ಮಂಜುನಾಥ ವಿ ಎಂ

#ಕವಿತೆ

ಮರಳಿನ ಹಡಗು

0

  ನಾನು ಮರಳಿನಲ್ಲೊಂದು ಹಡಗನ್ನು ಕಟ್ಟಿಕೊಂಡೆ, ಪ್ರಯಾಣ ಬಹುದೂರದಾದ್ದರಿಂದ. ಸಮುದ್ರದ ಮಧ್ಯೆ ಬೃಹತ್ ಅಲೆಯೊಂದು ಏರಿ ಬಂದಾಗ ನಾನು ಧೃತಿಗೆಡಲಿಲ್ಲ; ತಿಮಿಂಗಿಲವೊಂದು ಢಿಕ್ಕಿಯೊಡೆದು, ರಕ್ತ ಕಾರಿ ಸತ್ತು ಹೋಯಿತು. ಗಹಗಹಿಸಿ ನಗತೊಡಗಿದೆ, ಆಗ ಮರಳಿನ ಕಣಗಳು ಉದುರತೊಡಗಿದ್ದು ನನಗೆ ಗೊತ್ತಾಗಲಿಲ್ಲ. ಹಾಯಿಗಂಬದ ಮೇಲೆ ಮಲಗಿ ಸಮುದ್ರದ ಒಣಗಾಳಿ ಸೇವಿಸುತ್ತಿದ್ದವನು, ದಡ ಕಂಡಿತೆಂದು ಒಮ್ಮೆಲೇ ಹಾರಿದೆ. ಅಯ್ಯೋ […]

#ಇತರೆ

ಜರ್ಮನಿಯ ರೈತ

0

ಇಂಡಿಯಾದ ಭೂಪಟದಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದರೂ ಕಾಣದಿರುವ ಕಟ್ಟಿಗೇನಹಳ್ಳಿ ಗ್ರಾಮಕ್ಕೆ ಎಪ್ಪತ್ತರ ದಶಕದಲ್ಲಿ ಇವನು ಬಂದು ತಳ ಊರಿದ. ನೀರಿನಂತೆ ಜನರ ರಕ್ತ ಹೀರಿದ ಹಿಟ್ಲರ್ ನೆಲದಿಂದ ಬಂದವನಾದರೂ ಇವನು ಗಾಂಧಿಯ ನೆರಳಿನಲ್ಲಿದ್ದ. ಏಳು ಅಡಿಗಿಂತ ಎತ್ತರವಿದ್ದ ಇವನು ಸೇಬಿನ ಬಣ್ಣ ಹೊಂದಿದ್ದ. ಇವನು ಪ್ಯಾಂಟ್ ಹಾಕಿದ್ದನ್ನು ನಾನು ನೋಡಲೇಯಿಲ್ಲ. ಬಣ್ಣಬಣ್ಣದ ಚೆಡ್ಡಿಗಳನ್ನು ಧರಿಸುತ್ತಿದ್ದ, ನಮ್ಮಂತೆ […]

#ಹನಿಗವನ

ಕತ್ತಲೆ ಬೆಳಕು

0

ಮಿಣುಕು ಹುಳುಗಳನ್ನು ಹುರಿದು ತಿನ್ನುವ ಇವಳ ಕಟು ಸ್ವಭಾವವೇ, ಅಲ್ಲಿ ಮೂಲೆಯಲ್ಲಿ ಕವಡೆಯಾಡುತ್ತಿರುವವನ ಬೆಳಕು. ***** ಪುಸ್ತಕ: ಲೆವೆಲ್ ಕ್ರಾಸಿಂಗ್

#ಕವಿತೆ

ಮನಸ್ಸು

0

  ಅದು ಮರಗಟ್ಟಿ ಹೋಗಿದೆ, ಆನೆ ಕಾಲು ರೋಗದಂತೆ ನಿಲ್ಲದೆ ನಡೆಯುವ ಕಾಲುಗಳು; ಮುರಿದುಬಿದ್ದರೆ ಕುಂಟಿಣಿಗನಾಗುವ ಅಥವಾ ಮಣ್ಣು ಸೇರುವ ಮೃತ ದೇಹ. *****

#ಕವಿತೆ

ಬ್ರಿಕ್ಸ್ & ಟೈಲ್ಸ್ ಕಂಪೆನಿ

0

ನೀವು ಯಾವಾಗಲಾದರೂ ಈ ಕಡೆ ಬಂದರೆ ಬ್ರಿಕ್ಸ್ & ಟೈಲ್ಸ್ ಕಂಪೆನಿಯ ಕಾರ್ಮಿಕರನ್ನು ಒಮ್ಮೆ ಗಮನಿಸಿ. ಸುಟ್ಟ ಇಟ್ಟಿಗೆಗಳಂತೆ, ಬಿರುಕು ಬಿಟ್ಟ ಹಂಚಿನಂತೆ, ಉಗಿಬಂಡಿಯ ಬೆಂಕಿ ಹೊಗೆಯಿಂದ ಸೀದು ಕರಕಲಾದ ಆನೆ ತರಡಿನ ಮರದ ಕೊಂಬೆಗಳಂತೆ ಅಲ್ಲಲ್ಲಿ ಕಾಣಸಿಗುತ್ತಾರೆ. ಸಂಜೆ ವೇಳೆ ಬಿಡಾರಗಳ ಹತ್ತಿರ ಫುಲ್‌ಬಾಟ್ಳಿ ವೋಡ್ಕಾ ಹೀರುತಾ, ಕೀಳು ಅಭಿರುಚಿಯ ಸಿನಿಮಾ ಹಾಡುಗಳನ್ನು ಆಲಿಸುತಾ, […]

