ಇಂದು ಏಕಾದಶಿ ವ್ರತವ ತೀರಿಸಿದೆ

ಇಂದು ಏಕಾದಶಿ ವ್ರತವ ತೀರಿಸಿದೆ
ಶ್ರೀ ಗುರುನಾಥನುಪದೇಶ ಬಲದಿಂದ ||ಪ||

ಹೊಂದಿದೆನು ದ್ವಿತೀಯ ಸಂಧ್ಯಾವಂದನೆಯ ಕಾಲದಲಿ
ಬಂಧುರ ಬಯಲು ಬ್ರಹ್ಮಾನಂದದಲಿ ||೧||

ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ
ನಿಟಾದ ವೃಂದಾವನವ ವಿವಾಹದ್ವಾದಶಿ ನಾಳೆ ನೋಡೆ
ತ್ರಿಕೂಟದ ಜೋತಿ ಬೆಳಕಿನೊಳುಸುರಿದೆ ||೨||

ಭೂಮಿಪ ಸಮಾನ ಮಾಮಲೇದೇಶಪಾಂಡೆ
ರಾಮರಾವಜಿ ನೀನು ಜ್ಞಾನದಿಂ ತಿಳಿದೇ ||೩||

ಸೀಮೆಯೊಳು ಶಿಶುನಾಳಧೀಶನೊರವಿಲೆ ಬಂದು
ನೇಮಿಸಿರುವ ನಾಗನೂರೆಂಬಸ್ಥಲದಿ ನಿಂದು ||೪||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಲೆಯ ನೋಡಿದಿಯಾ ಸರಕಾರದ
Next post ನರರ ಕರ್ಮಕೆ ತಕ್ಕ ದಿನ ಬಂತು

ಸಣ್ಣ ಕತೆ

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…