ಗುಡಗುಡಿಯನು ಸೇದಿನೋಡೋ

ಗುಡಗುಡಿಯನು ಸೇದಿನೋಡೋ ನಿನ್ನ
ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ||

ಮನಸೆಂಬ ಚಂಚಿಯ ಬಿಚ್ಚಿ ದಿನ-
ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ
ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ
ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ ||೧||

ಬುರುಡಿಯೆಂಬುವದು ಶರೀರಾ ಇದು
ಮರೆತು ಸುಕೃತ ಬಿಟ್ಟು ಕೊಳವಿಯಾಕಾರಾ
ವರನಾರಾಯಣನೆಂಬೋ ನೀರಾ ತುಂಬಿ
ಅರವೆಂಬ ಅರುವೀಯ ಹೊಚ್ಚೋ ಮೋಜುಗಾರಾ ||೨||

ಶುದ್ಧಜ್ಞಾನವು ಮೇಲೇರುವದು
ದಾರಿದ್ರ್ಯ ದೇಹವು ಸುಟ್ಟು ಹೋಯ್ತು ಹಾರವದು
ಬುದ್ಧವಂತರಿಗೆ ತಿಳಿಯುವದು ನಮ್ಮ
ಮುದ್ದು ಚಿದಾನಂದ ಪಾದಕ್ಹೊಂದುವದು ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಚಿಯಾಗಿರಬೇಕೊ
Next post ಮನದೊಳಗಣ ಕಿಚ್ಚು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…