ಸಾಲೆಯ ನೋಡಿದಿಯಾ ಸರಕಾರದ

ಸಾಲೆಯ ನೋಡಿದಿಯಾ ಸರಕಾರದ
ಸಾಲೆಯ ನೋಡಿದಿಯಾ ||ಪ||

ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣಿಸುವದು ಭೂಲೋಕದಲ್ಲಿ ||ಅ.ಪ.||

ಕುಂಭ ಆರು ಮಧ್ಯದಿ
ತುಂಬಿರುವ ಒಂಭತ್ತು ದ್ವಾರದಲಿ
ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ
ನಂಬಿಕೊಂಡು ನಿಜ ಅಕ್ಷರ ಕಲಿಸುವ ||೧||

ಪಶ್ಚಿಮ ಬಾಗಿಲಕೆ
ಗಚ್ಚಿನ ಕೆಲ್ಸಾ ಹೆಚ್ಚಿನ ದೇಗುಲಕೆ
ಸ್ವಚ್ಚ ಪೂರ್ವೋತ್ತರ ದಕ್ಷಿಣ ದ್ವಾರದಿ
ಉಚ್ಚರಿಸುವ ತತ್ವಾಂಕಿತ ಸಾರದ ||೨||

ಮೋಜಿಲಿಂದಿರುವ ಮಾಸ್ತಾರಾ
ರಾಜಿತಮಾದ ಸಹಜ ಶಿಕ್ಷಣ ವಿಸ್ತಾರಾ
ಸೋಜಿಗವೆನಿಪ ಶ್ರೀ ಗುಡಿಪುರ ಗ್ರಾಮದಿ
ರಾಜ ಶಿಶುನಾಳಧೀಶನ ದಯದಿಂದ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದೊಳಗಣ ಕಿಚ್ಚು
Next post ಇಂದು ಏಕಾದಶಿ ವ್ರತವ ತೀರಿಸಿದೆ

ಸಣ್ಣ ಕತೆ

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…