ಹತೋಟಿ ತಪ್ಪದಿರಲು ಉದ್ದನೆಯ ಬೊಂಬು ಹಿಡಿದು
ಹಗ್ಗದ ಮೇಲೆ ನಡೆಯುತ್ತಾಳೆ.

ಅವಳಿನ್ನೂ ವಯಸ್ಸಿಗೆ ಬಂದಿಲ್ಲ,
ಅದಕ್ಕೆ ಇಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದಾಳೇನೊ?

ನಾನು ಸೈಬರ್ ಕೆಫೆ ತಿರುವಿಗೆ ಬೀಳುತ್ತಿದ್ದಂತೆ-
ಆ ಹದ್ದಿನ ಕಣ್ಣುಗಳ ನನ್ನ ಜಾತಿಯ ಹುಡುಗರು
ಆ ಹುಡುಗಿಯನ್ನು ಕಾಂತಿಯುತವಾಗಿಡಲು ಶ್ರಮಿಸತೊಡಗುತ್ತಾರೆ

ರೋಗದ ಗಂಡಸರು ಆಯತಪ್ಪಿ ಬೀಳುವುದು ನಡಿದೇ ಇರುತ್ತದೆ,
ದೊಂಬರ ಹುಡುಗಿ ನೆಲಕ್ಕೆ ಜಿಗಿದವಳೇ,
ತನ್ನ ಚಿಂದಿಬಟ್ಟೆಯಿಂದ ಭಿಕ್ಷೆ ತುಂಬಿಸಿಕೊಳ್ಳಲು ಅನುವಾಗುವಳು.
*****

Latest posts by ಮಂಜುನಾಥ ವಿ ಎಂ (see all)