್ಯಾಟಿ ಮಳಗಿ ಸಾಲ್ಗಳೆರದು ಬಾಜಿನ ನೆರೆ ಶುಭದಿ ಅದರೊಳಗಿರುವರೈ ಅನೇಕ- ತರ ಜನ ಸರಿಗಾಣೆ ನಾ ಪಿರ...
ತೋಟವ ನೋಡಿರಯ್ಯಾ ಸದ್ಗುರುವಿನ ಆಟವ ನೋಡಿರಯ್ಯಾ || ಪ || ನೀಟಗೂಡಿ ನಿಜ ಬ್ರಹ್ಮಜ್ಞಾನದಿ ಕೋಟಿ ಕರ್ಮ ಸಂಹರಿಸಿದ ಧರ್ಮವ ||ಅ.ಪ.|| ಬೈಲೊಳು ಬೈಲಾಗಿ ಕವಲಿಲ್ಲದ ಮೂಲ ಸಹಿತವಾಗಿ ಜೋಲುವ ಫಲಗಳು ಗಾಳಿಗೆ ಒಲಿಯಲು ಸಾಲು ಸಾಲಿನ ಮೇಲೆನಿಸುವವರ ||೧|| ಭ...
ಎರಗಿ ಬಿನ್ನಾ ಮಾಡದ್ಹೋದರು ಗುರುವರನ ಗಣರಿಗೆರಗಿ ಬಿನ್ನಾ ಮಾಡದ್ಹೋದರು ನರಗುರಿಗಳು ಪರಿಹಾಸ್ಯದಿ ಜರಿದರು ಎನ್ನ ಕರೆಸಿದರೈ ಹರನ ಶಾಸ್ತ್ರಕೆ ವರಪ್ರಸ್ತಕೆ ಮರಿತರು ನಿಮಗರಿಕಿರಲೈ ||ಪ|| ಹಿಂದಕ್ಕೊಮ್ಮೆ ಪ್ರಥಮರೊಡನೆ ದ್ವಂದ್ವ ಬಯಸಿ ರೇಚಿತಂದೆ ಒಂದ...
ಬಾರದಿರುವರೇನೇ ಭಾಮಿನಿ ಬಾರದಿರುವರೇನೇ ||ಪ|| ಬಾರದಿರುವ ಕಾರಣವೇನಲೆ ಸಖಿ ದೂರದಿಂದ ಮುಖ ತೋರಿ ಸಮಯದಿ ||ಅ.ಪ. || ನಂಬದವನ ಕೂಡ ಭಾಮಿನಿ ಸಂಭ್ರಮಿಸುವದು ಬ್ಯಾಡ ನೋಡ ಅಂಬುಜಾಕ್ಷಿಯೇ ಕಂಬುಕಂದರಿಯೇ ಹಂಬಲಿಸುತ ನಿನ್ನ ಬೆಂಬತ್ತಿ ನಾ ||೧|| ಕುಸುಮಲ...
ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ ||ಪ|| ಆರಮುಂದೆ ಹೇಳಿದರೆ ತೀರದೀ ಮಾತು ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು ಬರತೀನಂತಾ ಹೇಳಿಹೋದೆಲ್ಲೆ ಮರೆತು ಮನ ಕಲ್ಲು ಮಾಡಿದರೇನು ಬಂತು ||ಆ. ಪ.|| ಸಣ್ಣ...
ಇದು ಏನು ಸೋಜಿಗವೇ ಮಾನಿನಿಯಾಗಿ ಇದು ಏನು ಸೋಜಿಗವೇ ||ಪ.|| ಕಲ್ಲಿನೊಳಗೆ ಮುಳ್ಳು ಮುಳ್ಳಿನೊಳಗೆ ಜೊಳ್ಳು ಎಳ್ಳು ಕೋಲಿಯ ಕದ್ದು ಕಳ್ಳ ಕಾಡಿನೊಳೋದದ್ದೇನು ಸೋಜಿಗವೇ ||೧|| ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ ಹೊಕ್ಕಾ ಮುಂದಕ್ಕೆ ಸಾರಿ ಮುಕ್ಕರಿಸ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