#ಕವಿತೆ

ನಿರ್ಭಾಗ್ಯ ಸುಂದರಿ

0

ಆ ಬಿಳಿಹೂಗಳ ಚಿಲುಮೆಯಲಿ ಶ್ವೇತ ಸುಂದರಿ, ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ. ನಿನ್ನ ಸ್ತನಗಳ ಉಬ್ಬರ ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು ಹಿಂಗಿಸಿಕೊಳ್ಳಲಾರದೇ? ಕೆಂಪುರಕ್ತ ಕಕ್ಕುವ ಗೂಳಿಗಳೆದುರು ನಿನ್ನ ನೆನಪು ಶಿಖರದಂತೆ ಬೆಳೆಯತೊಡಗುತ್ತದೆ. ನನ್ನ ನಿರ್ಭಾಗ್ಯ ಸುಂದರಿ, ಸದಾಕಾಲ ನಿನ್ನನ್ನು ಪ್ರೀತಿಸ ಬಯಸುತ್ತೇನೆ; ಸತ್ತ ಮೇಲೆ ಆ ಹೆಣದ ವಾಸನೆಯಲ್ಲೂ ನಿನ್ನ ನಶೆಯಿಲ್ಲದಿದ್ದರೆ ಕೇಳು. *****

#ಕವಿತೆ

ಜೆಟ್ ವಿಮಾನಗಳು

0

  ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ. ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು, ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ. ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ ನೀಲಗಿರಿ ಕಾಡು ಹೊಕ್ಕುವುದನ್ನು ದಿಟ್ಟಿಸುತ್ತಾ ನಿಂತಿರುತ್ತೇನೆ. ಅಲ್ಲಿ ಅವಳು ಮೂಡಿಬರುತ್ತಾಳೇನೊ ಎಂಬ ಹುಚ್ಚು ಕನಸು; ಸಾವು. ಮತ್ತೆ ಆ ಹಕ್ಕಿಗಳು ಜೆಟ್ ವಿಮಾನಗಳಂತೆ […]

#ಕವಿತೆ

ದೊಂಬರ ಹುಡುಗಿ

0

  ಹತೋಟಿ ತಪ್ಪದಿರಲು ಉದ್ದನೆಯ ಬೊಂಬು ಹಿಡಿದು ಹಗ್ಗದ ಮೇಲೆ ನಡೆಯುತ್ತಾಳೆ. ಅವಳಿನ್ನೂ ವಯಸ್ಸಿಗೆ ಬಂದಿಲ್ಲ, ಅದಕ್ಕೆ ಇಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದಾಳೇನೊ? ನಾನು ಸೈಬರ್ ಕೆಫೆ ತಿರುವಿಗೆ ಬೀಳುತ್ತಿದ್ದಂತೆ- ಆ ಹದ್ದಿನ ಕಣ್ಣುಗಳ ನನ್ನ ಜಾತಿಯ ಹುಡುಗರು ಆ ಹುಡುಗಿಯನ್ನು ಕಾಂತಿಯುತವಾಗಿಡಲು ಶ್ರಮಿಸತೊಡಗುತ್ತಾರೆ ರೋಗದ ಗಂಡಸರು ಆಯತಪ್ಪಿ ಬೀಳುವುದು ನಡಿದೇ ಇರುತ್ತದೆ, ದೊಂಬರ ಹುಡುಗಿ ನೆಲಕ್ಕೆ […]

#ಕವಿತೆ

ಕ್ರಿಮಿನಲ್ ಹೆಣ್ಣು

0

ದಡ್ಡಿಯೆಂದು, ವಿಲಕ್ಷಣ ಸುಂದರಿಯೆಂದು ಅವಳನ್ನು ಅಗ್ಗವಾಗಿ ಸವಿಯಲು ಯತ್ನಿಸದಿರಿ. ಅವಳಲ್ಲಿ ಹಿಂದಿನ ನನ್ನ ಕಳಂಕರಹಿತ ಮನಸ್ಸು, ಸೋಲಿಲ್ಲದ ಮುಖವಿದೆ; ಮತ್ತು ಕೊಲೆಗೈಯ್ಯಬಹುದಾದ ಎಲ್ಲ ಲಕ್ಷಣಗಳಿರುವ ನನ್ನ ಈಗಿನ ಕ್ರಿಮಿನಲ್ ಬುದ್ಧಿಯೂ ಇರುತ್ತದೆ. *****